ಹೈದರಾಬಾದ್: ಇನ್ಸಟಾದಲ್ಲಿ ಮುಳುಗಿದ್ದಾಗ ತಾಯಿ ಒಂದು ಸಣ್ಣ ಕೆಲಸ ಹೇಳಿದರೆ, ಸಿಡಿಮಿಡಿ ಉಂಟಾಗುತ್ತದೆ. ಅಲ್ಲದೇ, ಇಷ್ಟು ಕೆಲಸ ಮಾಡಲು ನನ್ನ ಕರೆಯಬೇಕಾ ಎಂಬ ಅಸಮಾಧಾನ ಮೂಡುತ್ತದೆ. ಅದೇ ರೀತಿ ಸಾಕಷ್ಟು ಕೆಲಸ ಮಾಡಲು ಇದ್ದಾಗ ಇದನ್ನೂ ಆರಾಮವಾಗಿ ಮುಗಿಸಬಹುದು ಎಂದುಕೊಳ್ಳುತ್ತೇವೆ. ಈ ವೇಳೆ ಮೆದುಳು ಒಂದು ಸಣ್ಣ ಬ್ರೇಕ್ ಕೇಳುತ್ತದೆ. ತಕ್ಷಣಕ್ಕೆ ಫೋನ್ ಇಡಿದು, ಸ್ಕ್ರಾಲ್ ಮಾಡಲು ಮುಂದಾಗುತ್ತೀರಾ. ಹೀಗೆ ಮಾಡುತ್ತಾ ಸಮಯ ಕಳೆದು ಹೋಗುವುದು ತಿಳಿಯದು. ಈ ವೇಳೆ ಕೆಲಸ ದೊಡ್ಡ ಶಿಖರದಂತೆ ಕಾಣುತ್ತದೆ. ಈ ವೇಳೆ ಅನಗತ್ಯವಾಗಿ ಫೋನ್ನಲ್ಲಿ ಕಾಲ ಕಳೆದೆ ಎಂದು ಹಲುಬುವಂತೆ ಆಗುತ್ತದೆ.
ಇದು ಮಾತ್ರವಲ್ಲ, ಒಂದು ನೋಟಿಫಿಕೇಷನ್ ಬಂದರೂ, ಅಥವಾ ಪದೇ ಪದೇ ಸ್ಕ್ರೀನ್ ಅನ್ನು ಓಪನ್ ಮಾಡುವುದು. ಆ್ಯಪ್ಸ್ ತೆಗೆದು ನೋಡುವ ಲಕ್ಷಣವೇ ಪಾಪ್ ಕಾರ್ನ್ ಬ್ರೈನ್ ಅಭಿವೃದ್ಧಿಗೆ ಕಾರಣವಾಗುತ್ತದೆ.
ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿರುವ ಈ ಪಾಪ್ಕಾರ್ನ್ ಬ್ರೈನ್ ಎಂಬುದು ವ್ಯಕ್ತಿಯ ಅರಿವಿನ ಪರಿಸ್ಥಿತಿಯ ಕುರಿತು ತಿಳಿಸುತ್ತದೆ. ಅಂದರೆ ಪಾಪ್ಕಾರ್ನ್ ಹೇಗೆ ಒಂದು ಕ್ಷಣ ನಿಲ್ಲದೇ ಮೇಲಿಂದ ಮೇಲೆ ಹಾರುತ್ತದೆ. ಹಾಗೇ ಮನಸು ಕೂಡ ಬೇಗ ವಿಚಲಿತಗೊಳ್ಳುತ್ತದೆ. ಒಂದು ವಿಷಯದ ಕುರಿತು ವ್ಯಕ್ತಿ ಗಮನಹರಿಸಲು ಸಾಧ್ಯವಾಗದೇ, ಪದೇ ಪದೇ ಫೋನ್ ಚಟಕ್ಕೆ ಅಂಟಿಕೊಳ್ಳುತ್ತೆ. ಮಾನಸಿಕ ಸ್ಥಿತಿಯನ್ನು ಇದು ತೋರಿಸುತ್ತದೆ.
ಅಧ್ಯಯನಗಳ ಪ್ರಕಾರ, ಈ ಪಾಪ್ಕಾರ್ನ್ ಬ್ರೈನ್ಗೆ ಅತಿ ಹೆಚ್ಚು ಒಳಗಾಗುವವರು ಮಕ್ಕಳು ಮತ್ತು ಯುವತಿಯರು. ಇವರಲ್ಲಿ ಆತಂಕ ಹೆಚ್ಚಿದ್ದು, ಯಾರನ್ನು ಭೇಟಿಯಾಗುವ ಮತ್ತು ಮಾತನಾಡುವ ಇಚ್ಛೆ ಇರುವುದಿಲ್ಲ. ಜೊತೆಗೆ ಕ್ಷುಲ್ಲಕ ಕೆಲಸ ಹೇಳಿದರೂ ಇವರಲ್ಲಿ ಸಿಟ್ಟು, ಕಿರಿಕಿರಿ ಅನುಭವ ಉಂಟಾಗುತ್ತದೆ. ವಯಸ್ಕರಲ್ಲಿ ಈ ಸಮಸ್ಯೆ ಹೊಂದಿರುವರಲ್ಲಿ ಗಮನ ಹರಿಸುವಿಕೆ ಕೊರತೆ, ಮಕ್ಕಳ ಮೇಲೆ ಸಿಟ್ಟು, ಸರಿಯಾದ ನಿದ್ರೆಯ ಕೊರತೆ ಕಾಣಬಹುದು.
ಮೆದುಳು ಯಾಕೆ ಹೀಗೆ: ಫೋನ್ನಿಂದ ಹೊರ ಹೊಮ್ಮುವ ಶಬ್ಧ ಮತ್ತು ನೀಲಿ ಬೆಳಕಿಗೆ ಮೆದುಳು ಆಕರ್ಷಣೆಗೆ ಒಳಗಾಗುತ್ತದೆ. ಕೇವಲ ಶಬ್ಧಕ್ಕೆ ಮಾತ್ರವಲ್ಲ. ಇದಾದ ಮೇಲೆ ಮುಗಿಸುವ ಎಂದುಕೊಳ್ಳುತ್ತಾ ಸ್ಕ್ರಾಲ್ ಮಾಡುವಾಗ ಮತ್ತಷ್ಟು ಉತ್ಸಾಹ ತರುವಂತೆ ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಇದು ಉತ್ತಡ ನಿವಾರಿಸಿ, ಖುಷಿಯಾಗಿರಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ನಾವು ಭ್ರಮೆಯ ಮೂಲಕವೇ ಕಾಯಿಲೆಗಳಿಗೆ ಆಹ್ವಾನ ನೀಡುತ್ತ ನೆಮ್ಮದಿ ಕಾಣುತ್ತೇವೆ.