ಕರ್ನಾಟಕ

karnataka

ETV Bharat / health

ಶೇ 54ರಷ್ಟು ಪೋಷಕರಿಗೆ ಮಕ್ಕಳು ಥಟ್​ ಅಂತ ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲ! - Parents Struggle To Answer Children - PARENTS STRUGGLE TO ANSWER CHILDREN

ಶೇ 52ರಷ್ಟು ಪೋಷಕರು ತಮ್ಮ ಮಕ್ಕಳ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಹೋದಾಗ ತಂತ್ರಜ್ಞಾನದ ನೆರವು ಪಡೆಯುವುದಾಗಿ ತಿಳಿಸಿದ್ದಾರೆ.

parents faces Dificulties to answering their childrens questions
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 12, 2024, 4:46 PM IST

ನವದೆಹಲಿ: ಮಕ್ಕಳಲ್ಲಿ ಕುತೂಹಲ ಸಹಜ. ಹೀಗಾಗಿ ಅವರು ಥಟ್​ ಎಂದು ಪ್ರಶ್ನಿಸುತ್ತಿರುತ್ತಾರೆ. ಆದರೆ, ಇಂಥ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಬಹುತೇಕ ಪೋಷಕರು ತಡಕಾಡುತ್ತಿದ್ದಾರೆ. ಈ ಕುರಿತು ಇತ್ತೀಚಿಗೆ ಅಮೆಜಾನ್​ ಅಲೆಕ್ಸ್​​ ಮತ್ತು ಕಂತರ್​ ಶೆಡ್ಸ್​ ಲೈಟ್ಸ್​​ ಸಮೀಕ್ಷೆ ನಡೆಸಿದೆ.

ಜೂನ್​ 2024ರಂದು ದೇಶದ ಆರು ನಗರಗಳಲ್ಲಿ 750 ಪೋಷಕರನ್ನು ಸಮೀಕ್ಷೆಗಾಗಿ ಒಳಪಡಿಸಲಾಗಿದೆ. ಇದರಲ್ಲಿ ಶೇ 54ರಷ್ಟು ಪೋಷಕರು ತಮ್ಮ ಮಕ್ಕಳು ಥಟ್‌​​ ಅಂತ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟಪಡುವುದಾಗಿ ಹೇಳಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ತಂತ್ರಜ್ಞಾನವನ್ನು ಬಳಸುತ್ತಿರುವುದಾಗಿಯೂ ತಿಳಿಸಿದ್ದಾರೆ.

ಸಮೀಕ್ಷೆಯ ಪ್ರಕಾರ, ಶೇ 52ರಷ್ಟು ಪೋಷಕರು ಮಕ್ಕಳ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ದಾಗ ತಂತ್ರಜ್ಞಾನದ ನೆರವು ಪಡೆಯುತ್ತಿದ್ದಾರೆ. ಶೇ 44ರಷ್ಟು ಮಂದಿ ತಮ್ಮ ಉತ್ತರವನ್ನು ಸುಧಾರಿಸುವುದಾಗಿಯೂ ಒಪ್ಪಿಕೊಂಡಿದ್ದಾರೆ. ಶೇ 3ರಷ್ಟು ಪೋಷಕರು ಪ್ರಶ್ನೆಗಳನ್ನು ನಿರ್ಲಕ್ಷ್ಯಿಸಿ, ಉತ್ತರ ನೀಡುವ ಬದಲಾಗಿ ವಿಷಯವನ್ನೇ ಬದಲಾಯಿಸುವುದಾಗಿ ಹೇಳಿದ್ದಾರೆ. ಶೇ 63ರಷ್ಟು ಪೋಷಕರು ಟಿವಿ ವೀಕ್ಷಣೆಯ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳಲ್ಲಿ ಓದುವ ಕುರಿತು ಶೇ 57ರಷ್ಟು, ಅಧ್ಯಯನ ಕುರಿತು ಶೇ 56ರಷ್ಟು, ಹೊರಾಂಗಣ ಚಟುವಟಿಕೆಯ ಕುರಿತು ಶೇ 55ರಷ್ಟು, ದೊಡ್ಡವರ ಮಾತುಕತೆಯ ವೇಳೆ ಶೇ 50ರಷ್ಟು ಕುತೂಹಲ ಹೊಂದಿರುವುದಾಗಿ ಹೇಳಿದ್ದಾರೆ.

ಅದರಲ್ಲೂ ಆಹಾರ, ಪ್ರಾಣಿ, ಪ್ರಕೃತಿ, ಸಾಮಾನ್ಯ ಜ್ಞಾನ, ರಜೆ, ತಂತ್ರಜ್ಞಾನ ಮತ್ತು ಚಿತ್ರಗಳ ಕುರಿತು ಹೆಚ್ಚು ಪ್ರಶ್ನಿಸುತ್ತಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ತಂತ್ರಜ್ಞಾನ ಪ್ರಮುಖ ಸಾಧನವಾಗಿ ಹೊರ ಹೊಮ್ಮಿದೆ. ಶೇ 80ರಷ್ಟು ಪೋಷಕರು ಇದನ್ನು ಬಳಕೆ ಮಾಡಿಕೊಂಡು, ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ಅಧ್ಯಯನದಿಂದ ಗೊತ್ತಾಗಿದೆ.

ಮಕ್ಕಳು ಸಾಕಷ್ಟು ಕುತೂಹಲ ಹೊಂದಿದ್ದಾರೆ. ವಿಶಾಲ ಶ್ರೇಣಿಯ ವಿಷಯದ ಕುರಿತು ಅಲೆಕ್ಸಾ ಉತ್ತರ ನೀಡುತ್ತದೆ ಎಂದು ಅಮೆಜಾನ್​ ಇಂಡಿಯಾದ ಅಲೆಕ್ಸಾ ಕೌಂಟರ್​ ಮ್ಯಾನೇಜರ್​​ ದೀಲಿಪ್​ ಆರ್.​ಎಸ್.​ ತಿಳಿಸಿದ್ದಾರೆ. ಈ ಎಲ್ಲಾ ಸವಾಲುಗಳ ನಡುವೆ ಶೇ 90ರಷ್ಟು ಪೋಷಕರು ಮಕ್ಕಳು ಅವರ ಬೆಳವಣಿಗೆ ಮತ್ತು ಕಲಿಕೆಗೆ ಸಹಾಯವಾಗಲು ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸುತ್ತಾರೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬಂದ ಅಂಶ. (ಎಎನ್​ಐ)

ಇದನ್ನೂ ಓದಿ:ಜನರನ್ನು ಆತಂಕಕ್ಕೆ ದೂಡುತ್ತಿವೆ ಸ್ಮಾರ್ಟ್​ವಾಚ್​ನಂತಹ ಸಾಧನಗಳು

ABOUT THE AUTHOR

...view details