ಕರ್ನಾಟಕ

karnataka

ETV Bharat / health

ಎಂಟರಲ್ಲಿ ಒಬ್ಬ ಪೋಷಕರು ಮಕ್ಕಳು ಊಟದ ತಟ್ಟೆ ಖಾಲಿ ಮಾಡಬೇಕು ಎಂದೇ ಬಯಸುತ್ತಾರೆ; ಅಧ್ಯಯನ - Child eating habbit

ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡುವ ಪೋಷಕರು ಅದನ್ನೆಲ್ಲ ಅವರು ತಿಂದು ಮುಗಿಸಬೇಕು ಎಂದು ಬಯಸುತ್ತಾರೆ.

one in eight parents requires their children to eat everything on their plate
one in eight parents requires their children to eat everything on their plate

By IANS

Published : Apr 23, 2024, 12:14 PM IST

ಸಾನ್​ ಫ್ರಾನ್ಸಿಸ್ಕೋ: ಪ್ರಿ ಸ್ಕೂಲ್​ ಅಂದರೆ ನರ್ಸರಿ ಕಲಿಯುತ್ತಿರುವ ತಮ್ಮ ಮಕ್ಕಳಿಗೆ ಸಮತೋಲಿತ ಅಥವಾ ಪೌಷ್ಟಿಕಯುಕ್ತ ಆಹಾರವನ್ನು ನೀಡುವ ಗುರಿ ಹೊಂದಿರುತ್ತಾರೆ. ಇದಕ್ಕಾಗಿ ಅವರಿಗೆ ಪೂರಕವಾದ ಆಹಾರ ನೀಡುವ ಜೊತೆಗೆ ಎಂಟರಲ್ಲಿ ಒಬ್ಬರು ತಮ್ಮ ಮಕ್ಕಳು ತಟ್ಟೆಯಲ್ಲಿ ಇರುವುದನ್ನು ಎಲ್ಲ ತಿಂದು ಮುಗಿಸಬೇಕು ಎಂದು ಬಯಸುತ್ತಾರೆ ಎಂಬ ವಿಚಾರ ಹೊಸ ಅಧ್ಯಯನದಲ್ಲಿ ಬಯಲಾಗಿದೆ.

ಅಮೆರಿಕ ಮೂಲದ ಮಿಚಿಗನ್​ ಯುನಿವರ್ಸಿಟಿ ಈ ಸಂಶೋಧನೆ ನಡೆಸಿದೆ. ಮಕ್ಕಳಿಗೆ ನೀಡುವ ಪೌಷ್ಠಿಕಾಂಶದ ಮೌಲ್ಯದಲ್ಲಿ ಮೆಡಿಟರೇನಿಯನ್ ಡಯಟ್​ ಅನ್ನು ಅರ್ಧದಷ್ಟು ಪೋಷಕರು ಒಪ್ಪಿದರೂ, ಮೂವರಲ್ಲಿ ಒಬ್ಬರು ಅಮೆರಿಕದ ಪ್ರಮಾಣಿತ ಡಯಟ್​​ ಆರೋಗ್ಯಕರವಾಗಿದೆ ಎಂದು ನಂಬುತ್ತಾರೆ.

ಪೋಷಕರು ತಮ್ಮ ಮಕ್ಕಳು ತಟ್ಟೆಯಲ್ಲಿರುವ ಎಲ್ಲ ಆಹಾರವನ್ನು ಖಾಲಿ ಮಾಡಬೇಕು ಎಂದು ಒತ್ತಾಯಿಸಿದರೂ, ಅದಕ್ಕೂ ಮೀರಿ ಅಂದರೆ ಹೊಟ್ಟೆ ತುಂಬಿದ ಬಳಿಕವೂ ಮತ್ತಷ್ಟು ತಿನ್ನಬೇಕು ಎಂದು ಪ್ರೋತ್ಸಾಹ ನೀಡುವುದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ಮಿಚಿಗನ್​ ಯುನಿವರ್ಸಿಟಿಯ ಅಸಿಸ್ಟೆಂಟ್​ ಪ್ರೊಫೆಸರ್​ ಸುಸನ್​ ವುಲ್ಫೋರ್ಡ್​ ತಿಳಿಸಿದ್ದಾರೆ.

ಮಕ್ಕಳು ತಮ್ಮ ತಟ್ಟೆ ಖಾಲಿ ಮಾಡಿದ ಬಳಿಕವೂ ಅವರನ್ನು ತಿನ್ನುವಂತೆ ಒತ್ತಾಯಿಸುವುದು, ಅಧಿಕ ಆಹಾರ ಸೇವನೆಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳ ವಯಸ್ಸಿನಲ್ಲಿ ಇದು ಹೆಚ್ಚಿನ ಮಟ್ಟದ ತೂಕ ಹೊಂದಲು ಕಾರಣವಾಗಬಹುದು ಎಂದಿದ್ದಾರೆ. ಈ ಅಧ್ಯಯನಕ್ಕಾಗಿ 3- 10 ವರ್ಷದ 1,083 ಮಕ್ಕಳನ್ನ ಬಳಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಶೇ 60ರಷ್ಟು ಪೋಷಕರು ತಮ್ಮ ಮಕ್ಕಳು ಆಹಾರವನ್ನು ಇಷ್ಟಪಡದೇ ಹೋದಾಗ, ಕಡಿಮೆ ಆರೋಗ್ಯಕರ ಎಂದು ಕಂಡು ಬಂದಾಗ ವಿಶೇಷವಾಗಿ ಪ್ರತ್ಯೇಕ ಅಡುಗೆ ತಯಾರಿಸುತ್ತಾರೆ.

ಮಕ್ಕಳಿಗೆ ಪರ್ಯಯಾ ಅಡುಗೆ ಆಯ್ಕೆ ಮಾಡುವ ಬದಲಾಗಿ ಪೋಷಕರು ಅವರ ಆಹಾರದಲ್ಲಿ ಮಕ್ಕಳು ಇಷ್ಟಪಟ್ಟು ತಿನ್ನುವಂತ ಒಂದು ಆಯ್ಕೆಯೊಂದಿಗೆ ಸಮತೋಲಿತ ಆಹಾರ ತಯಾರಿಸಬಹುದು. ಒಂದು ವೇಳೆ ಮಗು ತಿನ್ನಲು ಇಷ್ಟಪಡದೇ ಹೋದರೆ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಹಾನಿ ಮಾಡುವುದಿಲ್ಲ. ಮುಂದಿನ ಊಟದಲ್ಲಿ ಅವರು ಅದನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ ಎಂದಿದ್ದಾರೆ.

ಇದೇ ವೇಳೆ, ಸಂಶೋಧಕರು ಮಕ್ಕಳಿಗೆ ಊಟದ ಮಧ್ಯದಲ್ಲಿ ಸ್ನಾಕ್ಸ್​​ ನೀಡುವುದನ್ನು ನಿಲ್ಲಿಸುವಂತೆ ಶಿಫಾರಸು ಮಾಡುತ್ತಾರೆ. ಕಾರಣ ಇದರಿಂದ ಮಕ್ಕಳ ಹಸಿವೆ ಹೆಚ್ಚಿ, ಅವರು ನೀಡುವ ಆಹಾರವನ್ನು ತಿನ್ನಲು ಆಸಕ್ತಿ ತೋರಿಸುತ್ತಾರೆ.

ಇದನ್ನೂ ಓದಿ: ಊಟವಾದ ಬಳಿಕವೂ ತಡ ರಾತ್ರಿ ಐಸ್​ಕ್ರೀಂ, ಚಾಕೊಲೇಟ್​ ತಿನ್ನಬೇಕು ಅನ್ನಿಸುವುದಕ್ಕೆ ಕಾರಣವೇನು?: ಇಲ್ಲಿದೆ ರಹಸ್ಯ

ABOUT THE AUTHOR

...view details