ಹೈದರಾಬಾದ್:ಪ್ರತಿಯೊಬ್ಬರು ಆರೋಗ್ಯಯುತವಾಗಿರಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ಸಮತೋಲಿತ ಆಹಾರ ಸೇವನೆ ಅಗತ್ಯವಾಗಿರುತ್ತದೆ. ಜೊತೆಗೆ ಅಗತ್ಯ ನಿದ್ರೆಯೂ ಅವಶ್ಯ. ಪೂರಕವಾಗಿ ದೈಹಿಕ ಚಟುವಟಿಕೆ ಮರೆಯಬಾರದು. ಇವೆಲ್ಲವನ್ನು ನಡೆಸಿದರೂ ಅನೇಕ ಬಾರಿ, ಅನೇಕ ಕಾರಣದಿಂದ ಕೆಲವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಪಡೆಯುವ ಚಿಕಿತ್ಸೆಗಳು ಅನೇಕ ಬಾರಿ ಪ್ರಯೋಜನವಾಗುವುದಿಲ್ಲ. ಆದರೆ, ಈ ಒಂದು ಪೌಡರ್ ನಿಮ್ಮೆಲ್ಲ ಆರೋಗ್ಯ ಸಮಸ್ಯೆಗೆ ಉತ್ತಮ ಆಗಬಲ್ಲದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಏನಿದು ಪುಡಿ, ಇದರಿಂದ ಯಾವ ಪ್ರಯೋಜನ ಇಲ್ಲಿದೆ ಅದೆಲ್ಲದರ ಸಂಪೂರ್ಣ ಮಾಹಿತಿ
ಈ ಪೌಡರ್ ಅನ್ನು ಸುಲಭವಾಗಿ ಮನೆಯಲ್ಲಿಯೇ ಪ್ರತಿಯೊಬ್ಬರು ತಯಾರಿಸಬಹುದಾಗಿದೆ. ಇದು ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಹೀಗಿವೆ.
ಕಡ್ಲೆಬೀಜ: ಇದು ಪ್ರೊಟೀನ್ ಸಮೃದ್ಧವಾಗಿದೆ. ಇದರ ಹೊರತಾಗಿ ಮೊನೊ ಪಾಲಿ ಅಪಾರ್ಯಾಪ್ತ ಕೊಬ್ಬುಗಳು ಇದೆ. ಇವು ದೇಹಕ್ಕೆ ಬೇಕಾದ ಪೋಷಕಾಂಶಗಳು ನೀಡುತ್ತದೆ. ಇದು ವಿಟಮಿನ್ ಇ, ಬಿ1, ಬಿ3, ಬಿ9, ಮೆಗ್ನಿಷಿಯಂ, ಫಾಸ್ಪಾರಸ್ ಮತ್ತು ತಾಮ್ರದಂತಹ ಖನಿಜಾಂಶಗಳಿಂದ ಸಮೃದ್ಧವಾಗಿದೆ.
ಕೆಂಪು ಅಕ್ಕಿ: ಇದು ಕೂಡ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಇದನ್ನು ಆಯುರ್ವೇದದಲ್ಲಿ ಅನೇಕ ಔಷಧಕ್ಕೆ ಬಳಕೆ ಮಾಡಲಾಗುವುದು. ಇದು ಕ್ಯಾಲ್ಸಿಯಂ, ವಿಟಮಿನ್ ಬಿ, ಫೈಬರ್, ಕಬ್ಬಿಣ ಮತ್ತು ಮೆಗ್ನಿಶಿಯಂನ ಗುಣಗಳನ್ನು ಹೊಂದಿದೆ.
ಬೆಲ್ಲ: ಇದು ಸಕ್ಕರೆಗಿಂತ ಆರೋಗ್ಯಯುತವಾಗಿದ್ದು, ಕಬ್ಬಿಣಾಂಶ ಹೆಚ್ಚಿರುತ್ತದೆ. ಇದು ಆಂಟಿ - ಆಕ್ಸಿಡೆಂಟ್, ವಿಟಮಿನ್ಸ್, ಖನಿಜಾಂಶವನ್ನು ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಎಳ್ಳು: ಇದು ಆರೋಗ್ಯಕರ ಪ್ರಯೋಜನ ಹೊಂದಿದೆ. ಇದರಲ್ಲಿ ಒಮೆಗಾ 6, ಕ್ಯಾಲ್ಸಿಯಂ, ಮೆಗ್ನಿಶಿಯಂ, ಫಾಸ್ಪರಸ್, ಕಬ್ಬಿಣ, ವಿಟಮಿನ್ ಬಿ ಮತ್ತು ಒ ಹೊಂದಿದ್ದು, ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಕೊಬ್ಬರಿ: ಇದರಲ್ಲಿ ಫೈಬರ್, ಮೆಗ್ನಿಶಿಯಂ, ಪೋಟಾಶಿಯಂ, ಕಬ್ಬಿಣ, ವಿಟಮಿನ್ ಸಿ ಮತ್ತು ಆರೋಗ್ಯಯುತ ಕೊಬ್ಬು ಹೊಂದಿರುತ್ತದೆ.
ಹೇಗೆ ರೆಡಿ ಮಾಡುವುದು:ಮೊದಲಿಗೆ ಅಕ್ಕಿ, ಎಳ್ಳಿನ ಬೀಜ, ಕಡಲೇ ಬೀಜವನ್ನು ಹುರಿದು ಪಕ್ಕದಲ್ಲಿಡಿ. ಅದು ತಣ್ಣಗಾದ ಬಳಿಕ ಅದಕ್ಕೆ ಬೆಲ್ಲ, ಕೊಬ್ಬರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರುಬ್ಬಿ. ಇದನ್ನು ಬಿಗಿ ಡಬ್ಬದಲ್ಲಿ ಶೇಖರಣೆ ಮಾಡಿ, ದಿನಕ್ಕೆ ಒಂದು ಚಮಚ ಸೇವಿಸುತ್ತ ಬನ್ನಿ.