ಕರ್ನಾಟಕ

karnataka

ಮತ್ತೆ ನಿಫಾ ಆತಂಕ: ಅಪಾಯಕಾರಿ ಸೋಂಕಿನ ಬಗ್ಗೆ ತಿಳಿಯಲೇಬೇಕಾದ ಮಾಹಿತಿ ಇದು - nipah FEAR AGIAN IN KERALA

By ETV Bharat Karnataka Team

Published : Jul 30, 2024, 3:45 PM IST

2018ರಲ್ಲಿ ಭಾರತದಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತು. ಇದಾದ ಬಳಿಕ 2021 ಮತ್ತು 2023ರಲ್ಲಿ ಸೋಂಕು ದಾಖಲಾಗಿದೆ. ಈ ಸೋಂಕಿಗೆ ಕಾರಣ ಏನು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

nipah-fear-agian-in-kerala-must-know-things-on-viral-infection
sಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ಹೈದರಾಬಾದ್​: ಕಳೆದ ವರ್ಷ ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಸ್​ ಪ್ರಕರಣ ಮತ್ತೆ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ 14 ವರ್ಷದ ಬಾಲಕನ ಸಾವು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೃದಯಾಘಾತಕ್ಕೆ ಬಲಿಯಾಗಿದ್ದ ಈತ ನಿಫಾ ಸೋಂಕಿಗೆ ಒಳಗಾಗಿದ್ದ ಎನ್ನಲಾಗಿದೆ. ಮತ್ತೆ 60 ಜನರಲ್ಲಿ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಈ ನಿಫಾ ಸೋಂಕು ಹೇಗೆ ಹಾನಿ ಮಾಡುತ್ತದೆ.

ನಿಫಾ ಸೋಂಕಿನ ಮೂಲ ಬಾವುಲಿಗಳಾಗಿವೆ. ಪರಾಗ ಮತ್ತು ಮಕರಂದ ತಿನ್ನುವ ಬಾವಲಿಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸೋಂಕು ಹಂದಿ, ಹಸು ಮತ್ತು ಮಾನವರಿಗೆ ಹೇಗೆ ಈ ಸೋಂಕು ತಗುಲುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದಾಗ್ಯೂ ಬಾವಲಿಗಳ ಮೂತ್ರ ಮತ್ತು ಲಾಲಾರಸ ಸ್ಪರ್ಶಿಸುವ ಮೂಲಕ ಇದು ನೇರವಾಗಿ ಪ್ರಾಣಿಗಳು ಮತ್ತು ಮನುಷ್ಯರಿಗೆ ಸೋಂಕು ತರುತ್ತದೆ ಎಂದು ನಂಬಲಾಗಿದೆ. ಮನುಷ್ಯರು ಕೂಡ ಒಬ್ಬರಿಂದ ಒಬ್ಬರಿಗೆ ಸೋಂಕಿಗೆ ಒಳಗಾಗಬಹುದು

ಕೇರಳದಲ್ಲಿ ಆರು ವರ್ಷದ ಹಿಂದೆ ಕಲುಷಿತ ನೀರಿನಲ್ಲಿ ನಿಫಾ ವೈರಸ್​ ಸೋಂಕು ಕಾಣಿಸಿಕೊಂಡಿತು. ಸೋಂಕಿತ ಕುಟುಂಬಕ್ಕೆ ಸೇರಿದಂತಹ ಬಾವುಲಿಗಳು ಬಾವಿಯಲ್ಲಿ ಸಾವನ್ನಪ್ಪಿದವು. ಬಳಿಕ ಇದರ ಸಂಪರ್ಕಕ್ಕೆ ಒಳಗಾದ ಕುಟುಂಬಸ್ಥರಲ್ಲಿ ಕೂಡ ಸೋಂಕು ಕಾಣಿಸಿಕೊಂಡಿತು.

ಯಾಕೆ ಇದು ಅಪಾಯಕಾರಿ?: ನಿಫಾ ವೈರಸ್​ ಸಾಂಕ್ರಾಮಿಕವಾಗಿದೆ. ಈ ಸೋಂಕಿಗೆ ಒಳಗಾದ ಐದು ಅಥವಾ ಎರಡು ವಾರದ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ವೈರಸ್​ನ ಪ್ರಮುಖ ಸಮಸ್ಯೆ ಎಂದರೆ ಇದು ಗಂಭೀರ ಪ್ರಮಾಣದ ಮಿದುಳು ಊತಕ್ಕೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಸಾಮಾನ್ಯ ಶೀತದಂತಹ ಲಕ್ಷಣಗಳಾದ ಜ್ವರ, ತಲೆಸುತ್ತುವಿಕೆ ಮತ್ತು ಗಂಭೀರ ತಲೆನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಗೊಂದಲ ಮತ್ತು ಅಮಲಿನಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಒಂದೆರಡು ದಿನದಲ್ಲಿ ಕೋಮಾಗೆ ಜಾರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಮಾರಾಣಾಂತಿಕವಾಗಿದೆ. ನಿಫಾ ಸೋಂಕಿಗೆ ಒಳಗಾದವರಲ್ಲಿ ಸಾವಿನ ದರ ಶೇ 70ರಷ್ಟಿದೆ.

ವಿಶೇಷ ಚಿಕಿತ್ಸೆ ಇಲ್ಲ: ಪ್ರಸ್ತುತ ನಿಫಾ ವೈರಸ್​ಗೆ ಯಾವುದೇ ಲಸಿಕೆಗಳಿಲ್ಲ. ಈ ಸೋಂಕು ಶಮನಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವೈದ್ಯರು ಲಕ್ಷಣಗಳನ್ನು ಆಧರಿಸಿ, ಅದನ್ನು ತಗ್ಗಿಸಲು ಚಿಕಿತ್ಸೆಯನ್ನು ನೀಡುತ್ತಾರೆ. ಮತ್ತೊಂದು ಪ್ರಮುಖ ಅಂಶ ಎಂದರೆ, ನಿಫಾ ಸೋಂಕಿತರನ್ನು ಯಾವುದೇ ಸಂಪರ್ಕಕ್ಕೆ ಒಳಗಾಗದಂತೆ ಪ್ರತ್ಯೇಕವಾಗಿರಿಸಲಾಗುವುದು. ತಕ್ಷಣಕ್ಕೆ ಅವರನ್ನು ತುರ್ತು ಕೊಠಡಿಯಲ್ಲಿ ಚಿಕಿತ್ಸೆಗೆ ಒಳಪಡಿಸಿ, ಅವರ ಅಂಗಾಂಗ ಕಾರ್ಯಾಚರಣೆ ಪರೀಕ್ಷಿಸಿ, ತಕ್ಷಣಕ್ಕೆ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಸೋಂಕಿತರ ನಿಕಟ ಸಂಪರ್ಕಕ್ಕೆ ಒಳಗಾದವರನ್ನು ಪತ್ತೆ ಮಾಡಿ, ಪ್ರತ್ಯೇಕಿಸುವುದು ಅವಶ್ಯ ಆಗಿದೆ.

ಎಲ್ಲಿಂದ ಬಂತು?:1998ರಲ್ಲಿ ಮಲೇಷ್ಯಾದ ಸುಂಗೈ ನಿಫಾ ಎಂಬ ಗ್ರಾಮದಲ್ಲಿ ಈ ಸೋಂಕಿನ ಉದಯವಾಯಿತು. ಇದು ಹಲವರಲ್ಲಿ ಮಿದುಳಿನ ಊತಕ್ಕೆ ಕಾರಣವಾಯಿತು. ಮತ್ತೆ ಕೆಲವರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದಿತು. 2018ರಲ್ಲಿ ಭಾರತದಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತು. ಇದಾದ ಬಳಿಕ 2021 ಮತ್ತು 2023ರಲ್ಲಿ ಸೋಂಕು ದಾಖಲಾಗಿದೆ.

ಇದನ್ನೂ ಓದಿ: ನಿಫಾ ರೋಗಿಗೆ ಆರೈಕೆ ಮಾಡಿದ್ದ ಕಡಬದ ನರ್ಸ್‌ ಕೋಮಾ ಸ್ಥಿತಿಯಲ್ಲಿ; ಮಗನಿಗಾಗಿ ಸರ್ಕಾರದ ಮೊರೆ ಹೋದ ಪೋಷಕರು

ABOUT THE AUTHOR

...view details