ನವದೆಹಲಿ: ಹಣ್ಣು, ತರಕಾರಿ, ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವಂತಹ ಮೆಡಿಟರೇಯನ್ ಆಹಾರ ಪದ್ದತಿ ಒತ್ತಡವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಶೋಧನೆಯೊಂದು ಮಹತ್ವದ ಮಾಹಿತಿಯನ್ನು ನೀಡಿದೆ. ನ್ಯೂಯಾರ್ಕ್‌ನ ಸ್ಟೇಟ್ ಯೂನಿವರ್ಸಿಟಿಯ ಬಿಂಗ್‌ಹ್ಯಾಮ್‌ಟನ್ ವಿಶ್ವವಿದ್ಯಾನಿಲಯದ ತಂಡ ಈ ಅಧ್ಯಯನ ನಡೆಸಿದೆ. ಪಾಶ್ಚಿಮಾತ್ಯ ಆಹಾರಗಳಿಗೆ ಹೋಲಿಕೆ ಮಾಡಿದರೆ, ಈ ಮೆಡಿಟರೇನಿಯನ್ ಆಹಾರ ಕ್ರಮ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಈ ತಂಡ ತಿಳಿಸಿದೆ.
ಒತ್ತಡವೂ ಮಾನಸಿಕ ಯಾತನೆಯ ಮುನ್ನುಡಿಯಾಗಿರಬಹುದು. ಮೆಡಿಟರೇನಿಯನ್ ಆಹಾರ ಕ್ರದ ಅನುಸರಿಸುವ ಮೂಲಕ ಈ ಒತ್ತಡವನ್ನು ಜನರು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾಣಬಹುದಾಗಿದೆ ಎಂದು ಅಸೋಸಿಯೇಟ್ ಪ್ರೊಫೆಸರ್ ಬೆಗ್ಡಾಚೆ ತಿಳಿಸಿದ್ದಾರೆ.
ಈ ಅಧ್ಯಯನವನ್ನು ನ್ಯೂಟ್ರಿಷಿಯನ್ ಅಂಡ್ ಹೆಲ್ತ್ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಮೆಡಿಟರೇನಿಯನ್ ಆಹಾರವೂ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ. ಈ ಆಹಾರ ಕ್ರಮದಿಂದ ಒತ್ತಡದ ನಕರಾತ್ಮಕ ಅಂಶಗಳು ಕಡಿಮೆ ಆಗಿರುವುದು ಅಧ್ಯಯನದಲ್ಲಿ ಬಯಲಾಗಿದೆ. ಸಕರಾತ್ಮಕ ಲಕ್ಷಣದ ಸುಧಾರಣೆ ಕಾಣಬಹುದಾಗಿದೆ ಅಂತಾ ಬೆಗ್ಡಾಚೆ.
ಮೆಡಿಟರೇನಿಯನ್ ಆಹಾರ ಸಸ್ಯಾಧಾರಿತ ಕೊಬ್ಬನ್ನು ಹೊಂದಿದೆ. ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಕಾಳುಗಳು, ಬೀಜಗಳು ಮತ್ತು ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆಯಿಂದ ಸಮೃದ್ಧವಾಗಿದೆ. ಮೀನು ಸಂಸ್ಕರಿಸಿದ ಮಾಂಸ, ಡೈರಿ ಉತ್ಪನ್ನಗಳು, ಪ್ರಾಣಿಗಳ ಕೊಬ್ಬು ಮತ್ತು ಸಂಸ್ಕರಿಸಿದ ಆಹಾರಗಳು ಇದರಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.