ಹೈದರಾಬಾದ್:ಕಾಫಿ ಕೇವಲ ಮನತಣಿಸುವ ಪಾನೀಯವಲ್ಲ. ಇದು ಮನಸ್ಥಿತಿ ನಿಭಾಯಿಸುವ, ಒತ್ತಡ ತಗ್ಗಿಸುವ ಉತ್ಸಾಹ ಹೆಚ್ಚಿಸುವ ಪೇಯವಾಗಿದೆ. ಇದೇ ಕಾರಣಕ್ಕೆ ಕಾಫಿ ಪ್ರಿಯರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಕಾಫಿ ಸೇವಿಸುವುದು ಸಹಜ. ಆದರೆ, ಇಂದಿನ ಪೀಳಿಗೆ ಜನ ಅವರಿಗೆ ಬೇಕಾದ ಸಮಯದಲ್ಲಿ ಕಾಫಿ ಹೀರುತ್ತಾರೆ. ಅದರಲ್ಲಂತೂ ಕೆಲವರು ಕಾಫಿ ಇಲ್ಲದೇ ದಿನವೇ ಆರಂಭಿಸುವುದಿಲ್ಲ. ಹಾಗಾದರೆ, ಈ ಕಾಫಿ ಕುಡಿಯಲು ಸರಿಯಾದ ಹೊತ್ತು ಯಾವುದು? ಯಾವಾಗ ಕುಡಿದ್ರೆ ಇದರಿಂದ ಪ್ರಯೋಜನ ಎಂದು ಯೋಚಿಸಿದ್ದೀರಾ?
ಈ ಸಮಯ ಅಪಾಯ: ತಜ್ಞರ ಪ್ರಕಾರ, ಬೆಳಗ್ಗೆ ಎದ್ದಾಕ್ಷಣ ಮೊದಲು ಕಾಫಿ ಸೇವಿಸುವುದು ಉತ್ತಮವಲ್ಲ. ಕಾರಣ ಈ ಬೆಳಗಿನ ಹೊತ್ತು ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಅಧಿಕವಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಸೇವಿಸುವುದರಿಂದ ಅದು ಕಾರ್ಟಿಸೋಲ್ ಉತ್ಪಾದನೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕಾರ್ಟಿಸೋಲ್ ವ್ಯಕ್ತಿಯನ್ನು ಎಚ್ಚರ ಮತ್ತು ಉತ್ಸಾಹದಿಂದ ಇರುಸುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಕಾಫಿ ಕಾರ್ಟಿಸೋಲ್ ಉತ್ಪಾದನೆ ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೇ, ದಿನವಿಡಿ ಕಾಫಿ ಕುಡಿಯಬೇಕು ಹಂಬಲವನ್ನು ಇದು ಹೆಚ್ಚಿಸುತ್ತದೆ.
ಇದು ಬೆಸ್ಟ್ ಟೈಮ್: ಬೆಳಗಿನ ದೈಹಿಕ ಮತ್ತು ಮಾನಸಿಕ ವ್ಯಾಯಾಮದ ಬಳಿಕ ಕಾಫಿ ಸೇವಿಸುವುದು ಉತ್ತಮ. ಇಲ್ಲ ಬೆಳಗ್ಗೆ ಎದ್ದು ಕನಿಷ್ಠ 90 ನಿಮಿಷವಾದ ಬಳಿಕ ಸವಿಯಿರಿ. ಬೆಳಗ್ಗೆ ಎದ್ದ 2 ಗಂಟೆ ಅವಧಿಯೊಳಗೆ ಕಾಫಿ ಸೇವಿಸದಿರುವುದು ಒಳ್ಳೆಯದು. ಇದಾದ ಬಳಿಕ ಸೇವನೆ ಮಾಡುವುದರಿಂದ ಮಧ್ಯಾಹ್ನದವರೆಗೆ ನೀವು ಕ್ರಿಯಾಶೀಲವಾಗಿರಬಹುದು. ಆದಾಗ್ಯೂ, ಕೆಲವು ತಜ್ಞರು ಹೇಳುವಂತೆ ವ್ಯಾಯಾಮಕ್ಕೆ ಮುನ್ನ ಕಾಫಿ ಸೇವನೆ ವರ್ಕೌಟ್ ಅನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.