ಟೆಲ್ ಆವಿವ್: ಕಳೆದೆರಡು ವರ್ಷದಿಂದ ಇಸ್ರೇಲ್ನಲ್ಲಿ ಆಟಿಸಂನಿಂದ ಬಳಲುತ್ತಿರುವ ಜನರ ಸಂಖ್ಯೆ ಶೇ.41ರಷ್ಟು ಏರಿಕೆ ಕಂಡಿದೆ ಎಂದು ಇಸ್ರೇಲ್ ಯೋಗಕ್ಷೇಮ ಮತ್ತು ಸಾಮಾಜಿಕ ಭದ್ರತೆ ಸಚಿವಾಲಯ ತಿಳಿಸಿದೆ. ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವಾಲಯ ಈ ಮಾಹಿತಿ ಬಿಡುಗಡೆ ಮಾಡಿದೆ.
ವರದಿಯಲ್ಲಿನ ದತ್ತಾಂಶ ತೋರಿಸುವಂತೆ, 2024ರ ಮೊದಲ ತ್ರೈಮಾಸಿಕದಲ್ಲಿ 30,876 ಜನರು ಆಟಿಸಂ ಸೇವೆ ಪಡೆಯುತ್ತಿದ್ದಾರೆ. 2022ರಲ್ಲಿ ಈ ಸಂಖ್ಯೆ 27,105 ಇದ್ದರೆ, 2021ರಲ್ಲಿ 22,231 ಆಗಿದೆ.
ಇಸ್ರೇಲ್ನಲ್ಲಿ 3ರಿಂದ 14 ವರ್ಷದ ವಯಸ್ಸಿನವರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಈ ಸೇವೆಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ 7,609 ಗಂಡು ಮತ್ತು 1,961 ಹೆಣ್ಣು ಮಕ್ಕಳಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವ ಹೆಚ್ಚಿನ ಮಂದಿ ಟೆಲ್ ಅವಿವಾ ಮತ್ತು ದಕ್ಷಿಣದಲ್ಲಿ ವಾಸಿಸುತ್ತಿದ್ದು, ದಕ್ಷಿಣದಲ್ಲಿ ಕಡಿಮೆ ಮಂದಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.