ಕರ್ನಾಟಕ

karnataka

ETV Bharat / health

ಭಾರತದಲ್ಲಿ ನಡೆಯಬೇಕಿದೆ ಕಾಂಡ ಕೋಶ ದಾನ; ರಕ್ತ ಸಂಬಂಧಿ ಸಮಸ್ಯೆಗಳಿಗೆ ಇದುವೇ ಪರಿಹಾರ - Stem Cell Donors - STEM CELL DONORS

ರಕ್ತದ ಕ್ಯಾನ್ಸರ್​ ಹಾಗು ರಕ್ತ ಸಂಬಂಧಿ ಇತರೆ ಸಮಸ್ಯೆಗಳಿಗೆ ಕಾಂಡ ಕೋಶ ದಾನ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

India is urgently in need of stem cell donors to fight blood cancer
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : May 28, 2024, 10:40 AM IST

ನವದೆಹಲಿ: ಭಾರತದಲ್ಲಿ ರಕ್ತದ ಕ್ಯಾನ್ಸರ್​ ಪ್ರಕರಣಗಳು ಹೆಚ್ಚುತ್ತಿವೆ. ಪ್ರತೀ ವರ್ಷ 70 ಸಾವಿರ ಮಂದಿ ಈ ರೋಗದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ರಕ್ತದ ಕ್ಯಾನ್ಸರ್​ ವಿರುದ್ಧ ಹೋರಾಡಲು ಕಾಂಡ ಕೋಶ (ಸ್ಟೆಮ್​ ಸೆಲ್​) ದಾನಿಗಳ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ವಿಶ್ವ ರಕ್ತ ಕ್ಯಾನ್ಸರ್​ ದಿನದ ಅಂಗವಾಗಿ ಮಾತನಾಡಿದ ಅವರು, "ಈ ಮಾರಣಾಂತಿಕ ಕ್ಯಾನ್ಸರ್​ ಮತ್ತು ಇತರೆ ರಕ್ತದ ಸಮಸ್ಯೆಗಳಾದ ಥಲಸ್ಸೆಮಿಯಾ ಮತ್ತು ಅಪ್ಲ್ಯಾಸ್ಟಿಕ್ ರಕ್ತಹೀನತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಬೇಕಿದೆ" ಎಂದರು.

ಈ ರಕ್ತ ಸಂಬಂಧಿ ಸಮಸ್ಯೆಗಳಿಂದ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಬಳಲುತ್ತಿದ್ದಾರೆ. ರಕ್ತದ ಕ್ಯಾನ್ಸರ್​ನಂತಹ ಪ್ರಕರಣಗಳ ವಿರುದ್ಧ ಕಿಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯಂತಹ ಸಾಂಪ್ರದಾಯಿಕ ವಿಧಾನಗಳಿವೆ. ಆದರೆ, ರಕ್ತದ ಕಾಂಡ ಕೋಶ ಕಸಿ ರಕ್ತ ಕ್ಯಾನ್ಸರ್ ರೋಗಿಗಳು ಬದುಕುಳಿಯುವ ಏಕೈಕ ಭರವಸೆಯ ಚಿಕಿತ್ಸೆಯಾಗಿದೆ.

ಭಾರತದಲ್ಲಿ ಪ್ರತೀ ಐದು ನಿಮಿಷಕ್ಕೊಬ್ಬ ವ್ಯಕ್ತಿ ರಕ್ತ ಕ್ಯಾನ್ಸರ್​​ಗೆ ಒಳಗಾಗುತ್ತಿದ್ದಾರೆ. ಆದರೂ, ದೇಶದಲ್ಲಿ ರಕ್ತ ಕಾಂಡ ಕೋಶ ದಾನಿಗಳ ಕೊರತೆ ಹೆಚ್ಚಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಭಾರತ ವಿಶ್ವದ ಥಲಸ್ಸೆಮಿಯಾ ರಾಜಧಾನಿಯಾಗಿರುವ ಜೊತೆಗೆ ರಕ್ತದ ಕ್ಯಾನ್ಸರ್​ ಪ್ರಕರಣಗಳನ್ನೂ ಅಧಿಕ ಸಂಖ್ಯೆಯಲ್ಲಿ ಹೊಂದಿದೆ. ಕಾಂಡ ಕೋಶ ಕಸಿ ಚಿಕಿತ್ಸೆ ಈ ಸಮಸ್ಯೆಯನ್ನು ಗುಣಪಡಿಸುವ ಏಕೈಕ ಆಯ್ಕೆಯಾಗಿದೆ. ಆದರೆ, ಭಾರತದಂತಹ ವಿವಿಧ ತಳಿಯ ವೈವಿಧ್ಯತೆ ಹೊಂದಿರುವ ದೇಶದಲ್ಲಿ ರೋಗಿಗೆ ಹೊಂದಾಣಿಕೆಯಾಗುವ ಕಾಂಡಕೋಶವನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಗುರುಗ್ರಾಮದ ಫೋರ್ಟಿಸ್​​ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ರಾಹುಲ್​ ಭಾರ್ಗವ ತಿಳಿಸಿದರು.

ರಕ್ತ ಕ್ಯಾನ್ಸರ್​ ಚಿಕಿತ್ಸೆಗೆ ಜಾಗತಿಕವಾಗಿ 41 ಮಿಲಿಯನ್​ ದಾನಿಗಳು ನೋಂದಣಿ ಮಾಡಿದ್ದರೆ, ಭಾರತದಲ್ಲಿ ನೋಂದಾಯಿತರ ಸಂಖ್ಯೆ ಕೇವಲ ಶೇ 0.6ರಷ್ಟಿದೆ. ರೋಗಿಗಳ ಜೀವ ಉಳಿಸುವಲ್ಲಿ ಈ ಕಾಂಡ ಕೋಶ ದಾನಿಗಳ ಹೊಂದಾಣಿಕೆ ಕೂಡ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ದತ್ತಾಂಶವನ್ನು ಲಾಭರಹಿತವಾಗಿ ಗಣನೀಯ ಮಟ್ಟದಲ್ಲಿ ವಿಸ್ತರಿಸಬೇಕಾಗಿದೆ.

ಇದರ ಜೊತೆಗೆ ಕಾಂಡ ಕೋಶ ದಾನದ ಬಗ್ಗೆ ಅರಿವಿನ ಕೊರತೆ ಮತ್ತು ತಪ್ಪು ಕಲ್ಪನೆಗಳು ಕೂಡ ದಾನಿಗಳು ಈ ನೋಂದಣಿಗೆ ಹಿಂದೇಟು ಹಾಕಲು ಕಾರಣವಾಗಿದೆ. ಕಾಂಡ ಕೋಶ ಚಿಕಿತ್ಸೆಯು ಹಾನಿಗೊಳಗಾದ ಅಂಗಾಂಶಗಳು, ಅಂಗಗಳನ್ನು ಸರಿಪಡಿಸಲು ಅಥವಾ ಅವುಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಬೇಕಾಗುತ್ತದೆ. ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಕೆಲವು ರೀತಿಯ ರಕ್ತದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

ಕಾಂಡ ಕೋಶ ದಾನದ ಸಂದರ್ಭದಲ್ಲಿ ರೋಗಿಗಳ ರಕ್ತಕ್ಕೆ ಇದು ಹೊಂದಾಣಿಕೆಯಾಗುವುದಿಲ್ಲ. ಬದಲಾಗಿ, ವ್ಯಕ್ತಿಯ ಲ್ಯುಕೋಸೈಟ್ ಆ್ಯಂಟಿಜೆನ್ (ಎಚ್​ಎಲ್​ಎ) ಗುಣಲಕ್ಷಣಕ್ಕೆ ಹೊಂದಿಕೆಯಾಗಬೇಕು. 18 ರಿಂದ 55 ವರ್ಷದ ಆರೋಗ್ಯವಂತರು ಈ ದಾನಕ್ಕೆ ಮುಂದಾಗಬಹುದು.(ಐಎಎನ್​ಎಸ್​)

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಸ್ಥಾಪನೆಯಾಗಲಿದೆ ಭಾರತದ ಅತಿದೊಡ್ಡ ಕಾಂಡ ಕೋಶ ಉತ್ಪಾದನಾ ಲ್ಯಾಬ್​

ABOUT THE AUTHOR

...view details