ಕರ್ನಾಟಕ

karnataka

ETV Bharat / health

ಹೆಪಟೈಟಿಸ್​ ಎ ವಿರುದ್ಧದ ಹೋರಾಟಕ್ಕೆ ಸ್ವದೇಶಿ ಲಸಿಕೆ ಬಿಡುಗಡೆ

ಹೆಪಟೈಟಿಸ್​ ಎ ಎಂಬುದು ಗಂಭೀರ ಸ್ವರೂಪದ ಯಕೃತ್​​ ರೋಗವಾಗಿದ್ದು, ಇದನ್ನು ತಡೆಯುವ ಅವಶ್ಯಕತೆ ಇದೆ.

india-has-launched-a-indigenous-vaccine-to-fight-hepatitis-a
india-has-launched-a-indigenous-vaccine-to-fight-hepatitis-a

By ETV Bharat Karnataka Team

Published : Jan 20, 2024, 2:32 PM IST

ಹೈದರಾಬಾದ್​: ಹೈಪಟೈಟಿಸ್​ ಎ ಎಂಬುದು ಯಕೃತ್​ ಅನ್ನು ಹಾನಿ ಮಾಡುವ ಸೋಂಕು ಆಗಿದ್ದು, ಈ ರೋಗ ತಡೆಯುವ ನಿಟ್ಟಿನಲ್ಲಿ ಇಂಡಿಯನ್​ ಇಮ್ಯೂನೋಲಾಜಿಕಲ್ಸ್​ ಅಭಿವೃದ್ಧಿಪಡಿಸಿರುವ ದೇಶಿಯ ಲಸಿಕೆ ಹ್ಯಾವಿಶರ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಹ್ಯಾವಿಶರ್‌​ ಎಂಬ ಎರಡು ಡೋಸ್​ನ ಲಸಿಕೆಯು ಭಾರತದಲ್ಲಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಹೆಪಟೈಟಿಸ್​ ಎ ತಡೆಯುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ.

ಹೆಪಟೈಟಸ್​ ಎ ಎಂಬುದು ವೈರಲ್​ ಸೋಂಕು ಆಗಿದ್ದು, ಕಲುಷಿತ ಆಹಾರ, ನೀರಿನಿಂದ ಪ್ರಸರಣವಾಗುತ್ತದೆ. ಇದು ಪ್ರಾಥಮಿಕವಾಗಿ ಮೌಖಿಕ ಮತ್ತು ಮಲದ ಮಾರ್ಗದಲ್ಲಿ ಹರಡುತ್ತದೆ. ಇದು ದೇಹ ಪ್ರಮುಖ ಭಾಗವಾಗಿರುವ ಯಕೃತ್​ ಕಾರ್ಯಾಚರಣೆ ಮೇಲೆ ಪರಿಣಾಮವನ್ನು ಬೀರುತ್ತದೆ.

ಈ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದ್ದು, ರೋಗವನ್ನು ತಡೆಯುವ ನಿಟ್ಟಿನಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವ ಲಸಿಕೆಯಲ್ಲಿ ಸೇರಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೈದರಾಬಾದ್​ ಮೂಲದ ಕಂಪನಿ ತಿಳಿಸಿದೆ. ಈ ಲಸಿಕೆ ಮೊದಲ ಡೋಸ್​ ಅನ್ನು 12 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುವುದು. ಎರಡನೇ ಡೋಸ್​ ಮೊದಲ ಡೋಸ್​ ಪಡೆದ ಆರು ತಿಂಗಳ ಬಳಿಕ ನೀಡಲಾಗುವುದು.

ಅಲ್ಲದೇ ಹೆಪಟೈಟಿಸ್​ ಎ ತೀವ್ರವಾಗಿರುವ ಪ್ರದೇಶದಲ್ಲಿ ಪ್ರವಾಸ ಮತ್ತು ಆ ಪ್ರದೇಶಕ್ಕೆ ತೆರೆದುಕೊಳ್ಳುವವರಲ್ಲಿ ಈ ಸೋಂಕಿನ ಅಪಾಯ ಹೆಚ್ಚಿದ್ದು, ಅವರಿಗೆ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ. ಹಾಗೇ ದೀರ್ಘ ಯಕೃತ್​​ ಸಮಸ್ಯೆಯಿಂದ ಬಳಲುವ ಅಪಾಯ ಹೊಂದಿರುವವರಿಗೆ ಈ ಲಸಿಕೆಯ ಅವಶ್ಯಕತೆ ಇದೆ.

ಪ್ರಸ್ತುತ ಹೆಪಟೈಟಿಸ್​ ಎ ಲಸಿಕೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆತ್ಮನಿರ್ಭರ್​ ಭಾರತ್​​ನಿಂದಾಗಿ ಮೊದಲ ಬಾರಿಗೆ ಭಾರತದಲ್ಲಿ ಹೆಪಟೈಟಿಸ್​ ಎ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ಇಂಡಿಯನ್​ ಇಮ್ಯೂಲೋಜಿಕಲ್ಸ್​​​ನ ನಿರ್ವಹಣಾ ನಿರ್ದೇಶಕ ಕೆ ಆನಂದ್​ ಕುಮಾರ್​ ತಿಳಿಸಿದ್ದಾರೆ.

ಈ ಲಸಿಕೆಯನ್ನು ಎಂಟು ಕೇಂದ್ರದಲ್ಲಿ ಹಲವು ಭಾರೀ ಕ್ಲಿನಿಕಲ್​ ಪ್ರಯೋಗ ನಡೆಸಲಾಗಿದೆ. ಈ ವೇಳೆ ಇದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ ಎಂದರು.

ಹೆಪಟೈಟಿಸ್​ ಎ ಲಸಿಕೆಯ ಬೇಡಿಕೆ ಅನುಗುಣವಾಗಿ ಕಂಪನಿಯು ಇದರ ಉತ್ಪಾದನೆ ಬೆಳವಣಿಗೆ ನಡೆಸಲಿದೆ ಎಂದು ಸಂಸ್ಥೆಯ ಉಪ ನಿರ್ವಹಣಾ ನಿರ್ದೇಶಕರಾದ ಪ್ರಿಯಬ್ರತಾ ಪಟ್ನಾಯಕ್​ ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ:ಐದು ವರ್ಷದೊಳಗಿನ ಶೇ. 60 ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶ ಕೊರತೆ; ಶೇ. 40 ಮಕ್ಕಳಲ್ಲಿ ರಕ್ತಹೀನತೆ

ABOUT THE AUTHOR

...view details