Pink Salt Benefits for Health:ಉಪ್ಪು ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ. ಹಲವು ಜನರು ಉಪ್ಪು ಸೇವಿಸಬೇಕೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ. ಮುಖ್ಯವಾಗಿ ಅವರು ನಿರ್ದಿಷ್ಟ ವಯಸ್ಸನ್ನು ತಲುಪಿದ ಬಳಿಕ ಈ ಕುರಿತು ಹೆಚ್ಚು ಆಲೋಚನೆ ಮಾಡುತ್ತಾರೆ. ಸಾಮಾನ್ಯವಾದ ಬಿಳಿ ಉಪ್ಪಿನ ಬದಲಿಗೆ ಪೋಷಕಾಂಶಗಳು ಸಮೃದ್ಧವಾಗಿರುವ ಹಿಮಾಲಯನ್ ಪಿಂಕ್ ರಾಕ್ ಸಾಲ್ಟ್ ಅಥವಾ ಪಿಂಕ್ ಉಪ್ಪು ಬಳಸುವುದು ಸೂಕ್ತ. ಈ ಉಪ್ಪನ್ನು ಬಳಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದೀಗ ಪಿಂಕ್ ಉಪ್ಪಿನ ಆರೋಗ್ಯದ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳೋಣ.
ಪಿಂಕ್ ಉಪ್ಪು ದೇಹ ಹೈಡ್ರೀಕರಿಸುತ್ತೆ: ಸಾಮಾನ್ಯ ಉಪ್ಪಿನ ಜೊತೆಗೆ ಹೋಲಿಸಿದರೆ ಪಿಂಕ್ ಉಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನಂತಹ 80 ವಿಭಿನ್ನ ಪ್ರಕಾರದ ಖನಿಜಗಳಿವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ತಜ್ಞರು ತಿಳಿಸುವ ಪ್ರಕಾರ, ಪಿಂಕ್ ಉಪ್ಪಿನಲ್ಲಿ ಬಿಳಿ ಉಪ್ಪಿಗಿಂತ ಕಡಿಮೆ ಸೋಡಿಯಂ ಪ್ರಮಾಣವಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಹಾಗೂ ಕಡಿಮೆ ಸೋಡಿಯಂ ಸೇವಿಸಲು ಬಯಸುವವರಿಗೆ ಪಿಂಕ್ ಉಪ್ಪು ಒಳ್ಳೆಯದು. ಈ ಉಪ್ಪು ಸಾಮಾನ್ಯವಾಗಿ ದೇಹ ನಿರ್ಜಲೀಕರಣಗೊಳಿಸಲು ಕಾರಣವಾಗುತ್ತದೆ. ಪಿಂಕ್ ಉಪ್ಪು ದೇಹ ಹೈಡ್ರೀಕರಿಸುತ್ತದೆ, ಜೊತೆಗೆ ಎಲೆಕ್ಟ್ರೋಲೈಟ್ ಮಟ್ಟ ಸಮತೋಲನಗೊಳಿಸಲು ಪೂರಕವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಹಾಗೂ ನಿರ್ವಿಷಗೊಳಿಸಲು ಈ ಉಪ್ಪು ಉತ್ತಮವಾಗಿದೆ. ಇದರಿಂದ ದೇಹವು ಹೊಸ ಚೈತನ್ಯ ಪಡೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಸಂಶೋಧನೆ ಹೇಳೋದು ಹೀಗೆ:ಪಿಂಕ್ ಉಪ್ಪು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗಿದೆ. ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವಲ್ಲಿ ಇದು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. 2020ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್‌ನಲ್ಲಿ (Journal of Food Science) ಪ್ರಕಟವಾದ 'ಕರುಳಿನ ಆರೋಗ್ಯದ ಮೇಲೆ ಹಿಮಾಲಯನ್ ಪಿಂಕ್ ಉಪ್ಪಿನ ಪರಿಣಾಮಗಳು' (The effects of Himalayan pink salt on gut health) ಎಂಬ ಅಧ್ಯಯನದಲ್ಲಿ ಈ ಮಾಹಿತಿಯು ಸ್ಪಷ್ಟವಾಗಿ ತಿಳಿಯುತ್ತದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).