Natural Hair Packs To Reduce Dandruff:ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಸಾಮಾನ್ಯ. ಮಾಲಿನ್ಯ, ಆಹಾರ ಸೇವನೆ, ಹಾರ್ಮೋನ್ ಮಟ್ಟದ ಏರುಪೇರು, ಕೂದಲು ಹಾಗೂ ಕಿರುಚೀಲಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ ಎಂದು ತಿಳಿಸುತ್ತಾರೆ ತಜ್ಞರು. ಇದರ ಪರಿಣಾಮ ಕೂದಲುಗಳು ನಿರ್ಜೀವವಾಗುತ್ತವೆ ಮತ್ತು ಉದುರುತ್ತವೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ತಜ್ಞರು ಮನೆ ಮದ್ದನ್ನು ಸೂಚಿಸಿದ್ದಾರೆ.
ದಾಸವಾಳ: ದಾಸವಾಳದ ಎಲೆಗಳು ಮತ್ತು ಹೂವುಗಳ ಗುಣಲಕ್ಷಣಗಳು ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಿಶೇಷವಾಗಿ, ತಲೆಹೊಟ್ಟು ಕಡಿಮೆ ಮಾಡುತ್ತದೆ.
- ನಾಲ್ಕು ಚಮಚ ಗೋರಂಟಿ ಪುಡಿಯಲ್ಲಿ ಸ್ವಲ್ಪ ದಾಸವಾಳದ ಎಲೆ ಮತ್ತು ಹೂವಿನ ಪುಡಿ ಸೇರಿಸಿ.
- ಸ್ವಲ್ಪ ಆಮ್ಲಾ ಪುಡಿ ಮತ್ತು ಮೆಂತ್ಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಈಗ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪ ಮೊಸರು ಸೇರಿಸಿ ಮತ್ತು ನಯವಾದ ಪೇಸ್ಟ್ ಮಾಡಿಕೊಳ್ಳಿ.
- ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಚೆನ್ನಾಗಿ ಲೇಪಿಸಿ.
- ನಂತರ ಕಡಿಮೆ ಸಾಂದ್ರತೆಯಿರುವ ಶಾಂಪೂ ಬಳಸಿ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆ.
- ಈ ಹೇರ್ ಪ್ಯಾಕ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲನ್ನು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಮೆಂತ್ಯ: ಮೆಂತ್ಯವು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಏಕೆ, ಕೆಲವು ಹೇರ್ ಪ್ಯಾಕ್ಗಳಲ್ಲೂ ಇದನ್ನು ಬಳಕೆ ಮಾಡಲಾಗುತ್ತದೆ.
- ನಾಲ್ಕು ಚಮಚ ಗೋರಂಟಿ ಪುಡಿ, ಎರಡು ಚಮಚ ನಿಂಬೆ ರಸ, ಎರಡು ಚಮಚ ಮೊಸರು, ತಲಾ ಒಂದು ಚಮಚ ಆಲಿವ್ ಎಣ್ಣೆ, ವಿನೆಗರ್, ಮೆಂತ್ಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ನೆನೆಸಿಡಿ.
- ಮರುದಿನ ಬೆಳಿಗ್ಗೆ, ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಗಳಿಗೆ ಅನ್ವಯಿಸಿ ಮತ್ತು ಎರಡರಿಂದ ಮೂರು ಗಂಟೆಗಳ ಕಾಲ ಒಣಗಲು ಬಿಡಿ
- ಕಡಿಮೆ ಸಾಂದ್ರತೆಯ ಶಾಂಪೂ ಬಳಸಿ ಸ್ನಾನ ಮಾಡಿ.
- ಅಲ್ಲದೆ ಮೆಂತ್ಯ ಸೊಪ್ಪಿನ ಸಾರವನ್ನು ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಈ ಕುರಿತ ಲೇಖನವನ್ನು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).