ಕರ್ನಾಟಕ

karnataka

ETV Bharat / health

ಹೋಟೆಲ್ ಸ್ಟೈಲ್ ಕ್ರಿಸ್ಪಿಯಾದ ಮೈಸೂರು ಬಜ್ಜಿ ಮಾಡುವುದು ಹೇಗೆ? ನೀವು ಈ ಟಿಪ್ಸ್ ಅನುಸರಿಸಿದರೆ ಸಖತ್​ ಟೇಸ್ಟಿ.. ಟೇಸ್ಟಿ.. - How to Prepare Mysore Bajji - HOW TO PREPARE MYSORE BAJJI

How to Prepare Mysore Bajji: ಮೈಸೂರು ಬಜ್ಜಿ ಅನೇಕರಿಗೆ ತುಂಬಾ ಇಷ್ಟವಾಗುತ್ತವೆ. ಆದರೆ, ಮನೆಯಲ್ಲಿ ತಯಾರು ಮಾಡಿದರೆ ಹೋಟೆಲ್​ನಲ್ಲಿ ತಿಂದಷ್ಟು ರುಚಿ ಬರುವುದಿಲ್ಲ. ಹೋಟೆಲ್ ಸ್ಟೈಲ್​ನಲ್ಲಿ ಮೈಸೂರು ಬಜ್ಜಿಯನ್ನು ರೌಂಡ್ ಮತ್ತು ಕ್ರಿಸ್ಪಿಯಾಗಿ ಬರಲು, ಈ ಕೆಲವು ಟಿಪ್ಸ್ ಅನುಸರಿಸಬೇಕಾಗುತ್ತದೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ

HOTEL STYLE MYSORE Bajji  MYSORE Bajji RECIPE  MYSORE Bajji PREPARATION  HOW TO MAKE MYSORE Bajji
ಮೈಸೂರು ಬಜ್ಜಿ (ETV Bharat)

By ETV Bharat Health Team

Published : Sep 24, 2024, 6:13 AM IST

How to Prepare Mysore Bajji: ಮೈಸೂರು ಬಜ್ಜಿ ಅತ್ಯಂತ ಜನಪ್ರಿಯವಾದ ಬೆಳಗಿನ ತಿಂಡಿ ಮತ್ತು ಸಂಜೆಯ ತಿಂಡಿಗಳಲ್ಲಿ ಒಂದಾಗಿದೆ. ಹೋಟೆಲ್‌ಗಳಿಗೆ ಹೋದಾಗ ಬಹುತೇಕರು ಈ ಮೈಸೂರು ಬಜ್ಜಿಗಳನ್ನು ತಿನ್ನುತ್ತಾರೆ. ಆದರೂ.. ಹೋಟೆಲ್​ನಲ್ಲಿ ತಿಂದಾಗ ಅವು ತುಂಬಾ ರುಚಿಯಾಗಿ, ಮೃದುವಾಗಿ, ನಯವಾಗಿ, ಕ್ರಿಪ್ಪಿಯಾಗಿ ಇರುತ್ತವೆ. ಆದರೆ, ನಾವು ಮನೆಯಲ್ಲಿ ತಯಾರಿಸಿದರೆ, ಅದು ತುಂಬಾ ವ್ಯತ್ಯಾಸವಾಗಿರುತ್ತದೆ. ಹೀಗೆ ಮಾಡಿದರೆ ಹೋಟೆಲ್​ ಸ್ಟೈಲ್​ನಂತೆಯೇ ಪರ್ಫೆಕ್ಟ್ ಶೇಪ್ ಮತ್ತು ರುಚಿಕರವಾಗಿ ಮನೆಯಲ್ಲೇ ಮೈಸೂರು ಬಜ್ಜಿ ತಯಾರಿಸಬಹುದು. ಇದೀಗ ಮೈಸೂರು ಬಜ್ಜಿ ತಯಾರಿಸುವುದು ಹೇಗೆ ಎಂಬುದು ತಿಳಿಯೋಣ.

ಮೈಸೂರು ಬಜ್ಜಿ ಸಿದ್ಧಪಡಿಸಲು ಬೇಕಾದ ಪದಾರ್ಥಗಳು:

  • ಒಂದು ಕಪ್ ಹುಳಿ ಮೊಸರು
  • ರುಚಿಗೆ ತಕ್ಕಷ್ಟು ಉಪ್ಪು
  • ಒಂದು ಚಮಚ ಎಣ್ಣೆ
  • ಒಂದು ಚಮಚ ಅಡುಗೆ ಸೋಡಾ
  • ಒಂದು ಕಪ್ ಮೈದಾ ಹಿಟ್ಟು
  • ಒಂದು ಚಮಚ ಜೀರಿಗೆ
  • ಒಂದು ಚಮಚ ಕರಿಬೇವಿನ ಪುಡಿ
  • ಅರ್ಧ ಚಮಚ ಶುಂಠಿ
  • ಒಂದು ಚಮಚ ಹಸಿ ಮೆಣಸಿನಕಾಯಿ ಪೇಸ್ಟ್

ತಯಾರಿಸುವ ವಿಧಾನ:

  • ಮೊದಲು ಒಂದು ಬಟ್ಟಲಿನಲ್ಲಿ ಹುಳಿ ಮೊಸರನ್ನು ತೆಗೆದುಕೊಂಡು ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಉಪ್ಪು, ಅಡಿಗೆ ಸೋಡಾ ಮತ್ತು ಎಣ್ಣೆಯನ್ನು ಸೇರಿಸಿ ಮತ್ತು 3 ನಿಮಿಷಗಳ ಕಾಲ ಮಿಶ್ರಣ ಮಾಡಿ.
  • ಇದಕ್ಕೆ ಮೈದಾ ಹಿಟ್ಟು ಹಾಕಿ, ಬಿಸಿ ನೀರು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿ. (ಹಿಟ್ಟು ತುಂಬಾ ಮೆತ್ತಗಾದರೆ ಬಜ್ಜಿಗಳು ಚೆನ್ನಾಗಿ ಬರುವುದಿಲ್ಲ. ಮೈದಾ ಹಿಟ್ಟು ಬೇಡದವರು ಗೋಧಿ ಹಿಟ್ಟನ್ನೂ ಬಳಸಬಹುದು.)
  • ಈ ರೀತಿ ಬೆರೆಸಿದ ಹಿಟ್ಟನ್ನು ಸುಮಾರು 5 ನಿಮಿಷಗಳ ಕಾಲ ಮಿಶ್ರಣ ಮಾಡಿ.
  • ಅದರ ನಂತರ ಜೀರಿಗೆ, ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್​ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಬಟ್ಟೆ ಅಥವಾ ಮುಚ್ಚಳದಿಂದ ಮುಚ್ಚಿ ಮತ್ತು ಸುಮಾರು ಒಂದು ಗಂಟೆ ನೆನೆಯಲು ಬಿಡಿ. (ನೀವು ಹೆಚ್ಚು ಸಮಯ ನೆನೆಸಿದಷ್ಟೂ ಬಜ್ಜಿಗಳು ಉತ್ತಮವಾಗಿರುತ್ತವೆ)
  • ಒಂದು ಗಂಟೆಯ ನಂತರ ಒಲೆ ಆನ್ ಮಾಡಿ ಕಡಾಯಿ ಹಾಕಿ ಎಣ್ಣೆ ಹಾಕಿ ಬಿಸಿ ಮಾಡಿ.
  • ಈಗ ಹಿಟ್ಟನ್ನು ಕದಲದೆ ಒಂದು ಕಡೆಯಿಂದ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ನಿಧಾನವಾಗಿ ರೌಂಡ್​ ಆಗಿ ಬಿಡಿ.
  • ಮಧ್ಯಮ ಉರಿಯಲ್ಲಿ ಸ್ಟೌವನ್ನು ಹಾಕಿ ಮತ್ತು ಬಜ್ಜಿಯ ಎರಡೂ ಬದಿಗಳು ಕೆಂಪಾಗುವವರೆಗೆ ಬೇಯಿಸಿ.
  • ಈಗ ಟಿಶ್ಯೂ ಇರುವ ಬಟ್ಟಲಿನಲ್ಲಿ ಹಾಕಿದರೆ ಅದು ಎಣ್ಣೆಯನ್ನು ಹೀರಿಕೊಳ್ಳುತ್ತದೆ.
  • ಆ ನಂತರ ಶೇಂಗಾ ಚಟ್ನಿ, ಟೊಮೆಟೊ ಚಟ್ನಿ ಜೊತೆಗೆ ತಿಂದರೆ ಹೋಟೆಲ್​ನಲ್ಲಿ ಸಿದ್ಧಪಡಿಸಿದಂತೆಯೇ ಸೂಪರ್ ಟೇಸ್ಟ್​ ಬರುತ್ತದೆ.

ಇದನ್ನೂ ಓದಿ:

ABOUT THE AUTHOR

...view details