ಹೈದರಾಬಾದ್:ನೀವು ಮೊಟ್ಟೆಯೊಂದಿಗೆ ಮಾಡಿದ ಯಾವುದೇ ಖಾದ್ಯ ರುಚಿಕರವಾಗಿರುತ್ತದೆ. ಅಲ್ಲದೆ, ಇದರಲ್ಲಿ ಪೋಷಕಾಂಶಗಳು ಸಹ ಸಮೃದ್ಧವಾಗಿ ಇದ್ದು ನಿಮಗೆ ದಿನವಿಡೀ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಆದರೂ ನೀವು ಮೊಟ್ಟೆಯೊಂದಿಗೆ ಎಗ್ ಕರ್ರಿ, ಆಮ್ಲೆಟ್ ಮತ್ತು ಎಗ್ ಸೂಪ್ ಮಾಡುವುದು ಸರ್ವೇ ಸಾಮಾನ್ಯ. ಈ ಬಾರಿ ಹೊಸದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಸ್ಪೆಷಲ್ ಸ್ಪೈಸಿ ಎಗ್ ಕೀಮಾ: ಹೀಗೆ ಮಾಡಿ ತಿಂದರೆ ಪ್ಲೇಟ್ಗೆ ಪ್ಲೇಟೇ ಖಾಲಿ - spicy egg keema
How To Make Spicy Egg Keema: ಭಾನುವಾರವಾದರೆ ಕೆಲವರು ಊಟದಲ್ಲಿ ನಾನ್ ವೆಜ್ ಇರಬೇಕು ಅಂತಾ ಬಯಸುತ್ತಾರೆ. ನಾನ್ ವೆಜ್ ಎಂದರೆ ಚಿಕನ್, ಮಟನ್, ಮೀನು ತಿನ್ನುವವರ ಸಂಖ್ಯೆಯೇ ಹೆಚ್ಚು.. ಆದರೆ ನೀವು ಮೊಟ್ಟೆಗಳೊಂದಿಗೆ ರುಚಿಕರವಾದ ಖಾದ್ಯವನ್ನು ತಯಾರಿಸಬಹುದಾಗಿದೆ. ಇದು ಕಿರಿಯರಿಂದ ಹಿರಿಯವರೆಗೂ ಇಷ್ಟವಾಗುತ್ತದೆ. ಹಾಗಾದರೆ ಆ ಅಡುಗೆ ವಿಧಾನ ತಡಮಾಡದೇ ತಿಳಿದುಕೊಳ್ಳಿ.
![ಸ್ಪೆಷಲ್ ಸ್ಪೈಸಿ ಎಗ್ ಕೀಮಾ: ಹೀಗೆ ಮಾಡಿ ತಿಂದರೆ ಪ್ಲೇಟ್ಗೆ ಪ್ಲೇಟೇ ಖಾಲಿ how to make spicy egg keema spicy egg keema full details spicy egg keema curry](https://etvbharatimages.akamaized.net/etvbharat/prod-images/16-03-2024/1200-675-21002789-thumbnail-16x9-sefed.jpg)
ಹೀಗೆ ಮಾಡಿದರೆ ತಿಂದ್ರೆ ಪ್ಲೇಟ್ ಪ್ಲೇಟೇ ಖಾಲಿ
Published : Mar 16, 2024, 8:05 PM IST
ಕೋಳಿ ಮೊಟ್ಟೆಗಳೊಂದಿಗೆ ಮಸಾಲೆಯುಕ್ತ ಎಗ್ ಕೀಮಾ ಮಾಡುವುದು ನಿಮಗೆ ಗೊತ್ತೆ ಇದೆ. ಕೀಮಾ ವಿಚಾರಕ್ಕೆ ಬಂದರೆ ಎಲ್ಲರೂ ಅಂದುಕೊಳ್ಳುವುದು ಇದನ್ನು ಕುರಿ ಮಾಂಸದಿಂದ ಮಾಡುವುದಾಗಿದೆ. ಆದರೆ, ನೀವು ಬೇಯಿಸಿದ ಮೊಟ್ಟೆಗಳೊಂದಿಗೆ ಕೀಮಾವನ್ನು ಸಹ ಪ್ರಯತ್ನಿಸಬಹುದು. ಒಮ್ಮೆ ಮನೆಯಲ್ಲಿ ಈ ಎಗ್ ಕೀಮಾ ತಯಾರಿಸಿ ನೋಡಿ.. ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ವಾವ್, ಈ ಕರಿ ಸೂಪರ್ ಟೇಸ್ಟಿ ಅನ್ನೋದು ಗ್ಯಾರಂಟಿ. ಈ ಎಗ್ ಕೀಮಾ ಕರಿ ತುಂಬಾ ಚೆನ್ನಾಗಿರುತ್ತದೆ. ಇದನ್ನು ಹೇಗೆ ತಯಾರಿಸಬೇಕೆಂದು ತಿಳಿಯಿರಿ ಮತ್ತು ಹಾಗಾಗೇ ಇದನ್ನು ಪ್ರಯತ್ನಿಸಿ..
- ಸ್ಪೈಸಿ ಎಗ್ ಕೀಮಾ ಕರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
- ಮೊಟ್ಟೆಗಳು - 6
- ಎಣ್ಣೆ - 2 ಟೀಸ್ಪೂನ್
- ಈರುಳ್ಳಿ - 1 ದೊಡ್ಡದು
- ಟೊಮೇಟೊ - 2
- ಮೆಣಸಿನಕಾಯಿ - 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಖಾರದಪುಡಿ - ರುಚಿಗೆ ತಕ್ಕಷ್ಟು
- ಅರಿಶಿನ - 1 ಟೀಸ್ಪೂನ್
- ಧನಿಯಾ ಪುಡಿ - 1 ಟೀಸ್ಪೂನ್
- ಗರಂ ಮಸಾಲಾ - 1 ಟೀಸ್ಪೂನ್
- ಕೊತ್ತಂಬರಿ - ರುಚಿಗೆ ತಕ್ಕಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
- ಎಗ್ ಕೀಮಾ ಮಾಡುವ ವಿಧಾನ:
- ಮೊದಲು ಗ್ಯಾಸ್ ಆನ್ ಮಾಡಿ, ಒಂದು ಪಾತ್ರೆಯಲ್ಲಿ ನೀರು ಸುರಿಯಿರಿ, ಸ್ವಲ್ಪ ಉಪ್ಪು ಸೇರಿಸಿ ಮತ್ತು ಮೊಟ್ಟೆಗಳನ್ನು ಬೇಯಿಸಿ.
- ಮೊಟ್ಟೆಗಳನ್ನು ಬೇಯಿಸಿದ ನಂತರ, ಅವುಗಳನ್ನು ಸಿಪ್ಪೆ ತೆಗೆದು ತೆಳುವಾದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
- ಜೊತೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಟೊಮೆಟೊವನ್ನು ತೆಳುವಾಗಿ ಕತ್ತರಿಸಿ.
- ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ.
- ಎಣ್ಣೆ ಬಿಸಿಯಾದ ನಂತರ ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಮಾಯವಾಗುವವರೆಗೆ ಹುರಿಯಿರಿ.
- ನಂತರ ಟೊಮೆಟೊ ಚೂರುಗಳು ಮತ್ತು ಅರಿಶಿನ ಸೇರಿಸಿ ಮಿಕ್ಸ್ ಮಾಡಿ.
- ಈಗ ಅವು ಸ್ವಲ್ಪ ಬೆಂದ ನಂತರ ರುಚಿಗೆ ತಕ್ಕಷ್ಟು ಮೆಣಸಿನಕಾಯಿ, ಉಪ್ಪು, ಧನಿಯಾ ಪುಡಿ ಮತ್ತು ಗರಂ ಮಸಾಲ ಸೇರಿಸಿ ಚೆನ್ನಾಗಿ ಕಲಸಿ.
- ಅದರ ನಂತರ ತೆಳುವಾಗಿ ಕತ್ತರಿಸಿದ ಮೊಟ್ಟೆಗಳನ್ನು ಹಾಕಿ ಮಿಕ್ಸ್ ಮಾಡಿ. ಇದಾದ ಬಳಿಕ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
- ಈಗ ಸಿಂಪಲ್ ಮತ್ತು ಟೇಸ್ಟಿ ಸ್ಪೈಸಿ ಎಗ್ ಕೀಮಾ ರೆಡಿ. ಇದನ್ನು ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ತಿನ್ನುತ್ತಿದ್ರೆ ತುಂಬಾ ಚೆನ್ನಾಗಿರುತ್ತದೆ. ಆಗಾಗ ಮನೆಯಲ್ಲಿ ಇದನ್ನು ಪ್ರಯತ್ನಿಸುತ್ತಿರಿ..