ಕರ್ನಾಟಕ

karnataka

ETV Bharat / health

ಅಕ್ಕಿ ನೆನೆಸುವ ಕಷ್ಟವಿಲ್ಲ, ನಿಮಿಷದಲ್ಲೇ ತಯಾರಿಸಿ ಬಿಸಿ ಬಿಸಿ​ ಇಡ್ಲಿ; ಸಿಕ್ಕಾಪಟ್ಟೆ ಮೃದು - ಟೇಸ್ಟಿ ಟೇಸ್ಟಿ! - quick IDLI RECIPE

ಇಡ್ಲಿಯನ್ನು ತಯಾರಿಸಲು ಹಿಂದಿನ ದಿನವೇ ಅಕ್ಕಿ, ಉದ್ದು ನೆನೆಸಿ, ರುಬ್ಬಿದ ಮೇಲೆ ಹಿಟ್ಟು ಹುದುಗುವವರೆಗೆ ಕಾಯಬೇಕು. ಆದರೆ ಇದೀಗ ಇಷ್ಟೆಲ್ಲಾ ಶ್ರಮ ಪಡುವ ಅಗತ್ಯವೇ ಬೀಳುವುದಿಲ್ಲ

how-to-make-instant-idli-recipe-and-instant-idli-recipe-in-hotel-style-in-Kannada
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Aug 6, 2024, 1:00 PM IST

ಹೈದರಾಬಾದ್​:ಬಹುತೇಕರ ನೆಚ್ಚಿನ ತಿಂಡಿಗಳಲ್ಲಿ ಇಡ್ಲಿಯೂ ಒಂದು. ಬೆಳಗಿನ ಹೊತ್ತು ಹಿತಕರ ಮತ್ತು ಹಗುರವಾಗಿ ಹೊಟ್ಟೆ ತುಂಬಿಸುವ ಇಡ್ಲಿ ಆರೋಗ್ಯಕ್ಕೂ ಉತ್ತಮ. ಆದರೆ, ಈ ಇಡ್ಲಿಯನ್ನು ತಯಾರಿಸಲು ಹಿಂದಿನ ದಿನವೇ ಅಕ್ಕಿ, ಉದ್ದು ನೆನೆಸಿ, ರುಬ್ಬಿ ಅದನ್ನು ಹುದುಗು ಬರುವವರೆಗೂ ಕಾಯಬೇಕು. ಆದರೆ, ಇದೀಗ ಇಷ್ಟೆಲ್ಲ ಶ್ರಮ ಪಡುವ ಅಗತ್ಯವೇ ಬೀಳುವುದಿಲ್ಲ. ತಕ್ಷಣಕ್ಕೆ ನಿಮಿಷದಲ್ಲೇ ಮನೆಯಲ್ಲಿ ರುಚಿಕರ ಮೃದುವಾದ ಇಡ್ಲಿಯನ್ನು ದಿಢೀರ್​ ಎಂದು ತಯಾರಿಸಬಹುದಾಗಿದೆ. ಹೋಟೆಲ್​​​ನಲ್ಲಿ ಸಿಗುವ ಇಡ್ಲಿಯನ್ನು ಮನೆಯಲ್ಲಿ ತಯಾರಿಸಿ ಮನೆಯಲ್ಲೇ ಸವಿಯಬಹುದು.

ಮೃದುವಾದ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಬಾಂಬೆ ರವಾ ಒಂದು ಕಪ್​
  • ಮೊಸರು- ಒಂದು ಕಪ್​
  • ಉಪ್ಪು - ರುಚಿಗೆ
  • ಗಟ್ಟಿ ಅವಲಕ್ಕಿ- ಒಂದು ಕಪ್​
  • ಬೇಕಿಂಗ್​ ಸೋಡಾ - ಅರ್ಧ ಟೀ ಸ್ಪೂನ್​
  • ನೀರು - ಅಗತ್ಯಕ್ಕೆ ತಕ್ಕಷ್ಟು

ಹೋಟೆಲ್​​ನಲ್ಲಿ ಸಿಗುವಂತಾ ಇಡ್ಲಿ ಮನೆಯಲ್ಲೇ ಮಾಡುವ ವಿಧಾನ

  • ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ಅರ್ಧಗಂಟೆಗಳ ಕಾಲ ನೆನೆ ಹಾಕಿ. ಬಳಿಕ ಅದನ್ನು ಚೆನ್ನಾಗಿ ಹಿಂಡಿ ಬಳಿಕ ಅದನ್ನು ಬೇರೊಂದು ಪಾತ್ರೆಗೆ ಹಾಕಿ
  • ಬಳಿಕ ಮತ್ತೊಂದು ಬಟ್ಟಲಿಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಅಡುಗೆ ಸೋಡಾ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಆ ಬಳಿಕ ಅದಕ್ಕೆ ಬಾಂಬೆ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಈ ಮಿಶ್ರಣವನ್ನು ಅರ್ಧಗಂಟೆಗಳ ಕಾಲ ಎತ್ತಿಡಿ.
  • ಬಳಿಕ ನೆನೆಸಿ ತೆಗೆದಿಟ್ಟ ಅವಲಕ್ಕಿಯನ್ನು ಮಿಕ್ಸಿಜಾರ್​ನಲ್ಲಿ ಹಾಕಿ ಸರಿಯಾಗಿ ಅಥವಾ ಹದವಾಗಿ ರುಬ್ಬಿಟ್ಟುಕೊಳ್ಳಿ. ಹದಕ್ಕೆ ಬೇಕಾದಂತೆ ನೀರಿನ ಮಿಶ್ರಣ ಮಾಡಿ.
  • ಬಳಿಕ ಇದಕ್ಕೆ ಬಾಂಬೆ ರವೆ ಹಾಗೂ ಮೊಸರಿನ ಮಿಶ್ರಣವನ್ನು ಸೇರಿಸಿ, ನೀರು ಬೆರಸಿ, ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಬಳಿಕ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ.
  • ತದನಂತರ ಇಡ್ಲಿ ಪಾತ್ರೆಯನ್ನು ಇಟ್ಟು ಅದಕ್ಕೆ ನೀರು ಹಾಕಿ ಬಿಸಿ ಮಾಡಿ. ಬಳಿಕ ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ, ಈ ಇಡ್ಲಿ ಮಿಶ್ರಣವನ್ನು ಹಾಕಿ, 15 ನಿಮಿಷ ಬೆರಸಿ ಬೇಯಿಸಿದರೆ, ಮೃದುವಾದ ಇಡ್ಲಿ ತಯಾರಿ ಆಗುತ್ತದೆ.
  • ಈ ಇಡ್ಲಿಯನ್ನು ರುಚಿಯಾದ ಚಟ್ನಿ,ಯೊಂದಿಗೆ ಆಹ್ಲಾದಕರವಾಗಿ ಸವಿಯಬಹುದಾಗಿದೆ. ಹೋಟೆಲ್​​ಗೆ​​​​​​​​​ ಹೋಗಿ ಕಾದು ತಿನ್ನುವ ಬದಲು ಇನ್​ಸ್ಟಂಟ್​ ಆಗಿ ಅರ್ಧಗಂಟೆಯಲ್ಲೇ ಮನೆಯಲ್ಲಿ ಮಾಡಿ ಬೇಕಾದಾಗ ಇಡ್ಲಿ ರುಚಿಯನ್ನು ಸವಿಯಬಹುದು. ಮತ್ತೇಕ ತಡ ಮಾಡುವ ವಿಧಾನ ಗೊತ್ತಾಯ್ತಲ್ಲ ಟ್ರೈ ಮಾಡಿ ನೋಡಿ.

ಇದನ್ನೂ ಓದಿ:ಹಾಗಲಕಾಯಿ ತಿನ್ನೋದರಿಂದ ಇವೆ ಹಲವು ಪ್ರಯೋಜನ, ನಿತ್ಯ ಉಪಯೋಗಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ: ತಜ್ಞರು ಹೀಗೆ ಹೇಳಿದ್ದೇಕೆ?

ABOUT THE AUTHOR

...view details