ಕರ್ನಾಟಕ

karnataka

ETV Bharat / health

ಹಿಟ್ಟು ರುಬ್ಬುವ ರಗಳೆ ಇಲ್ಲ, ನೆನೆಸಿಡುವ ಪ್ರಮೇಯವೂ ಇಲ್ಲ: 10 ನಿಮಿಷದಲ್ಲಿ ನಿಮ್ಮಿಷ್ಟದ ಗರಿಗರಿ ದೋಸೆ ರೆಡಿ; ಅದು ಹೇಗೆ? - How to make DOSA WITHOUT GRINDING

ದೋಸೆ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಹೋಟೆಲ್​​​​ಗೆ ಹೋಗುವ ಬಹುತೇಕರು ದೋಸೆ ಆರ್ಡರ್​​​ ಮಾಡಿಯೇ ಮಾಡ್ತಾರೆ. ಹೀಗೆ ಹೋಟೆಲ್​​ನಲ್ಲಿ ಸಖತ್​ ಖುಷಿ ಪಟ್ಟು ತಿನ್ನುವ ಜನ, ಮನೆಯಲ್ಲಿ ಹೀಗೆ ಮಾಡುವುದಕ್ಕೆ ಕಷ್ಟ ಪಡುತ್ತಾರೆ. ಏಕೆಂದರೆ ದೋಸೆ ಮಾಡಲು, ನೀವು ಮುಂಚಿತವಾಗಿ ಹಿಟ್ಟನ್ನು ರುಬ್ಬಿ ಇಡಬೇಕಾಗುತ್ತದೆ. ಆದರೆ ಇನ್ನು ಮುಂದೆ ಅಂತಹ ಅಗತ್ಯವೇ ಇಲ್ಲ ಬಿಡಿ. ಕೇವಲ ನಿಮಿಷಗಳಲ್ಲಿ ದೋಷಗಳು ಸಿದ್ಧಮಾಡಬಹುದು. ಅದು ಹೇಗೆ ಅಂತೀರಾ ಹಾಗಾದರೆ ಈ ವರದಿಯನ್ನೊಮ್ಮೆ ಓದಿ

ಹಿಟ್ಟು ರುಬ್ಬದೇ 10 ನಿಮಿಷದಲ್ಲಿ ರೆಡಿ  ಗರಿ ಗರಿಯಾದ ದೋಸೆ: ಇದನ್ನು ತಯಾರಿಸುವುದು ಹೇಗೆ ಗೊತ್ತಾ?
ಹಿಟ್ಟು ರುಬ್ಬದೇ 10 ನಿಮಿಷದಲ್ಲಿ ರೆಡಿ ಗರಿ ಗರಿಯಾದ ದೋಸೆ: ಇದನ್ನು ತಯಾರಿಸುವುದು ಹೇಗೆ ಗೊತ್ತಾ? (ETV Bharat)

By ETV Bharat Karnataka Team

Published : Aug 7, 2024, 7:11 AM IST

Instant Dosa Breakfast: ಅನೇಕ ಜನರು ಮನೆಯಲ್ಲಿ ಅಥವಾ ಟಿಫೆನ್ ಸೆಂಟರ್‌ನಲ್ಲಿ ಗರಿಗರಿಯಾದ ದೋಸೆ ತಿನ್ನಲು ತುದಿಗಾಲ ಮೇಲೆ ನಿಂತಿರುತ್ತಾರೆ. ಆದರೆ ಮನೆಯಲ್ಲಿ ಇಂತಹ ದೋಸೆಯನ್ನು ಮಾಡುವುದು ಹೇಗೆ ಎಂದು ತಿಳಿಯದೇ ಚಡಪಡಿಸುತ್ತಿರುತ್ತಾರೆ. ನೀವು ಮನೆಯಲ್ಲಿ ದೋಸೆ ಮಾಡಬೇಕಾದರೆ, ಮೊದಲೇ ಅಕ್ಕಿ ಸೇರಿದಂತೆ ಬೇಕಾದ ಸಾಮಗ್ರಿಗಳನ್ನು ನೆನೆಸಿಟ್ಟು, ಬಳಿಕ ಅದನ್ನು ರಾತ್ರಿಯೇ ರುಬ್ಬಿ ಪಕಕ್ಕೆ ಇಟ್ಟು, ಅದು ಹುದುಗು ಬಂದ ಬಳಿಕ ಬೆಳಗ್ಗೆ ದೋಸೆ ಮಾಡಬೇಕಾಗುತ್ತದೆ. ಅದಕ್ಕೆ ಇಷ್ಟೆಲ್ಲ ಕೆಲಸ ಇದೆ. ಹಾಗಾಗಿ ದೋಸೆ ತಿನ್ನಬೇಕು ಎಂದಾಕ್ಷಣ ಮಾಡಿಕೊಳ್ಳಲು ಬರಲ್ಲ. ಪ್ರತಿದಿನ ಹೀಗೆ ಮಾಡುವುದು ಸ್ವಲ್ಪ ಕಷ್ಟ. ಅದಕ್ಕೇ ಅನೇಕರು ವಾರಕ್ಕೆ ಸಾಕಾಗುವಷ್ಟು ದೋಸೆ ಹಿಟ್ಟನ್ನು ರುಬ್ಬಿ ಫ್ರಿಡ್ಜ್ ನಲ್ಲಿಡುತ್ತಾರೆ. ಆದರೆ ಇದಕ್ಕೆಲ್ಲ ಈಗ ಪರಿಹಾರ ಸಿಕ್ಕಿದೆ. ನೀವು ಕೇವಲ 10 ನಿಮಿಷಗಳಲ್ಲಿ ತಕ್ಷಣವೇ ಬಿಸಿಯಾದ ಹಾಗೂ ಗರಿಗರಿಯಾದ ದೋಸೆಯನ್ನು ಮಾಡಿಟ್ಟುಕೊಳ್ಳಬಹುದು.

ಗೋಧಿ ಹಿಟ್ಟಿನ ದೋಸೆ - ಬೇಕಾಗುವ ಪದಾರ್ಥಗಳು:

  • ಗೋಧಿ ಹಿಟ್ಟು - ಒಂದು ಕಪ್
  • ಉಪ್ಪು - ರುಚಿಗೆ ತಕ್ಕನಾದಷ್ಟು
  • ಚಿಲ್ಲಿ ಫ್ಲೇಕ್ಸ್ - ಟೀಸ್ಪೂನ್
  • ಮೆಣಸಿನಕಾಯಿ - 2
  • ಜೀರಿಗೆ - ಒಂದು ಚಮಚ
  • ಕರಿಬೇವು ಎಲೆಗಳು
  • ಕಾಳುಮೆಣಸಿನ ಪುಡಿ - ಒಂದು ಚಮಚ

ತ್ವರಿತವಾಗಿ ದೋಸೆ ಮಾಡುವ ವಿಧಾನ

  1. ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು, ಜೀರಿಗೆ, ಕಾಳುಮೆಣಸಿನ ಪುಡಿ, ಕತ್ತರಿಸಿದ ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಮೆಣಸಿನಕಾಯಿ ಚೂರುಗಳನ್ನು ಸೇರಿಸಿ ಮಿಶ್ರಣ ಮಾಡಿ.
  2. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟನ್ನು ಕಲಸಿ.
  3. ಈಗ ದೋಸೆ ತವಾ ಒಲೆಯ ಮೇಲೆ ಇಟ್ಟು ಅದು ಬಿಸಿಯಾದ ನಂತರ ಹಿಟ್ಟಿನೊಂದಿಗೆ ದೋಸೆ ಹಾಕಿ. ದೋಸೆಯ ಅಂಚುಗಳ ಉದ್ದಕ್ಕೂ ಎಣ್ಣೆಯನ್ನು ಹಚ್ಚಿದ ನಂತರ, ಅದನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿ
  4. ಹೀಗೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ತುಂಬಾ ರುಚಿಕರವಾದ ದೋಸೆ ರೆಡಿ

ಮೊಸರು ಮತ್ತು ಅಡುಗೆ ಸೋಡಾ ಇಲ್ಲದ ರವಾ ದೋಸೆ:

ಬೇಕಾಗುವ ಪದಾರ್ಥಗಳು:

  • ಅಕ್ಕಿ ಹಿಟ್ಟು - ಒಂದೂವರೆ ಕಪ್
  • ಹಸಿರು ಮೆಣಸಿನಕಾಯಿ - 3 (ತೆಳುವಾಗಿ ಕತ್ತರಿಸಿ)
  • ಕರಿಬೇವಿನ ಎಲೆಗಳು-2
  • ಉಪ್ಪು - ರುಚಿಗೆ ಸಾಕಾಗುವಷ್ಟು
  • ಕೊತ್ತಂಬರಿ - ಸ್ವಲ್ಪ
  • ಕ್ಯಾರೆಟ್ ತುರಿ - ಸ್ವಲ್ಪ
  • ಜೀರಿಗೆ - ಟೀಚಮಚ
  • ಈರುಳ್ಳಿ - ಒಂದು (ತೆಳುವಾಗಿ ಕತ್ತರಿಸಿ)
  • ಅರಕಪ್ಪು- ಬಾಂಬೆ ರವಾ
  • ಶುಂಠಿ ತುರಿ - ಚಮಚ

ಅಕ್ಕಿ ಹಿಟ್ಟಿನ ದೋಸೆ ಮಾಡುವ ವಿಧಾನ:

  1. ಮೊದಲು ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ಮತ್ತು ಬಾಂಬೆ ರವೆ ತೆಗೆದುಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಸುರಿಯಿರಿ ಮತ್ತು ಮಿಶ್ರಣ ಮಾಡಿ. ಅದರ ನಂತರ 5 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
  2. ಅದರ ನಂತರ, ತುರಿದ ಶುಂಠಿ, ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್, ಕತ್ತರಿಸಿದ ಹಸಿರು ಮೆಣಸಿನಕಾಯಿ, ಕತ್ತರಿಸಿದ ಕರಿಬೇವಿನ ಎಲೆಗಳು, ಕೊತ್ತಂಬರಿ ಮತ್ತು ಜೀರಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ರೀತಿ ಕಲಸಿ.
  3. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕಲಸಿ.
  4. ನಂತರ ಬಿಸಿಯಾದ ದೋಸೆ ತವಾದ ಮೇಲೆ ಹಿಟ್ಟನ್ನು ಹರಡಿ ಗರಿಗರಿಯಾಗುವವರೆಗೆ ಬೇಯಿಸಿ
  5. ತುಂಬಾ ಗರಿಗರಿಯಾದ ಮತ್ತು ಸೂಪರ್ ಟೇಸ್ಟಿ ದೋಸೆ ರೆಡಿ ಆಗುತ್ತೆ

ನೀವು ಇಷ್ಟಪಟ್ಟರೆ ತಕ್ಷಣವೇ ದೋಸೆ ಮಾಡಿಕೊಂಡು ಸವಿಯಬಹುದು.

ಇದನ್ನು ಓದಿ:ಪ್ಯಾರಿಸ್​ ಒಲಿಂಪಿಕ್ಸ್‌: 8 ತಾಸಿನಲ್ಲಿ 3 ಜಟ್ಟಿಗಳ ಬಗ್ಗುಬಡಿದು ಫೈನಲ್​​ ತಲುಪಿದ ವಿನೇಶ್​ ಪೋಗಟ್​ - Vinesh Phogat

ಬಿಪಿ ಭಯ ಬಿಡಿ! ಡಯಟ್​ನಲ್ಲಿ ಸೇರಿಸಿ ಹಣ್ಣು, ತರಕಾರಿ - Dash Diet Helps Maintain BP

ABOUT THE AUTHOR

...view details