ಹೈದರಾಬಾದ್: ನೀಳ ಕಾಲಿನ ದೇಹ ಪಡೆಯುವುದು ಅನೇಕ ಮಂದಿಯ ಆಶಯ. ಆದರೆ, ತೊಡೆಯಲ್ಲಿ ಶೇಖರಣೆಗೊಳ್ಳುವ ಕೊಬ್ಬು ಇದಕ್ಕೆ ವಿಘ್ನವಾಗುತ್ತದೆ. ಕೆಲವರಿಗೆ ತೊಡೆಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬು ಅನೇಕ ಬಾರಿ ದೇಹದ ಆಕಾರದ ಕುರಿತು ಕಿರಿಕಿರಿ ಮೂಡಿಸುತ್ತದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ. ಜೀವನಶೈಲಿ ಬದಲಾವಣೆಯೊಂದಿಗೆ ಈ ಕೊಬ್ಬನ್ನು ಕರಗಿಸಬಹುದಾಗಿದೆ.
ಸೈಕಲ್ ತುಳಿಯಿರಿ: ತೊಡೆಯಲ್ಲಿ ಶೇಖರಣೆಗೊಳ್ಳುವ ಕೊಬ್ಬಿಗೆ ಅನೇಕ ಬಾರಿ ಕಾರಣ ಸುಲಭ ಸಾರಿಗೆ ವ್ಯವಸ್ಥೆ. ಈ ಹಿನ್ನೆಲೆ ಸೈಕಲ್ ತುಳಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯ. ಇದರಿಂದ ಕ್ಯಾಲೋರಿ ನಷ್ಟವಾಗುತ್ತದೆ. ಸಣ್ಣ ದೂರದ ಪ್ರಯಾಣಕ್ಕೆ ಸೈಕಲ್ಗಳನ್ನು ಆರಿಸಿಕೊಳ್ಳುವುದರಿಂದ ಪರಿಸರ ಸ್ನೇಹಿ ಜೊತೆಗೆ ತೊಡೆಯ ಕೊಬ್ಬು ಕರಗಿಸಬಹುದು.
ಹೈಡ್ರೇಟ್ ಆಗಿರಿ: ದೇಹದ ಯಾವತ್ತೂ ಉತ್ತಮವಾಗಿದ್ದು ಎಂದರೆ ಅದು ನೀರು. ನಿರ್ಜಲೀಕರಣವೂ ಅನೇಕ ಬಾರಿ ಚಯಾಪಚಯನವನ್ನು ಕಡಿಮೆ ಮಾಡುತ್ತದೆ. ಇದು ಕೊಬ್ಬಿನ ನಷ್ಟವನ್ನು ತಡೆಯುತ್ತದೆ. ಈ ಹಿನ್ನೆಲೆ ದಿನದಲ್ಲಿ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು. ಇದರಿಂದ ಚಯಾಪಚಯವೂ ಕೊಬ್ಬು ನಿರ್ವಹಣೆಗೆ ಸಹಾಯ ಮಾಡುತ್ತದೆ.
ಮೆಟ್ಟಿಲು ಬಳಕೆ ಮಾಡಿ: ಲಿಫ್ಟ್, ಎಲಿವೇಟರ್ಗಳು ಅನುಕೂಲಕರವಾಗಿದ್ದರೂ, ಮೆಟ್ಟಿಲು ಹತ್ತುವುದರಿಂದ ಸಣ್ಣ ವರ್ಕ್ಔಟ್ ಆಗುತ್ತದೆ. ಪ್ರತಿ ಮೆಟ್ಟಿಲು ಹತ್ತಿದಾಗ ಅದು ತೊಡೆಯ ಸ್ನಾಯುವಿನ ಮೇಲೆ ಪ್ರಭಾವ ಬೀರಿ ನಿಧಾನವಾಗಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
ಪೋಷಕಾಂಶ ಸಮೃದ್ಧ, ಕಡಿಮೆ ಕ್ಯಾಲೋರಿ ಆಹಾರ: ಪೋಷಕಾಂಶಗಳಿಂದ ಕೂಡಿದ ಕಡಿಮೆ ಕ್ಯಾಲೋರಿ ಆಹಾರ ಸೇವನೆಗೆ ಒತ್ತು ನೀಡಿ. ಹಣ್ಣು, ತರಕಾರಿ, ತೆಳು ಪ್ರೊಟೀನ್ ಮತ್ತು ಧಾನ್ಯಗಳಿಂದ ಕೂಡಿದ ಸಮತೋಲಿತ ಆಹಾರ ಸೇವಿಸಿ. ಇದು ನಿಮಗೆ ತೂಕ ನಷ್ಟ ಮಾತ್ರವಲ್ಲ, ಒಟ್ಟಾರೆ ಯೋಗಕ್ಷೇಮ ಸುಧಾರಣೆಗೆ ಸಹಾಯ ಮಾಡುತ್ತದೆ.
ಸ್ಕ್ವಾಟ್: ದೈನಂದಿನ ಚಟುವಟಿಕೆಯಲ್ಲಿ ವಾಲ್ ಸಿಟ್ಸ್ ಮತ್ತು ಸ್ಕ್ವಾಟ್ಗಳು ಕೂಡ ತೊಡೆ ಸ್ನಾಯು ಕರಗಿಸಲು ಸಹಾಯ ಮಾಡುತ್ತದೆ. ನಿರಂತರ ವ್ಯಾಯಾಮವು ಕೆಲವೇ ದಿನಗಳಲ್ಲಿ ಇದರ ಫಲಿತಾಂಶವನ್ನು ನೀಡುತ್ತದೆ.
ವಾಕಿಂಗ್ ಮತ್ತು ಜಾಗಿಂಗ್ ಶಕ್ತಿ: ಬಿರುಸಿನ ನಡುಗೆ ಅಥವಾ ಜಾಗಿಂಗ್ ಕೂಡ ಹೃದಯದ ಆರೋಗ್ಯ ಕಾಪಾಡುವ ಜೊತೆಗೆ ಕ್ಯಾಲೋರಿ ನಿರ್ವಹಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ತೊಡೆಯ ಕೊಬ್ಬು ಕರಗಿಸಲು ಸಹಾಯವಾಗುತ್ತದೆ. ವಿಶೇಷವಾಗಿ ಬೆಳಗಿನ ನಡಿಗೆ ನಿಮ್ಮ ದಿನವನ್ನು ಉತ್ಸಾಹಗೊಳಿಸಲು ಸಹಾಯ ಮಾಡುತ್ತದೆ.