ಹೈದರಾಬಾದ್: ಇಂದು ಬಹುತೇಕ ಮನೆಗಳಲ್ಲಿ ನೀರು ಸಂಗ್ರಹಕ್ಕೆ ವಾಟರ್ ಟ್ಯಾಂಗ್ ಅಳವಡಿಸಿರುತ್ತೇವೆ. ಇದರ ಮೂಲಕ ಮನೆಯೊಳಗೆ ಸದಾ ನೀರಿನ ಸೌಕರ್ಯ ಇರುವಂತೆ ನೋಡಿಕೊಳ್ಳುತ್ತೇವೆ. ಆದರೆ, ಈ ಟ್ಯಾಕ್ನ ಶುಚಿತ್ವ ಬಗ್ಗೆ ಬಹುತೇಕರು ಗಮನಹರಿಸುವುದಿಲ್ಲ. ಬೃಹದಾಕಾರದ ಈ ಟ್ಯಾಂಕ್ ಅನ್ನು ನಿಯಮಿತವಾಗಿ ಶುಚಿ ಮಾಡುವುದು ಅತ್ಯವಶ್ಯಕವಾಗಿದೆ. ದೀರ್ಘಕಾಲದಿಂದ ನೀರು ಸಂಗ್ರಹವಾಗುವ ಈ ನೀರು ಅಶುಚಿತ್ವಗೊಂಡರೆ ಅದು ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಟ್ಯಾಂಕ್ಗಳನ್ನು ಶುಚಿ ಮಾಡುವುದು ಒಂದು ದೊಡ್ಡ ಟಾಸ್ಕೇ ಸರಿ. ಇದೇ ಕಾರಣಕ್ಕೆ ಇದನ್ನು ಸ್ವಚ್ಛಗೊಳಿಸಲು ಪ್ಲಂಬರ್ ಕರೆಯುತ್ತಾರೆ. ಇದಕ್ಕಾಗಿ ಅವರು ಕೊಂಚ ಅಧಿಕ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ. ಆದರೆ, ವಾಟರ್ ಟ್ಯಾಂಕ್ ಶುದ್ಧ ಮಾಡುವುದು ಬಲು ಸುಲಭದ ಕೆಲಸ. ಈ ಕುರಿತ ಮಾಹಿತಿ ಇಲ್ಲಿದೆ.
ಬ್ಲೀಚಿಂಗ್ ಪೌಡರ್:ತಜ್ಞರ ಪ್ರಕಾರ, ಬ್ಲೀಚಿಂಗ್ ಪೌಡರ್ ಮತ್ತು ಲಿಕ್ವಿಡ್ಗಳು ವಾಟರ್ ಟ್ಯಾಂಕ್ ಅನ್ನು ಸುಲಭವಾಗಿ ಶುಚಿಗೊಳಿಸುತ್ತವೆ. ಇದಕ್ಕಾಗಿ ಮಾಡಬೇಕಿರುವ ಮೊದಲ ಕೆಲಸ ಟ್ಯಾಂಕ್ ಖಾಲಿ ಮಾಡಿ ಬಳಿಕ ಅದರ ಒಳಭಾಗದಲ್ಲಿ ಬ್ಲೀಚಿಂಗ್ ಪೌಡರ್ ಹಾಕುವುದು. ಒಂದು ಗಂಟೆ ಅದನ್ನು ಹಾಗೇ ಬಿಡಿ. ಬಳಿಕ ಬ್ರಶ್ ಮತ್ತು ಸ್ಕ್ರಬರ್ ಸಹಾಯದಿಂದ ಉಜ್ಜಿರಿ. ಬಳಿಕ ತಾಜಾ ನೀರಿನಿಂದ ತೊಳೆಯಿರಿ. ಇದರಿಂದ ಟ್ಯಾಂಕ್ ಕೆಳಗೆ ನಿಂತಿರುವ ಕೊಳೆ ನಿವಾರಣೆಯಾಗತ್ತದೆ.
ಡಿಟರ್ಜೆಂಟ್ ಪೌಡರ್: ಬ್ಲಿಚಿಂಗ್ ಹೊರತಾಗಿ ಡಿಟರ್ಜೆಂಟ್ ಪೌಡರ್ ಕೂಡಾ ಬಳಕೆ ಮಾಡಬಹುದು. ಬಕೆಟ್ನಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಸೋಪಿನ ಪುಡಿ ಹಾಕಿ ಸಲ್ಯೂಷನ್ ಮಾಡಿಕೊಳ್ಳಿ. ಬಳಿಕ ಈ ನೀರನ್ನು ಟ್ಯಾಂಕ್ನ ಒಳಗೊಡೆಗೆ ಹಚ್ಚಿ. ನೈಲನ್ ಬ್ರಶ್ ಅಥವಾ ಸ್ಪಾಂಜ್ನಿಂದ ಅದನ್ನು ತೊಳೆಯಿರಿ. ಬಳಿಕ ಶುದ್ದ ನೀರಿನಿಂದ ಶುಚಿ ಮಾಡಿ.