How Many Meals Should a Diabetic Eat:ನೀವು ಟೈಪ್ 2 ಡಯಾಬಿಟಿಸ್ ಇಲ್ಲವೇ ಪ್ರಿಡಯಾಬಿಟಿಸ್‌ನಿಂದ ಬಳಲುತ್ತಿದ್ದೀರಾ? ಹಾಗಾದ್ರೆ, ನೀವು ದಿನಕ್ಕೆ ಎಷ್ಟು ಬಾರಿ ಊಟ ಮಾಡುತ್ತೀರಿ? ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಊಟ ಮಾಡುತ್ತೀರಾ? ಅಂದ್ರೆ, ನೀವು ನಿಮ್ಮ ದೈನಂದಿನ ಊಟ ಮೂರು ಭಾಗಗಳಾಗಿ ವಿಂಗಡಿಸುತ್ತೀರಾ? ಆದರೆ, ಇದಕ್ಕೆ ವ್ಯತಿರಿಕ್ತವಾಗಿ ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
2018ರಲ್ಲಿ ಡಯಾಬಿಟಿಸ್ & ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಪ್ರಕಟವಾದ 'ಮಧುಮೇಹ ಇರುವ ಪ್ರತಿಯೊಬ್ಬರಿಗೂ ದಿನಕ್ಕೆ ಮೂರು ಊಟ ತಿನ್ನುವುದು ಸೂಕ್ತವಲ್ಲದಿರಬಹುದು: ಯಾದೃಚ್ಛಿಕ ನಿಯಂತ್ರಿತ ಪ್ರಯೋಗ' (Eating three meals a day may not be optimal for everyone with diabetes: A randomized controlled trial) ಎಂಬ ಅಧ್ಯಯನದಲ್ಲಿ ವಿಷಯವು ಬಹಿರಂಗವಾಗಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ನೀವು ನಿಜವಾಗಿಯೂ ಎಷ್ಟು ಬಾರಿ ಊಟ ಮಾಡಿದರೆ ಉತ್ತಮ ಎಂಬುದರ ಬಗ್ಗೆ ಅರಿತುಕೊಳ್ಳೋಣ.
ಅಧ್ಯಯನ ಏನು ಹೇಳುತ್ತೆ?:ಅಧ್ಯಯನದ ಭಾಗವಾಗಿ 47 ಡಯಾಬಿಟಿಸ್ ಹೊಂದಿರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿಯಿತು. ಎರಡು ಗುಂಪುಗಳಲ್ಲಿ ಪ್ರಿಡಿಯಾಬಿಟಿಸ್ ಇರುವ ಜನರು ಸೇರಿದ್ದರೆ, ಇನ್ನೊಂದು ಗುಂಪಿನಲ್ಲಿ ಟೈಪ್ 2 ಮಧುಮೇಹ ಇರುವವರು ಸೇರಿದ್ದಾರೆ. ಬಳಿಕ, ಅವರ ತೂಕವನ್ನು ಕಾಪಾಡಿಕೊಳ್ಳಲು ಆಹಾರಕ್ರಮವನ್ನು ಅನುಸರಿಸಲು ಅವರಿಗೆ ಸೂಚಿಸಲಾಯಿತು. ಅವರಲ್ಲಿ ಕೆಲವರು ದಿನಕ್ಕೆ ಮೂರು ಬಾರಿ ಊಟ ಮಾಡುತ್ತಾರೆ. ಮತ್ತು ಇತರರು ದಿನಕ್ಕೆ ಆರು ಊಟಗಳನ್ನು 12 ವಾರಗಳವರೆಗೆ ಸೇವಿಸಿದರು. ಬಳಿಕ ವಿಧಾನವನ್ನು ಬದಲಾಯಿಸಲಾಯಿತು ಹಾಗೂ ಇನ್ನೂ 12 ವಾರಗಳವರೆಗೆ ಮುಂದುವರಿಸಲಾಯಿತು.
24 ವಾರಗಳ ಬಳಿಕ ಅವರನ್ನು ಪರೀಕ್ಷಿಸಿದಾಗ, ಕಡಿಮೆ ಪ್ರಮಾಣದಲ್ಲಿ ಹೆಚ್ಚು ಬಾರಿ ಊಟ ಮಾಡಿದವರಿಗೆ ಉತ್ತಮ ಫಲಿತಾಂಶಗಳನ್ನು ಲಭಿಸಿರುವುದು ಕಂಡುಬಂದಿದೆ. ಎಲ್ಲರೂ ಒಂದೇ ಪ್ರಮಾಣದ ಕ್ಯಾಲೊರಿಗಳನ್ನು ಸೇವಿಸಿದರೂ, ಅವರ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಪ್ರಿಡಯಾಬಿಟಿಸ್ ಇರುವ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಮೂರು ಬಾರಿ ಊಟ ಮಾಡಿದವರಿಗಿಂತ ಆರು ಬಾರಿ ಊಟ ಮಾಡಿದವರಿಗೆ ಹಸಿವು ಕಡಿಮೆ ಇರುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.
ರಕ್ತದಲ್ಲಿನ ಗ್ಲೂಕೋಸ್ ಮಟ್ಟ:ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಹೆಚ್ಚು ಬಾರಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ಅಥವಾ ಪ್ರಿಡಯಾಬಿಟಿಸ್ ಇಲ್ಲದೆ ತೂಕ ನಷ್ಟಕ್ಕೆ ಈ ವಿಧಾನವನ್ನು ಬಳಸಬಾರದು. ದಿನಕ್ಕೆ ಆರು ಬಾರಿ ಊಟ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ.