ಹೈದರಾಬಾದ್:ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನಿರ್ಜಲೀಕರಣಕ್ಕೆ ಒಳಗಾಗಬಾರದು ಎಂದು ಯಥೇಚ್ಛವಾಗಿ ನೀರು ಸೇವನೆಗೆ ಮುಂದಾಗುತ್ತೇವೆ. ಅಥವಾ ಬಾಯಾರಿದಾಕ್ಷಣ ಅದನ್ನು ನೀಗಿಸಲು ಹೆಚ್ಚು ನೀರು ಸೇವಿಸುತ್ತೇವೆ. ಆದರೆ, ಈ ಎರಡು ಸ್ಥಿತಿಗಳು ಕೂಡ ಅಪಾಯಕಾರಿ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಲಕ್ನೋನ ಸಿಎಂಎಸ್ ಆಫ್ ಸಿವಿಲ್ ಆಸ್ಪತ್ರೆಯ ಡಾ ರಾಜೇಶ್ ಕುಮಾರ್ ಶ್ರೀವಾತ್ಸವ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ದೇಹದ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾಮಾನ್ಯವಾಗಿ ಆರೋಗ್ಯಯುತ ವಯಸ್ಕ ವ್ಯಕ್ತಿ ದಿನಕ್ಕೆ 3 ರಿಂದ 4 ಲೀ. ನೀರನ್ನು ಸೇವಿಸಬೇಕು.
ನೀರು ಸೇವಿಸುವಾಗ ಈ ಬಗ್ಗೆ ಗಮನವಹಿಸಿ
- ದಿನದಲ್ಲಿ ಅಂದರೆ 24 ಗಂಟೆ ಅವಧಿಯಲ್ಲಿ ಆರೋಗ್ಯಯುತ ವ್ಯಕ್ತಿ 3 ರಿಂದ 4 ಲೀಟರ್ ನೀರು ಸೇವನೆ ಮಾಡಿದರೆ ಸಾಕು. ಇದಕ್ಕಿಂತ ಹೆಚ್ಚಿನ ನೀರಿನ ಸೇವೆ ಆರೋಗ್ಯಕ್ಕೆ ಒಳಿತಲ್ಲ.
- ದೇಹದಲ್ಲಿ ಗ್ಲುಕೋಸ್ ನಷ್ಟ ಉಂಟಾಗುವುದು ಕಡಿಮೆ ನೀರು ಸೇವನೆಯಿಂದಲೂ ಆಗಿರುತ್ತದೆ.
- ನೀರನ್ನು ಒಂದೇ ಸಾರಿ ಕುಡಿಯದೇ ಗುಟುಕು ಗುಟುಕಾಗಿ ಕುಡಿಯಬೇಕು. ಇದರಿಂದ ದೇಹದ ತಾಪಮಾನದ ಸಮತೋಲನ ಕಾಪಾಡಬಹುದು.
- ಊಟವಾದ ತಕ್ಷಣಕ್ಕೆ ಅರ್ಧ ಲೀಟರ್ ನೀರು ಕುಡಿಯುವುದರಿಂದ ಕೂಡ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ.
- ಒಂದೇ ಬಾರಿಗೆ ಒಂದು ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದಲೂ ಆತಂಕ, ಗೊಂದಲ ಮತ್ತು ಬಿಪಿ ಸಮಸ್ಯೆ ಕಾಡುತ್ತದೆ.