ಹೈದರಾಬಾದ್:ತುಪ್ಪ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಹೆಚ್ಚಾಗುತ್ತದೆ ಎಂದು ಕೆಲವರು ಭಯಪಡುತ್ತಾರೆ. ತುಪ್ಪ ಹೃದಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಭಯಪಡುತ್ತಾರೆ. ಕೆಲವರಿಗೆ ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಿನ್ನಬೇಕೆನಿಸಿದರೂ ಬಾಯಿ ಮುಚ್ಚಿಸುತ್ತಾರೆ. ಆದರೆ, ವಿವಿಧ ಪೋಷಕಾಂಶಗಳ ಸಮ್ಮಿಶ್ರಣವಾಗಿರುವ ತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಹಲವು ಪೋಷಕಾಂಶಗಳ ಆಗರ: ತುಪ್ಪದಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಅದರಲ್ಲೂ ವಿಟಮಿನ್ ಎ, ಡಿ, ಇ, ಕೆ, ಕೊಬ್ಬಿನಾಮ್ಲಗಳಾದ ಒಮೆಗಾ-3, ಒಮೆಗಾ-6, ಲಿನೋಲಿಕ್, ಬ್ಯುಟರಿಕ್ ಆಸಿಡ್, ಆ್ಯಂಟಿಆಕ್ಸಿಡೆಂಟ್ ಮೊದಲಾದ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ನೆರವಾಗುತ್ತವೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ನಿಮ್ಮನ್ನು ಜಾಣರನ್ನಾಗಿ ಮಾಡುತ್ತದೆ. ಅದಕ್ಕೆ ಹೇಳುವುದು ಕೆಲವರನ್ನ ತುಪ್ಪ ತಿಂದ ತಲೆ ಅದು ಅಂತಾ. ಇನ್ನು ನಿತ್ಯದ ಆಹಾರದಲ್ಲಿ ತುಪ್ಪವನ್ನು ಸೇರಿಸುವುದರಿಂದ ದೇಹದಲ್ಲಿನ ನರಗಳ ಕಾರ್ಯನಿರ್ವಹಣೆಯು ಸುಧಾರಿಸುತ್ತದೆ ಎಂಬುದು ತಲತಲಾಂತರದಿಂದ ಬಂದ ನಂಬಿಕೆ ಕೂಡಾ ಹೌದು.
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ: ತಜ್ಞರು ಬೆಳಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಬಹುದು ಅಂತಾರೆ ಆರೋಗ್ಯ ತಜ್ಞರು. ಇದಲ್ಲದೇ, ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ: ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಆ ಸಮಸ್ಯೆಯಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
2018 ರಲ್ಲಿ 'ಅಲಿಮೆಂಟರಿ ಫಾರ್ಮಾಕಾಲಜಿ ಮತ್ತು ಥೆರಪ್ಯೂಟಿಕ್ಸ್' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿದಿನ 1 ಚಮಚ ತುಪ್ಪವನ್ನು ಸೇವಿಸುವುದು ಮಲಬದ್ಧತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಶೋಧನೆಯಲ್ಲಿ, 'ದಿ ಫಸ್ಟ್ ಅಫಿಲಿಯೇಟೆಡ್ ಹಾಸ್ಪಿಟಲ್ ಆಫ್ ನಾನ್ಜಿಂಗ್ ಮೆಡಿಕಲ್ ಯೂನಿವರ್ಸಿಟಿ'ಯಿಂದ ಪ್ರಮುಖ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. X.Y. ಜಾಂಗ್ ಭಾಗವಹಿಸಿದ್ದರು. ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಅದರ ಪೋಷಕಾಂಶಗಳಿಂದಾಗಿ ಮಲಬದ್ಧತೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ತೂಕ ನಿಯಂತ್ರಣ:ದಿನವೂ ಬೆಳಿಗ್ಗೆ ತುಪ್ಪವನ್ನು ಸೇವಿಸುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹಸಿವಿನ ಕಡು ಬಯಕೆಗಳನ್ನು ಕಡಿಮೆ ಮಾಡಲು ಮತ್ತು ಪೂರ್ಣತೆಯ ಭಾವನೆಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.