ನವದೆಹಲಿ: ಫ್ಲೆಕ್ಸಿಟೇರಿಯನ್ ಡಯಟ್ನಿಂದ ಹೃದಯ ರೋಗದ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತೋರಿಸಿದೆ. ಅರೆ ಸಸ್ಯಹಾರಿ ಡಯಟ್ ಎಂದು ಕರೆಯಲಾಗುವ ಫ್ಲೆಕ್ಸಿಟೇರಿಯನ್ ಡಯಟ್ನಲ್ಲಿ ಸಸ್ಯಾಧಾರಿತ ಆಹಾರ ಸೇವನೆ ಹೆಚ್ಚಿದ್ದು, ಕಡಿಮೆ ಅಥವಾ ಅಪರೂಪಕ್ಕೆ ಮಾಂಸ ಸೇವನೆಯನ್ನು ಒಳಗೊಂಡಿರುತ್ತದೆ.
ಈ ಹೊಸ ಅಧ್ಯಯನವನ್ನು ಜರ್ನಲ್ ಬಿಎಂಸಿ ನ್ಯೂಟ್ರಿಷನ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಮಾಂಸಾಧಾರಿತ ಆಹಾರ ಸೇವನೆಗಿಂತ ಸಸ್ಯಾಧಾರಿತ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದನ್ನು ತೋರಿಸಲಾಗಿದೆ.
ಹೃದಯ ಆರೋಗ್ಯದ ಮೇಲೆ ಫ್ಲೆಕ್ಸಿಟೇರಿಯನ್ ಆಹಾರವೂ ಎಷ್ಟು ಪರಿಣಾಮಕಾರಿ ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ 25 ರಿಂದ 45 ವರ್ಷದ 94 ಮಂದಿ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ. ಭಾಗಿದಾರರು ಅಧ್ಯಯನ ಆರಂಭವಾಗುವ ಒಂದು ವರ್ಷ ಮುಂಚೆ ವೆಗನ್ ಮತ್ತು ಸರ್ವಭಕ್ಷ ಅಥವಾ ಫ್ಲೆಕ್ಸಿಟೇರಿಯನ್ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದರು. ಭಾಗಿದಾರರ ಹವ್ಯಾಸ ಮತ್ತು ಜೀವನಶೈಲಿಯ ಅಂಶವನ್ನು ಪ್ರಶ್ನಾವಳಿಗಳ ಮೂಲಕ ಮೌಲ್ಯಮಾಪನ ಮಾಡಲಾಗಿದೆ.
ದಿನವೊಂದಕ್ಕೆ ಭಾಗಿದಾರರೊಬ್ಬರು 50 ಗ್ರಾಂ ಮಾಂಸವನ್ನು ಸೇವಿಸಿದರೆ ಅವರನ್ನು ಫ್ಲೆಕ್ಸಿಟೇರಿಯನ್ ವರ್ಗಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇನ್ನು 170 ಗ್ರಾಂ ಮತ್ತು ಅದಕ್ಕಿಂತ ಹೆಚ್ಚಿನ ಮಾಂಸ ಸೇವಿಸುವವರನ್ನು ಸರ್ವಭಕ್ಷಕ ವರ್ಗದಲ್ಲಿ ಗುರುತಿಸಲಾಗಿದೆ. ಇನ್ನು ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದವರನ್ನು ವೆಗಾನ್ ಎಂಬ ಮೂರನೇ ವರ್ಗದಲ್ಲಿ ಗುರುತಿಸಲಾಗಿದೆ.