Fever Treatment in Ayurveda: ಮಳೆಗಾಲ ಬಂತೆಂದರೆ ಸಾಕು, ಋತುಮಾನಕ್ಕೆ ತಕ್ಕಂತೆ ಕೆಲವು ರೋಗಗಳು ನಮ್ಮನ್ನು ಕಾಡುತ್ತವೆ. ಡೆಂಗ್ಯೂ, ಮಲೇರಿಯ, ವೈರಲ್ ಸೇರಿದಂತೆ ವಿವಿಧ ಜ್ವರಗಳಿಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ತುತ್ತಾಗುತ್ತಾರೆ. ಇಂತಹ ಜ್ವರಗಳನ್ನು ಕೇವಲ ಇಂಗ್ಲಿಷ್ ಔಷಧಿಗಳಲ್ಲದೇ ಆಯುರ್ವೇದ ಔಷಧದ ವಿಧಾನಗಳಿಂದಲೂ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.
ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದಲೇ ಸುಲಭವಾಗಿ ಔಷಧವನ್ನು ತಯಾರಿಸಬಹುದು ಎಂದು ಖ್ಯಾತ ಆಯುರ್ವೇದ ತಜ್ಞೆ ಡಾ.ಗಾಯತ್ರಿದೇವಿ ತಿಳಿಸುತ್ತಾರೆ. ಈ ಮನೆಮದ್ದು ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು ಯಾವವು? ಈ ಔಷಧ ಉತ್ಪಾದಿಸಿವುದು ಹೇಗೆ ತಿಳಿಯೋಣ.
ಬೇಕಾಗುವ ಪದಾರ್ಥಗಳು:
- 50 ಗ್ರಾಂ ನೆಲ ವೇಮು ಪುಡಿ
- 50 ಗ್ರಾಂ ಬೇವಿನ ಪುಡಿ
- 50 ಗ್ರಾಂ ತುಳಸಿ ಪುಡಿ (ಎಲೆಗಳು, ಕಾಂಡಗಳು)
- 50 ಗ್ರಾಂ ತಿಪ್ಪೆಟಿಗ ಪುಡಿ
- 50 ಗ್ರಾಂ ಪುನರ್ನವ ಚೂರ್ಣ
ಉತ್ಪಾದನಾ ಪ್ರಕ್ರಿಯೆ:
- ಮೊದಲು ಒಲೆ ಹೊತ್ತಿಸಿ ಕಡಾಯಿಯನ್ನು ಇಡಿ. ಅದರಲ್ಲಿ ಒಂದು ಲೋಟ ನೀರು ಹಾಕಿ ಕುದಿಯಲು ಬಿಡಿ.
- ನೀರು ಬಿಸಿಮಾಡುವ ಮುನ್ನ ಔಷಧ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ ಮಿಶ್ರಣ ಮಾಡಬೇಕು.
- ನಂತರ ಕುದಿಯುವ ನೀರಿಗೆ ಮೊದಲು ಮಿಶ್ರಣ ಮಾಡಿಟ್ಟ ಔಷಧ ಪದಾರ್ಥಗಳನ್ನು ಒಂದು ಚಮಚದಷ್ಟು ಸೇರಿಸಿ.
- ಅದರ ನಂತರ, ಮಧ್ಯಮ ಉರಿಯಲ್ಲಿ ಉಳಿದ ಔಷಧ ಪದಾರ್ಥಗಳನ್ನು ನಿಧಾನವಾಗಿ ಮಿಶ್ರಣ ಮಾಡಿ ಮತ್ತು ಎರಡು ನಿಮಿಷಗಳ ನಂತರ ಒಲೆಯನ್ನು ಆಪ್ ಮಾಡಿ
- ಆ ನಂತರ ಜರಡಿಯಿಂದ ಸೋಸಿ ಪಕ್ಕಕ್ಕಿಟ್ಟರೆ ಔಷಧ ರೆಡಿಯಾಗುತ್ತದೆ.
- ಜ್ವರದಿಂದ ಬಳಲುತ್ತಿರುವವರು ಯಾವಾಗಲೂ ಈ ಔಷಧವನ್ನು ಬೆಚ್ಚಗಿನ ನೀರಿನಿಂದ ಸೇವಿಸಬೇಕು. 40ರಿಂದ 50 ಮಿಲಿ ದಿನಕ್ಕೆ 3 ಬಾರಿ ತೆಗೆದುಕೊಳ್ಳಬೇಕು.
- ಜ್ವರದ ಆರಂಭಿಕ ಹಂತದಲ್ಲೇ ಬೆಳಗ್ಗೆ ಮತ್ತು ರಾತ್ರಿ 30 ಮಿಲಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
- ಇಂಗ್ಲಿಷ್ ಔಷಧ ಬಳಸುವವರು ಈ ಆಯುರ್ವೇದದ ಮದ್ದನ್ನು ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು, ನಂತರ ಮಾತ್ರ ಸೇವಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.
ನೆಲ ವೇಮು ಪುಡಿ:ಅದರಲ್ಲೂ ಮಳೆಗಾಲದಲ್ಲಿ ಬರುವ ವಿಷಕಾರಿ ಜ್ವರಗಳಿಗೆ ನೆಲ ವೇಮು ಪುಡಿಯು ಜ್ವರ ಕಡಿಮೆ ಮಾಡಲು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯರು.