ಕರ್ನಾಟಕ

karnataka

ETV Bharat / health

ಸಸ್ಯಾಹಾರ ಸೇವನೆ ನಿಮ್ಮನ್ನು ಬೇಗ ಮುದುಕರಾಗದಂತೆ ತಡೆಯುವಲ್ಲಿ ಸಹಕಾರಿ: ಅಧ್ಯಯನ - vegan diet - VEGAN DIET

ಸಸ್ಯಾಹಾರ ತಿನ್ನುವುದರಿಂದ ವಯಸ್ಸಾಗುವಿಕೆಯ ಪ್ರಮಾಣ( ವೇಗವಾಗಿ ಮುದುಕರಾಗುವುದನ್ನ) ನ್ನು ಕಡಿಮೆಗೊಳಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

FOOD
ಆಹಾರ (IANS)

By IANS

Published : Jul 29, 2024, 4:46 PM IST

Updated : Jul 29, 2024, 4:56 PM IST

ನವದೆಹಲಿ : ಎಂಟು ವಾರಗಳ ಕಾಲ ಸಸ್ಯಾಹಾರವನ್ನು ಸೇವಿಸುವುದರಿಂದ ವಯಸ್ಸಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂದರೆ ನಿಮ್ಮನ್ನು ಆದಷ್ಟು ಯಂಗ್​ ಆಗಿರುವಂತೆ ಮಾಡುವಲ್ಲಿ ಈ ಸಸ್ಯಾಹಾರ ಭಾರಿ ನೆರವು ನೀಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಪ್ರತಿಯೊಬ್ಬ ಮಾನವನ ದೈಹಿಕ ವಯಸ್ಸು ಮತ್ತು ಜೈವಿಕ ವಯಸ್ಸು ವಿಭಿನ್ನವಾಗಿರುತ್ತದೆ. ಇದನ್ನು ತಿಳಿದುಕೊಳ್ಳುವುದು ಮಧುಮೇಹ ಅಥವಾ ಬುದ್ಧಿಮಾಂದ್ಯತೆಯ ಅಪಾಯವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಹೆಚ್ಚು ಸಹಾಯ ಮಾಡುತ್ತದೆ. BMC ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಈ ಬಗ್ಗೆ ಅಧ್ಯಯನ ನಡೆಸಿದೆ. ಈ ಅಧ್ಯಯನದ ಪ್ರಕಾರ, ವಯಸ್ಸಿನ ಕಡಿಮೆಗೊಳಿಸುವಿಕೆಯು DNA ಯ ಒಂದು ರೀತಿಯ ರಾಸಾಯನಿಕ ಮಾರ್ಪಾಡು (ಎಪಿಜೆನೆಟಿಕ್ ಮಾರ್ಪಾಡು ಎಂದೂ ಕರೆಯಲ್ಪಡುತ್ತದೆ) ಇದು ಜೀನ್ ಅಭಿವ್ಯಕ್ತಿಯನ್ನು ಬದಲಾಯಿಸುತ್ತದೆ. ಆದರೆ DNA ಅನ್ನು ಅಲ್ಲ ಎಂದು ಅದು ಹೇಳಿದೆ.

ಹೊಸ ಅಧ್ಯಯನದಲ್ಲಿ ಅವಳಿ 21 ಜೋಡಿ ವಯಸ್ಕರರನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಲಾಗಿತ್ತು. ಇವರ ಮೇಲೆ ಅಲ್ಪಾವಧಿಯ ಸಸ್ಯಾಹಾರಿ ಆಹಾರದ ಆಣ್ವಿಕ ಪರಿಣಾಮಗಳನ್ನು ವ್ಯವಸ್ಥಿತವಾಗಿ ಅಂದರೆ ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿತ್ತು.

ಈ ಅಧ್ಯಯನದಲ್ಲಿ ತಂಡದ ಅರ್ಧದಷ್ಟು ಜನರಿಗೆ ಎಂಟು ವಾರದವರೆಗೆ ಸರ್ವಭಕ್ಷಕ ಆಹಾರವನ್ನು ಸೇವಿಸಲು ಸೂಚಿಸಲಾಗಿತ್ತು. ಅವರಿಗೆ 170 ರಿಂದ 225 ಗ್ರಾಂ ಮಾಂಸ, ಒಂದು ಮೊಟ್ಟೆ ಮತ್ತು ಪ್ರತಿ ದಿನ ಡೈರಿ ಆಹಾರ ಸೇವಿಸುವಂತೆ ಸೂಚಿಸಲಾಗಿತ್ತು. ಇನ್ನುಳಿದ ಜನರಿಗೆ ಇದೇ ದೀರ್ಘಾವಧಿಯ ಸಮಯದವರೆಗೆ ಸಸ್ಯಾಹಾರವನ್ನೇ ತಿನ್ನಲು ನೀಡಲಾಗಿತ್ತು.

ಸಸ್ಯಾಹಾರಿ ಆಹಾರವನ್ನು ಸೇವಿಸಿದವರಲ್ಲಿನ ವಯಸ್ಸಾಗುವಿಕೆ ಪ್ರಮಾಣ ಸರ್ವಭಕ್ಷಕ ಆಹಾರ ಸೇವಿಸಿದವರಿಗಿಂತ ಕಡಿಮೆಯಾಗಿತ್ತು. ಸಸ್ಯಾಹಾರಿ ಆಹಾರವನ್ನು ಸೇವಿಸಿದ ಜನರ ಹೃದಯ, ಹಾರ್ಮೋನ್, ಯಕೃತ್ತು ಆರೋಗ್ಯಯುತವಾಗಿತ್ತು ಮತ್ತು ಉರಿಯೂತ ಮತ್ತು ಚಯಾಪಚಯ ವ್ಯವಸ್ಥೆ ಸೇರಿದಂತೆ ವಯಸ್ಸಾಗುವಿಕೆಯೂ ಸಹ ಕಡಿಮೆಯಾಗಿತ್ತು. ಕ್ಯಾಲೋರಿ ಅಂಶಗಳಲ್ಲಿನ ವ್ಯತ್ಯಾಸಗಳಿಂದಾಗಿ ಅವರು ಸರ್ವಭಕ್ಷಕ ಆಹಾರವನ್ನು ಸೇವಿಸಿದವರಿಗಿಂತ ಸರಾಸರಿ ಎರಡು ಕಿಲೋಗ್ರಾಂಗಳಷ್ಟು ಹೆಚ್ಚು ತೂಕವನ್ನು ಕಳೆದುಕೊಂಡಿದ್ದರು.

ಸಂಶೋಧನೆಗಳು ಸ್ಪಷ್ಟವಾಗಿಲ್ಲ, ಆಹಾರದ ಸಂಯೋಜನೆ, ತೂಕ ಮತ್ತು ವಯಸ್ಸಾಗುವಿಕೆಯ ನಡುವಿನ ಸಂಬಂಧವನ್ನು ಮತ್ತಷ್ಟು ತನಿಖೆ ಮಾಡುವ ಅಗತ್ಯವಿದೆ ಎಂದು ಸಂಶೋಧನಾ ತಂಡವು ಒತ್ತಿ ಹೇಳಿದೆ.

ಏನಿದು ಜೈವಿಕ ವಯಸ್ಸು:ಕಾಲಾನುಕ್ರಮದ ವಯಸ್ಸು ಅಂದರೆ ನೀವು ಅಸ್ತಿತ್ವದಲ್ಲಿರುವ ಲೆಕ್ಕವಾಗಿದೆ. ಆದರೆ, ಜೈವಿಕ ವಯಸ್ಸು ನಿಮ್ಮ ಜೀವಕೋಶಗಳು ಎಷ್ಟು ಹಳೆಯದು ಎಂಬುದನ್ನು ಹೇಳುವ ಕ್ರಮವಾಗಿದೆ. ಕೆಲವೊಮ್ಮೆ ಈ ಎರಡು ಸಂಖ್ಯೆಗಳು ಕೆಲವರಲ್ಲಿ ಒಂದೇ ಆಗಿರಬಹುದು. ಆದರೆ ಪ್ರತಿಯೊಬ್ಬರೂ ವಿಭಿನ್ನ ವಯಸ್ಸಿನವರಾಗಿರುತ್ತಾರೆ.

ದೈಹಿಕ ವಯಸ್ಸು ( ಕಾಲಾನುಕ್ರಮದ ವಯಸ್ಸು):ನಿಮ್ಮ ಪ್ರಸ್ತುತ ವಯಸ್ಸು ಎಂದರೆ ಒಬ್ಬ ವ್ಯಕ್ತಿಯು ಹುಟ್ಟಿದ ಸಮಯದಿಂದ ಅವನ ವಯಸ್ಸು, ಅಥವಾ ಸಮಯ. ಯಾರಾದರೂ ನಿಮ್ಮ ವಯಸ್ಸನ್ನು ಕೇಳಿದಾಗ ಸಾಮಾನ್ಯವಾಗಿ ನಾವು ಹುಟ್ಟಿದಾಗಿನಿಂದ ಈಗಿನ ವರೆಗಿನ ಲೆಕ್ಕವನ್ನು ನೀಡುವುದಾಗಿದೆ. ವರ್ಷಗಳು, ತಿಂಗಳುಗಳು ಮತ್ತು ದಿನಗಳ ಲೆಕ್ಕದಲ್ಲಿ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ :ಹಾರ್ಟ್​ ಬ್ಲಾಕ್​ ತಡೆಗೆ ಕೆಟ್ಟ ಕೊಲೆಸ್ಟ್ರಾಲ್​ ನಿಯಂತ್ರಣವೇ ಮಾರ್ಗ; ವೈದ್ಯರಿಂದ ಹೃದಯದ ಮಾತು - plaque in the arteries of the heart

Last Updated : Jul 29, 2024, 4:56 PM IST

ABOUT THE AUTHOR

...view details