Easy Tips To Clean Water Bottles :ಬಹುತೇಕರು ಎಲ್ಲಿಗೇ ಹೋದರೂ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯುತ್ತೇವೆ. ಮೇಲಾಗಿ.. ಮನೆಯಲ್ಲಿಯೂ ಬಾಟಲಿ ನೀರು ಕುಡಿಯುತ್ತಿದ್ದೇವೆ. ಆದರೆ ಆ ಬಾಟಲ್ಗಳ ಸ್ವಚ್ಛತೆಗೆ ಬಗ್ಗೆ ನಿಷ್ಕಾಳಜಿ ವಹಿಸುವುದುಂಟು.
ಒಂದು ವೇಳೆ ನಾವು ಬಾಟಲಿಗಳನ್ನು ಹೇಗೆ ಸ್ವಚ್ಛಗೊಳಿಸುತ್ತೇವೆ ಎಂದ್ರೆ, ಬಾಟಲಿ ಮೇಲ್ಭಾಗದಲ್ಲಿ ಮಾತ್ರ ಶುಚಿಗೊಳಿಸಿ ಕೈಗಳನ್ನು ತೊಳೆದುಕೊಳ್ಳುತ್ತೇವೆ. ಆದರೆ ಹೀಗೆ ಶುಚಿಗೊಳಿಸುವುದರಿಂದ ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ದುರ್ವಾಸನೆ ಬೀರುತ್ತವೆ. ಜೊತೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅದಕ್ಕೇ.. ಈ ಟಿಪ್ಸ್ ಪಾಲಿಸಿ ನೀರಿನ ಬಾಟಲಿಗಳನ್ನು ಕ್ಲೀನ್ ಮಾಡಿದರೆ ದುರ್ವಾಸನೆ ದೂರವಾಗಿ ಹೊಸದರಂತೆ ಕಾಣುತ್ತವೆ.
ಡಿಶ್ ವಾಷಿಂಗ್ ಲಿಕ್ವಿಡ್: ಮೊದಲು ನೀರಿನ ಬಾಟಲಿಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸುರಿಯಿರಿ. ಅದರ ನಂತರ, ಡಿಶ್ ವಾಷಿಂಗ್ ಲಿಕ್ವಿಡ್ನ ಕೆಲವು ಹನಿಗಳನ್ನು ಹಾಕಿ. ಬಳಿಕ ಕ್ಯಾಪ್ ಅನ್ನು ಹಾಕಿ ಚೆನ್ನಾಗಿ ಅಲ್ಲಾಡಿಸಿ ಮತ್ತು 2 ರಿಂದ 4 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಬಳಿಕ ಬ್ರಶ್ ಸಹಾಯದಿಂದ ಬಾಟಲಿಯ ಒಳಭಾಗವನ್ನು ಸ್ಕ್ರಬ್ ಮಾಡಿ ತೊಳೆಯಿರಿ. ಆದರೆ, ಇದರಲ್ಲಿರುವ ರಾಸಾಯನಿಕಗಳನ್ನು ತೊಳೆಯಲು ಕೊನೆಯಲ್ಲಿ ಸ್ವಲ್ಪ ಉಪ್ಪು ಹಾಕಲು ಮರೆಯಬೇಡಿ ಅಂತಾರೆ ತಜ್ಞರು. ಅಲ್ಲದೆ ಬಾಟಲಿಯ ಮುಚ್ಚಳವನ್ನು ಸ್ವಚ್ಛವಾಗಿ ತೊಳೆಯಿರಿ. ಸ್ವಲ್ಪ ಹೊತ್ತು ಒಣಗಿಸಿ ನಂತರ ಬಳಸಿದರೆ ಉತ್ತಮ ಎನ್ನುತ್ತಾರೆ ತಜ್ಞರು.
ಆದರೆ ತಾಮ್ರದ ನೀರಿನ ಬಾಟಲಿಗಳನ್ನು ಉಪ್ಪಿನಿಂದ ತೊಳೆಯಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಹೀಗೆ ಮಾಡಿದರೆ ಅದು ರಾಸಾಯನಿಕವಾಗಿ ಪ್ರತಿಕ್ರಿಯಿಸಿ ಕಾಪರ್ ಕ್ಲೋರೈಡ್ ಅನ್ನು ರೂಪಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ.. ಬದಲಿಗೆ ಬಿಸಿ ನೀರಿನಿಂದ ಸ್ವಚ್ಛಗೊಳಿಸುವುದು ಉತ್ತಮ.
ನಿಂಬೆ ಮತ್ತು ಬೇವಿನ ಮಿಶ್ರಣ:ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಮತ್ತು ನೀರಿನ ಬಾಟಲಿಗಳನ್ನು ಸ್ವಚ್ಛಗೊಳಿಸುವಲ್ಲಿ ನಿಂಬೆ ಮತ್ತು ಬೇವಿನ ಮಿಶ್ರಣವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ಮೊದಲು ಸ್ವಲ್ಪ ಬೇವಿನ ಪುಡಿ ಮತ್ತು ನಿಂಬೆರಸವನ್ನು ಬಾಟಲಿಗೆ ಹಾಕಿ ಅದರಲ್ಲಿ ನೀರು ತುಂಬಿಸಿ ಎರಡು ಮೂರು ಗಂಟೆಗಳ ಕಾಲ ಹಾಗೆ ಇಡಿ. ಬಳಿಕ ಸ್ವಚ್ಛ ನೀರಿನಿಂದ ತೊಳೆದರೆ ಸಾಕು ಎನ್ನುತ್ತಾರೆ ತಜ್ಞರು.