ಕರ್ನಾಟಕ

karnataka

ETV Bharat / health

ಭಾರತದ ದುಡಿಯುವ ವರ್ಗದಲ್ಲಿ ಕುರುಡುತನಕ್ಕೆ ಕಾರಣವಾಗುತ್ತಿರುವ ಮಧುಮೇಹ - blindness in working age Indians

ಮಧುಮೇಹವೂ ಗ್ಲುಕೋಮವನ್ನು ದುಪ್ಪಟ್ಟು ಗೊಳಿಸುವ ಸಾಧ್ಯತೆ ಇದೆ. ಇದು ಆಪ್ಟಿಕ್​ ನರಗಳಿಗೆ ಹಾನಿಯನ್ನು ಮಾಡುತ್ತದೆ. ಈ ನರವೂ ಕಣ್ಣು ಮತ್ತು ಮಿದುಳಿಗೆ ದೃಶ್ಯ ಮಾಹಿತಿಯನ್ನು ಕಳುಹಿಸುವ ನರವಾಗಿದೆ.

Diabetes is known to double the chances of having glaucoma
Diabetes is known to double the chances of having glaucoma

By ETV Bharat Karnataka Team

Published : Mar 12, 2024, 2:43 PM IST

ನವದೆಹಲಿ: ದುಡಿಯುವ ವಯಸ್ಸಿನ ಗುಂಪಿನ ಜನರಲ್ಲಿ ಕುರುಡುತನಕ್ಕೆ ಮಧುಮೇಹವೂ ಕಾರಣವಾಗುತ್ತಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಗ್ಲುಕೋಮ ದಿನದವನ್ನು ಪ್ರತಿ ವರ್ಷ ಮಾರ್ಚ್​ 12ರಂದು ಆಚರಿಸಲಾಗುತ್ತದೆ. ದೃಷ್ಟಿ ದೋಷಕ್ಕೆ ಕಾರಣವಾಗುವ ಆಪ್ಟಿಲ್​ ನರ ಮತ್ತು ಕಣ್ಣಿನ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಬೇಕಿರುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು.

ಮಧುಮೇಹವೂ ಗ್ಲುಕೋಮವನ್ನು ದುಪ್ಪಟ್ಟು ಗೊಳಿಸುವ ಸಾಧ್ಯತೆ ಇರುತ್ತದೆ. ಇದು ಆಪ್ಟಿಕ್​ ನರಗಳಿಗೆ ಹಾನಿಯನ್ನು ಮಾಡುತ್ತದೆ. ಈ ನರವೂ ಕಣ್ಣು ಮತ್ತು ಮಿದುಳಿಗೆ ದೃಶ್ಯ ಮಾಹಿತಿಯನ್ನು ಕಳುಹಿಸುವ ನರವಾಗಿದೆ. ಮಧುಮೇಹ ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ಅದು ಕಣ್ಣಿನ ಪ್ರಮುಖ ಭಾಗವಾದ ಕಣ್ಣುಗುಡ್ಡೆ, ಕಾರ್ನಿಯಾ, ಲೆನ್ಸ್​​, ರೆಟಿನಾ ಮತ್ತು ಕಣ್ಣಿನ ರಕ್ತ ನಾಳದ ಮೇಲೆ ಪರಿಣಾಮ ಬೀರುತ್ತದೆ. ಇದು ಕಣ್ಣಿನ ಒತ್ತಡಕ್ಕೆ ಕೂಡ ಕಾರಣವಾಗುತ್ತದೆ ಎಂದು ವೈಶಾಲಿಯ ಮಾಕ್ಸ್​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ಮಧುಮೇಹ ಮತ್ತು ಎಂಡೋಕ್ರಿನೊಲಾಜಿ ವೈದ್ಯರಾದ ಡಾ ಐಶ್ವರ್ಯಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಮಧುಮೇಹವೂ ದುಡಿಯುವ ವರ್ಗದ ಗುಂಪಿನಲ್ಲಿ ಕುರುಡುತನಕ್ಕೆ ಕಾರಣವಾಗುತ್ತದೆ. ರೆಟಿನಾದಲ್ಲಿನ ರಕ್ತನಾಳಗಳು ಊತ ಮತ್ತು ದ್ರವ ಸೋರಿಕೆ ಆಗುತ್ತದೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದಲ್ಲಿ, ಇದು ದೃಷ್ಟಿ ದೋಷ ಅಥವಾ ರೆಟಿನಾ ಅಸಂಪರ್ಕದಂತಹ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಈ ವೇಳೆ, ರೆಟಿನಾವೂ ಕಣ್ಣಿನ ಹಿಂಬದಿಯಲ್ಲಿದ್ದು, ತನ್ನ ಸ್ಥಾನದಿಂದ ಪಲ್ಲಟವಾಗಬಹುದು ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಹಿರಿಯ ಎಂಡೋಕ್ರಿನಾಲೊಜಿಸ್ಟ್​​ ಡಾ ಸುರೇಂದ್ರ ಕುಮಾರ್​ ತಿಳಿಸಿದ್ದಾರೆ.

ಲ್ಯಾನ್ಸೆಟ್​ ಜರ್ನಲ್​ನಲ್ಲಿ ಪ್ರಕಟವಾದ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಸರಿಸಮಾರು 21 ಮಿಲಿಯನ್​ ಜನರು ದೃಷ್ಟಿ ದೋಷ ಹೊಂದಿದ್ದು, ಇದರಲ್ಲಿ 2.4 ಮಿಲಿಯನ್​ ಜನರು ಕರುಡುತನ ಹೊಂದಿದ್ದಾರೆ. ಮಧುಮೇಹದಿಂದಾಗಿ ಈ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದೇಶದಲ್ಲಿ ದೃಷ್ಟಿ ದೋಷದ ಅಪಾಯದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ. ಇಂಟರ್ನ್ಯಾಷನಲ್​ ಫೆಡೆರೇಷನ್​ ಡಯಾಬೀಟಿಸ್​​ ಅಟ್ಲಾಸ್​ 2021ರ 10ನೇ ಸಂಚಿಕೆಯಲ್ಲಿ ತಿಳಿಸಿರುವಂತೆ, ಭಾರತದಲ್ಲಿ 20-79 ವರ್ಷದ ಸುಮಾರು 74 ಮಿಲಿಯನ್​ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಸಂಖ್ಯೆಯು 2045ರ ಹೊತ್ತಿಗೆ 125 ಮಿಲಿಯನ್​ ಆಗುವ ಸಾಧ್ಯತೆ ಇದೆ.

ಕಣ್ಣಿನ ಅನೇಕ ಸಮಸ್ಯೆಗಳಿಗೆ ಕಾರಣವಾಗುವಲ್ಲಿ ಮಧುಮೇಹ ಪ್ರಮುಖವಾಗಿದೆ. ಇದರಿಂದ ಮಧುಮೇಹ ರೆಟಿನೊಪತಿಮ, ಕ್ಯಾಟ್ರಕ್ಟ್​, ಗ್ಲುಕೋಮ, ಮಾಕ್ಯೂಲರ್​ ಎಡೆಮಾ, ಒಣ ಕಣ್ಣಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಹೋದಲ್ಲಿ ದೃಷ್ಟಿಯನ್ನು ಕಡಿಮೆ ಅಥವಾ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ ನಿರ್ದೇಶಕ ಡಾ ರಾಜೀವ್​ ಗುಪ್ತಾ ತಿಳಿಸಿದ್ದಾರೆ

ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್​ ನಿಯಂತ್ರಿಸುವ ಮೂಲಕ ಈ ದೃಷ್ಟಿ ದೋಷವೂ ತಡೆಗಟ್ಟುವಂತಹದ್ದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಧುಮೇಹ ಹೊಂದಿರುವ ಎಲ್ಲ ರೋಗಿಗಳು ನಿಯಮಿತ ಕಣ್ಣಿನ ತಪಾಸಣೆಗೆ ಒಳಗಾಗುವುದು. ಆರೋಗ್ಯಯುತ ಆಹಾರ ಸೇವನೆ. ನಿಯಮಿತ ದೈಹಿ ಚಟುವಟಿಕೆ. ಧೂಮಪಾನದಿಂದ ದೂರ ಇರುವಂತಹ ಸಲಹೆ ಅನುಕರಣೆಗೆ ಅಧ್ಯಯನ ಶಿಫಾರಸು ಮಾಡಿದ್ದಾರೆ. (ಐಎಎನ್​​ಎಸ್​)

ಇದನ್ನೂ ಓದಿ: ಮಧುಮೇಹ ಅಪಾಯ ತಗ್ಗಿಸಲು ಡಯಟ್​ ಮಾತ್ರವಲ್ಲ, ತಿನ್ನುವ ಸಮಯವೂ ಮುಖ್ಯ: ಅಧ್ಯಯನ

ABOUT THE AUTHOR

...view details