ಹೈದರಾಬಾದ್:ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಮತ್ತು ಸೋಡಾ ಕುಡಿದರೆ ಬಿಸಿಲಿನ ತಾಪದಿಂದ ತಕ್ಷಣ ಪರಿಹಾರ ಸಿಗುತ್ತದೆ. ಆದರೆ, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತಜ್ಞರು ಸಾಮಾನ್ಯವಾಗಿ 250 - 300 ಮಿಲಿ ತಂಪು ಪಾನೀಯದಲ್ಲಿ 150-200 ಕ್ಯಾಲೋರಿ ಇರುತ್ತದೆ ಎಂದು ಹೇಳುತ್ತಾರೆ. ವಿಶೇಷವಾಗಿ ತಂಪು ಪಾನೀಯವು ಹೆಚ್ಚಿನ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಇದರಿಂದ ಮಧುಮೇಹ, ಬಿಪಿ, ಹೃದ್ರೋಗ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೂಡಾ ನೀಡಿದ್ದಾರೆ. ಹಾಗಾಗಿ ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು ಆದಷ್ಟು ಸೇವಿಸದಿರುವುದು ಒಳ್ಳೆಯದು ಎನ್ನುತ್ತಾರೆ ನುರಿತ ತಜ್ಞರು.
ಜೀರ್ಣಕ್ರಿಯೆ ಮೇಲೆ ಪರಿಣಾಮ: ಕೂಲ್ ಡ್ರಿಂಕ್ಸ್ ನಲ್ಲಿ ಫಾಸ್ಪರಿಕ್ ಎಂಬ ಆ್ಯಸಿಡ್ ಇರುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆಯಂತೆ. ಸಾಮಾನ್ಯವಾಗಿ, ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ಹೈಡ್ರಾಲಿಕ್ ಆಮ್ಲದ ಘಟಕವನ್ನು ಬಳಸಲಾಗುತ್ತದೆ. ಇದು ನಮ್ಮ ಹೊಟ್ಟೆಯಲ್ಲಿಯೇ ಉತ್ಪತ್ತಿಯಾಗುತ್ತದೆ. ತಂಪು ಪಾನೀಯಗಳಲ್ಲಿನ ರಾಸಾಯನಿಕವು ಈ ಆಮ್ಲದೊಂದಿಗೆ ಬೆರೆಸಿದಾಗ ಅದು ಚಯಾಪಚಯ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ವಿವಿಧ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಫ್ಯಾಟಿ ಲಿವರ್ ಸಮಸ್ಯೆ: ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಕಾಯಿಲೆ ಬರುವ ಅಪಾಯವಿದೆ. ತಂಪು ಪಾನೀಯಗಳನ್ನು ಹೆಚ್ಚು ಹೆಚ್ಚು ಕುಡಿಯುವುದರಿಂದ ಹೆಚ್ಚುವರಿ ಫ್ರಕ್ಟೋಸ್ ಯಕೃತ್ತನ್ನು ತಲುಪುತ್ತದೆ. ಅದು ಓವರ್ ಲೋಡ್ ಆಗುತ್ತದೆ ಮತ್ತು ದಪ್ಪವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಪ್ರಾರಂಭವಾಗುತ್ತದೆ. ಇದರಿಂದ ಯಕೃತ್ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದು ಆರೋಗ್ಯ ತಜ್ಞರ ಮಾತಾಗಿದೆ.
2020 ರಲ್ಲಿ 'ಹೆಪಾಟಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬೇಸಿಗೆಯಲ್ಲಿ ಸಾಕಷ್ಟು ಕೂಲ್ ಡ್ರಿಂಕ್ಸ್ ಕುಡಿಯುವ ಜನರು ಕೊಬ್ಬಿನ ಯಕೃತ್ತು ಮತ್ತು ಯಕೃತ್ತಿನ ಉರಿಯೂತದ ಅಪಾಯವನ್ನು ಹೊಂದಿರುತ್ತಾರೆ. ಈ ಸಂಶೋಧನೆಯಲ್ಲಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಮುಖ ಪೌಷ್ಟಿಕತಜ್ಞ ಡಾ. ಜೋಸೆಫ್ ಟಿ. ಕರುಬಳ್ಳಿ ಕೂಡಾ ಭಾಗವಹಿಸಿದ್ದರು. ಹೆಚ್ಚು ಕೂಲ್ ಡ್ರಿಂಕ್ಸ್ ಸೇವಿಸುವವರಿಗೆ ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.