ಹೈದರಾಬಾದ್:ಆರೋಗ್ಯಕರ ಡಯಟ್ ಸಂದರ್ಭದಲ್ಲಿ ಸ್ನಾಕ್ಸ್ ವೇಳೆ ಡ್ರೈಫ್ರೂಟ್ಸ್ ಸೇವನೆಯಲ್ಲಿ ಗೋಡಂಬಿ ಮತ್ತು ಬಾದಾಮಿಯನ್ನು ಆಯ್ಕೆ ಮಾಡುತ್ತಾರೆ. ಪ್ರತಿಯೊಬ್ಬರೂ ಇದನ್ನು ತಿನ್ನಲು ಕಾರಣ ಇದು ರುಚಿಕರ ಎಂಬುದು. ಇವುಗಳು ಪೋಷಕಾಂಶದ ಆಗರವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಬಾದಾಮಿ ಮತ್ತು ಗೋಡಂಬಿ ಎರಡು ಕೂಡ ಸಮೃದ್ಧ ಗುಣಗಳಿಂದ ಕೂಡಿದೆ. ತೂಕ ನಷ್ಟಕ್ಕೆ ಇದರೆಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಕಾಡುತ್ತದೆ. ನಿಮ್ಮ ಅನುಮಾನಕ್ಕೆ ಇಲ್ಲಿದೆ ಉತ್ತರ.
ಗೋಡಂಬಿ ಪ್ರಯೋಜನ: ಪ್ರೋಟೀನ್, ಆರೋಗ್ಯಯುತ ಕೊಬ್ಬು, ಪಾಲಿಪೆನೊಲ್ಸ್ನಂತಹ ಆ್ಯಂಟಿಆಕ್ಸಿಡೆಂಟ್ ಗುಣವನ್ನು ಇದು ಹೊಂದಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಮೃದ್ಧವಾದ ಮೊನೊಸ್ಯಾಚುರೇಡೆಟ್ ಕೊಬ್ಬು ಇದ್ದು, ಇದು ಆರೋಗ್ಯಕರ ಕೊಬ್ಬು ಎಚ್ಡಿಎಲ್ ಮಟ್ಟ ಏರಿಕೆ ಮಾಡಿ, ಕೆಟ್ಟ ಕೊಬ್ಬಾಗಿರುವ ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಹೆಚ್ಚಿನ ಮೆಗ್ನಿಶಿಯಂ ಅಂಶವೂ ಹೃದಯ ರೋಗದ ಅಪಾಯವನ್ನು ತಡೆಯುತ್ತದೆ. ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್ ಇದ್ದು, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಬಾದಾಮಿ: ಇತರ ಡ್ರೈಫ್ರೂಟ್ಸ್ಗೆ ಹೋಲಿಕೆ ಮಾಡಿದಾಗ ಇದರಲ್ಲಿ ಅತಿ ಹೆಚ್ಚಿನ ಫೈಬರ್ ಅಂಶ ಇದೆ. ಒಂದು ಔನ್ಸ್ ಬಾದಾಮಿಯಲ್ಲಿ 3 ಗ್ರಾಂ ಫೈಬರ್ ಇರುತ್ತದೆ. ವಿಟಮಿನ್ ಇ ಸಮೃದ್ಧವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಬಾದಾಮಿಯು ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾ ಮಟ್ಟವನ್ನು ಹೆಚ್ಚಿಸಿ, ದೇಹದ ಪ್ರತಿರೋಧಕ ಶಕ್ತಿ ವೃದ್ದಿಸುತ್ತದೆ. ಅದೇ ರೀತಿ ಬಾದಾಮಿಯಲ್ಲಿ ಮೆಗ್ನಿಶಿಯಂ ಸಮೃದ್ಧವಾಗಿದ್ದು, ಟೈಪ್ 2 ಮಧುಮೇಹ ಅಪಾಯ ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಎರಡರಲ್ಲಿ ಯಾವುದು ಬೆಸ್ಟ್: ಪೌಷ್ಟಿಕ ತಜ್ಞರು ಹೇಳುವಂತೆ, ಬಾದಾಮಿ ದೇಹದಲ್ಲಿ ಹೆಚ್ಚಿರುವ ಕೊಬ್ಬನ್ನು ತೆಗೆದು ಹಾಕುತ್ತದೆ, ಇದರಲ್ಲಿ ಸಮೃದ್ಧ ಅಮಿನೋ ಆಸಿಡ್ ಅರ್ಗೈನೈನ್ ಇದೆ. ಕೆಲವು ಅಧ್ಯಯನಗಳ ಪ್ರಕಾರ, ಬಾದಾಮಿ, ಹೆಚ್ಚಿನ ಕೊಬ್ಬು ಮತ್ತು ಕಾರ್ಬೋ ಹೈಡ್ರೇಟ್ ಕರಗಿಸುತ್ತದೆ. ಜೊತೆಗೆ ತಜ್ಞರು ಸಲಹೆ ನೀಡುವಂತೆ, ಸ್ಥೂಲಕಾಯ ಹೊಂದಿರುವವರು ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದರಿಂದ ತೂಕ ನಷ್ಟಗೊಳ್ಳಬಹುದು.