ಮನುಷ್ಯನ ಇಳಿ ವಯಸ್ಸಿಗೆ ಮಧುಮೇಹ ಬರುವುದು ಸಾಮಾನ್. ಮಧುಮೇಹ ಎನ್ನುವುದು ನಮ್ಮ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದನ್ನು ಸಕ್ಕರೆ ಕಾಯಿಲೆ, ಡಯಾಬಿಟೀಸ್, ಶುಗರ್ ಎಂದು ನಾನಾ ವಿಧದಲ್ಲಿ ಕರೆಯುದುಂಟು. ಹಾಗಾದಾರೆ, ಈ ಮಧುಮೇಹ ಇದ್ದವರು ಮದ್ಯಪಾನ ಮಾಡಬಹುದೇ? ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಮದ್ಯಪಾನ ಮಾಡಬಾರದು ಎನ್ನುತ್ತಾರೆ ಸಂಬಂಧಪಟ್ಟ ತಜ್ಞರು. ಮಧುಮೇಹಕ್ಕೆ ಮದ್ಯವನ್ನು ಸೇರಿಸುವುದು ಬೆಂಕಿಗೆ ಇಂಧನವನ್ನು ಸೇರಿಸಿದಂತೆ. ಸ್ವಲ್ಪ ಮದ್ಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಇದು ಸತ್ಯವಲ್ಲ ಎನ್ನುತ್ತಾರೆ ತಜ್ಞರು.
ಮನುಷ್ಯನ ನರಗಳನ್ನು ದುರ್ಬಲಗೊಳಿಸುವುದು ಮಧುಮೇಹದ ಮೊದಲ ಲಕ್ಷಣ. ಮದ್ಯ ಸೇವಿಸಿದರೆ ನರಗಳ ಶಕ್ತಿ ಕುಂದುವಿಕೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಜನರು ಕಾಲು ಮತ್ತು ಕೈಗಳಲ್ಲಿ ಮರಗಟ್ಟುವಿಕೆ, ಸುಡುವ ಮತ್ತು ಸೂಜಿಯಿಂದ ಚುಚ್ಚಿದ ಅನುಭವ ಸೇರಿದಂತೆ ಮುಂತಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಮಾದಕ ವಸ್ತು ಸೇವನೆಯಿಂದ ಈ ಸಮಸ್ಯೆಗಳು ಅಧಿಕಗೊಳ್ಳುವ ಸಾಧ್ಯತೆ ಹೆಚ್ಚು. ಇದು ಹೀಗೆ ದೀರ್ಘಕಾಲದವರೆಗೆ ಮುಂದುವರಿದರೆ, ನರಗಳಿಗೆ ಹಾನಿಯಾಗಬಹುದು. ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಹುಣ್ಣುಗಳಂತಹ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹುಣ್ಣುಗಳು ವಾಸಿಯಾಗದಿದ್ದರೆ, ಬೆರಳುಗಳನ್ನು, ಪಾದ ಮತ್ತು ಕಾಲುಗಳನ್ನು ತೆಗೆಯಬೇಕಾದ ಸಂದರ್ಭಗಳು ಬರಬಹುದು ಎನ್ನುತ್ತಾರೆ ತಜ್ಞರು.
ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ: ಮಧುಮೇಹ ಇರುವವರು ಮದ್ಯ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕೂಡ ಅಧಿಕ ಎನ್ನುತ್ತಾರೆ ತಜ್ಞರು. 2018ರಲ್ಲಿ 'ಡಯಾಬಿಟಿಸ್ ಕೇರ್ ಜರ್ನಲ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಧುಮೇಹ ಹೊಂದಿರುವವರು ಮದ್ಯ ಸೇವಿಸಿದಾಗ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟ ಶೇ. 30 ರಷ್ಟು ಹೆಚ್ಚಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಮಧುಮೇಹ ಇರುವವರು ಮದ್ಯ ಸೇವಿಸುವುದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ಎಸ್. ಮನೋಹರ್.