ಕರ್ನಾಟಕ

karnataka

ETV Bharat / health

ರಕ್ತ ಪರೀಕ್ಷೆ ಮೂಲಕ ಕ್ಯಾನ್ಸರ್​, ಅಲ್ಝೈಮರ್​ ಪತ್ತೆ: ವಿನೂತನ ಪರೀಕ್ಷೆ ಹಾದಿಯಲ್ಲಿ ವಿಜ್ಞಾನಿಗಳು - alzheimer detect from blood tes - ALZHEIMER DETECT FROM BLOOD TES

ರಕ್ತ ಪರೀಕ್ಷೆ ಮೂಲಕ ಅನೇಕ ರೋಗ ಪತ್ತೆ ಮಾಡುವುದು ಹೊಸದೇನಲ್ಲ. ಆದರೆ, ಗಂಭೀರ ಸಮಸ್ಯೆಗಳಾದ ಕ್ಯಾನ್ಸರ್​, ಆಲ್ಝೈಮರ್​ನಂತಹ ರೋಗವನ್ನು ಇದರಿಂದ ಪತ್ತೆ ಮಾಡಬಹುದಾ ಎಂಬ ಪ್ರಶ್ನೆಗೆ ಇದೀಗ ವಿಜ್ಞಾನಿಗಳು ಉತ್ತರಿಸಿದ್ದಾರೆ.

can-cancer-and-alzheimer-detect-from-blood-test-here-is-some-innovative-way
ರಕ್ತದ ಪರೀಕ್ಷೆ (ಈಟಿವಿ ಭಾರತ್​​)

By ETV Bharat Karnataka Team

Published : Jul 2, 2024, 4:32 PM IST

ಹೈದರಾಬಾದ್​: ಪ್ರತಿ ಬಾರಿ ಹೃದಯ ಬಡಿದಾಗ ದೇಹದೆಲ್ಲೆಡೆ ರಕ್ತ ಪರಿಚಲನೆ ನಡೆಯುತ್ತದೆ. ರಕ್ತದ ಮೂಲಕ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ಇದು ಅಂಗಾಂಶಗಳಿಗೆ ಪೋಷಕಾಂಶವನ್ನು ಮಾತ್ರ ಪೂರೈಕೆ ಮಾಡುವುದಿಲ್ಲ. ಅದರ ಜೊತೆಗೆ ತ್ಯಾಜ್ಯವನ್ನು ನಿರ್ಮೂಲನೆ ಮಾಡುತ್ತದೆ. ಅಂಗಾಂಶಗಳಿಂದ ರಕ್ತದಲ್ಲಿ ಅನೇಕ ಜೈವಿಕ ರಾಸಾಯನಿಕ ಅಂಶವೂ ಇರುತ್ತದೆ. ಇದರಿಂದ ಅನೇಕ ರೋಗಗಳನ್ನು ಪತ್ತೆ ಮಾಡಬಹುದು.

ರಕ್ತದ ಪರೀಕ್ಷೆ ಮೂಲಕ ಹೊಸ ರೋಗ, ಚಿಕಿತ್ಸೆ ನಿರ್ಣಯವನ್ನು ಪತ್ತೆ ಮಾಡುವುದು ಹೊಸ ವಿಧಾನವಲ್ಲ. ಕೆಲವು ಪರೀಕ್ಷೆ ಮೂಲಕ ಹೃದಯ ರೋಗದ ಅಪಾಯ, ಮದುಮೇಹ, ವಿಟಮಿನ್​ ಕೊರತೆ, ಸೋಂಕು ಪತ್ತೆ ಮಾಡಬಹುದು. ಕೆಲವು ಪರೀಕ್ಷೆಗಳ ಮೂಲಕ ಪಾರ್ಶ್ವವಾಯುನಂತಹ ರೋಗವನ್ನು ತಡೆಗಟ್ಟಬಹುದಾಗಿದೆ. ಇದೀಗ ಈ ಪರೀಕ್ಷೆ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಶೋಧಕರು ಇದೀಗ ಡೆಮನ್ಶಿಯಾ ಮತ್ತು ಕ್ಯಾನ್ಸರ್​ನಂತಹ ಅಪಾಯದ ಅಂಶವನ್ನು ಪತ್ತೆ ಮಾಡಬಹುದಾಗಿದೆ.

ಕ್ಯಾನ್ಸರ್​ ಪತ್ತೆ: ದೇಹದಲ್ಲಿನ ಸಾಮಾನ್ಯ ಕೋಶದಂತೆ ಕ್ಯಾನ್ಸರ್​ ಕೋಶಗಳು ರಕ್ತದ ಸಂಪರ್ಕದಲ್ಲಿರುತ್ತದೆ. ರಕ್ತದಲ್ಲಿ ಅನುವಂಶಿಕ ತುಣುಕುಗಳು ಟ್ಯೂಮರ್​​ ಜೊತೆ ಸಂಬಂಧ ಹೊಂದಿದೆ. ಕ್ಯಾನ್ಸರ್​ ಕೋಶಗಳು ಇದರಲ್ಲಿ ಇರುತ್ತದೆ. ಲಿಕ್ವಿಡ್​ ಬಯೋಪ್ಸಿ ಮೂಲಕ ಇದನ್ನು ಪತ್ತೆ ಮಾಡಬಹುದು. ಕೆಲವು ಕ್ಯಾನ್ಸರ್‌ಗಳಲ್ಲಿ ಚಿಕಿತ್ಸೆಯ ನಂತರ ಗೆಡ್ಡೆ ಪುನರಾವರ್ತನೆಯಾಗುತ್ತದೆಯೇ ಎಂದು ನಿರ್ಧರಿಸಲು ಈ ಪರೀಕ್ಷೆಗಳನ್ನು ಪ್ರಸ್ತುತ ಬಳಸಲಾಗುತ್ತಿದೆ. ಯಾವ ಗಡ್ಡೆಗಳಿಗೆ ಮರುಕಳಿಸದೇ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂಬುದರ ಪತ್ತೆಗೆ ಇದೀಗ ಇದರ ಬಳಕೆ ಮಾಡಲಾಗುತ್ತಿದೆ.

ಭವಿಷ್ಯದಲ್ಲಿ, ರಕ್ತದ ಪರೀಕ್ಷೆ ಮೂಲಕ ಕ್ಯಾನ್ಸರ್​ ಚಿಹ್ನೆಗಳ ಪತ್ತೆ ಮಾಡಬಹುದು. ಆರಂಭಿಕ ಪತ್ತೆಯಿಂದ ಕ್ಯಾನ್ಸರ್​ ಚಿಕಿತ್ಸೆ ಸುಲಭವಾಗಿದೆ. ಇದು ಅನೇಕ ಜನರ ಜೀವ ಉಳಿಸಲು ಸಹಾಯಕವಾಗಿದೆ. ಸ್ತನ ಕ್ಯಾನ್ಸರ್​​ಗಾಗಿ ಮ್ಯಾಮೋಗ್ರಾಫ್​ ಮತ್ತು ಕೊಲೊನ್​ ಕ್ಯಾನ್ಸರ್​​ಗೆ ಕೊಲೊನಸ್ಕೋಪಿಸ್​ ಪರೀಕ್ಷೆ ನಡೆಸಲಾಗುವುದು. ಆದರೆ, ಇವನ್ನು ರಕ್ತದ ಪರೀಕ್ಷೆ ಮೂಲಕ ಪತ್ತೆ ಮಾಡಲು ಸಾಧ್ಯವಿಲ್ಲ. ಈಗಲೂ ಕೂಡ ಕ್ಯಾನ್ಸರ್ ಆರಂಭಿಕ ಪರೀಕ್ಷೆ ಲಭ್ಯವಿಲ್ಲ.

ಇಂತಹ ಕ್ಯಾನ್ಸರ್​​ಗಳಿಂದಲೇ ದೇಶದಲ್ಲಿ ಅರ್ಧದಷ್ಟು ಕ್ಯಾನ್ಸರ್​ ಸಾವು ಸಂಭವಿಸುತ್ತದೆ. ಇದನ್ನು ಲಿಕ್ವಿಡ್​ ಬಯೋಪ್ಸಿಸ್​ ಮೂಲಕ ತಪ್ಪಿಸಬಹುದು. ಅನೇಕ ರೀತಿಯ ಕ್ಯಾನ್ಸರ್​​ ಪತ್ತೆಗೆ ಅನೇಕ ಪ್ರಯೋಗಗಳು ನಡೆಯುತ್ತಿದೆ. ಆದರೆ, ಇದು ಯಾವ ರೀತಿ ಫಲಿತಾಂಶ ನೀಡಲಿದೆ ಎಂಬುದು ತಿಳಿದಿಲ್ಲ. ಆದರೆ, ಕೆಲವು ಕಂಪನಿಗಳು ನೇರವಾದ ಪರೀಕ್ಷೆ ನಡೆಸಿದ್ದು, ಈ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಯಾವುದೇ ಕ್ಯಾನ್ಸರ್ ಇಲ್ಲ ಎಂದು ತಿರುಗಿದರೆ, ನಂತರ ಚಿಂತಿಸಬೇಕಾಗಿಲ್ಲ

ನಮ್ಮ ದೇಶದಲ್ಲಿ ಕೂಡ ಪ್ರಯತ್ನ: ನಮ್ಮ ದೇಶದಲ್ಲಿ ಕೂಡ ಲಿಕ್ವಿಡ್​ ಬಯೋಪ್ಸಿ ಪ್ರಯತ್ನ ತೀವ್ರಗೊಂಡಿದೆ. ಇತ್ತೀಚಿಗೆ ಹೈದರಾಬಾದ್​ನ ಸೆಲ್ಯೂಲರ್​ ಅಂಡ್​​ ಮೊಲೆಕ್ಯೂಲರ್​ ಬಯೋಲಾಜಿ ಕೇಂದ್ರ (ಸಿಸಿಎಂಬಿ) ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್​ ಕೇಂದ್ರದೊಂದಿಗೆ ಸಹಯೋಗ ನಡೆಸಿದೆ. ಅದು ಅನೇಕ ರೀತಿಯ ಸ್ತನ ಕ್ಯಾನ್ಸರ್​ ಅನ್ನು ರಕ್ತ ಪರೀಕ್ಷೆ ಮೂಲಕ ಪತ್ತೆ ಮಾಡುವ ಅಭಿವೃದ್ಧಿ ನಡೆಸಿದೆ. ಇದಕ್ಕಾಗಿ ನೂರಾರು ಕ್ಯಾನ್ಸರ್​ ಮಾದರಿಗಳಲ್ಲಿ ಮೈಕ್ರೋ ಆರ್​ಎನ್​ಎ ವಿಶ್ಲೇಷಣೆ ಮಾಡಲಾಗಿದೆ. ಇದರಲ್ಲಿ ಸ್ತನ ಕ್ಯಾನ್ಸರ್​ನೊಂದಿಗೆ 439 ಮೈಕ್ರೊಆರ್​ಎನ್​ಎಗಳು ಸಂಬಂದ ಹೊಂದಿವೆ ಎಂದು ಕಂಡು ಬಂದಿದೆ. ರಕ್ತದಲ್ಲಿ ಕಂಡುಬರುವ ಕ್ಯಾನ್ಸರ್‌ನ ಪ್ರಕಾರಗಳು, ಶ್ರೇಣಿಗಳು ಮತ್ತು ಹಂತಗಳನ್ನು ಗುರುತಿಸುವ ಸಾಧ್ಯತೆಯೂ ಇದೆ ಎಂಬುದು ಗಮನಾರ್ಹ. ಇದು ಲಭ್ಯವಾದರೆ, ಸ್ತನ ಕ್ಯಾನ್ಸರ್ ಅನ್ನು ಒಂದೇ ಹನಿ ರಕ್ತದಿಂದ ಸುಲಭವಾಗಿ ಕಂಡು ಹಿಡಿಯಬಹುದು

ಆಲ್ಝೈಮರ್​ ಪತ್ತೆ: ಮಿದುಳಿನಲ್ಲಿರುವ ಅನೇಕ ರಕ್ತನಾಳವೂ ಇದೆ. ರಕ್ತದ ಮೂಲಕವೇ ಮಿದುಳಿನ ಕೋಶ ಹಾನಿ ಬಗ್ಗೆ ಕೂಡ ಪತ್ತೆ ಮಾಡಬಹುದು. ಸಂಶೋಧಕರು ರಕ್ತ ಪರೀಕ್ಷೆ ಮೂಲಕ ಮಾನಸಿಕ ಅಸ್ವಸ್ಥತೆಯನ್ನು ಅಭಿವೃದ್ಧಿಯಿಂದ ಉತ್ತಮ ಚಿಕಿತ್ಸೆ ನೀಡಬಹುದು. ಆದರೆ, ಇದು ಯಶಸ್ವಿಯಾಗಿಲ್ಲ. ಆದರೆ, ಡೆಮನ್ಶಿಯಾ ಅಪಾಯವನ್ನು ಪತ್ತೆ ಮಾಡುವ ರಕ್ತ ಪರೀಕ್ಷೆ ವಿನ್ಯಾಸ ಮಾಡಬಹುದು. ಇದು ಮರೆಗುಳಿತನದ ಸಮಸ್ಯೆಗೆ ಭರವಸೆದಾಯಕ ಚಿಕಿತ್ಸೆಯಾಗಲಿದೆ.

ಇದನ್ನೂ ಓದಿ: ಏನಿದು ಸ್ತನ ಕ್ಯಾನ್ಸರ್​? ಇದರ ಮೂಲ ಯಾವುದು?: ಯುವ ಜನತೆಯಲ್ಲಿ ಹೆಚ್ಚುತ್ತಿರುವ ಈ ಮಹಾಮಾರಿ ಬಗ್ಗೆ ಬೇಡ ನಿರ್ಲಕ್ಷ್ಯ!

ABOUT THE AUTHOR

...view details