ಕರ್ನಾಟಕ

karnataka

ETV Bharat / health

ಪ್ರತಿದಿನ ಬೆಳಗ್ಗೆ 9ಗಂಟೆಯೊಳಗೆ ಈ ಐದು ಕೆಲಸ ಮಾಡಿದರೆ, ದೇಹವು ನಿರ್ವಿಶೀಕರಣ ಆಗುತ್ತೆ! - BODY DETOXIFICATION HOME REMEDIES

Body Detoxification Home Remedies: ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಅಥವಾ ದೇಹದ ನಿರ್ವಿಶೀಕರಣಕ್ಕೆ ಬೆಳಗ್ಗೆ ಕೆಲವು ಕೆಲಸಗಳನ್ನು ತಪ್ಪದೇ ಮಾಡಬೇಕಾಗುತ್ತದೆ. ಯೋಗ, ವಾಕಿಂಗ್, ಆಯಿಲ್ ಪುಲ್ಲಿಂಗ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

BODY DETOXIFICATION HOME REMEDIES  BODY DETOX THERAPY  BODY DETOXIFICATION METHODS  WHAT IS BODY DETOXIFICATION
ಸಾಂದರ್ಭಿಕ ಚಿತ್ರ (Getty Images)

By ETV Bharat Health Team

Published : Nov 30, 2024, 1:19 PM IST

Body Detoxification Home Remedies:ನಮ್ಮ ದೇಹದಲ್ಲಿರುವ ಕಲ್ಮಶಗಳು ಹಾಗೂ ತ್ಯಾಜ್ಯಗಳನ್ನು ತೆಗೆದುಹಾಕುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಈ ರೀತಿ ಮಾಡುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಹಾಗೂ ದೇಹದಿಂದ ತ್ಯಾಜ್ಯ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಕಷ್ಟ ಎಂದು ಕೆಲವು ಪರಿಗಣಿಸುತ್ತಾರೆ. ಆದರೆ, ಪ್ರತಿದಿನ ಬೆಳಗ್ಗೆ ಈ 5 ಕೆಲಸಗಳನ್ನು ಮಾಡಿದರೆ ಸಾಕು ದೇಹವು ಸ್ವಚ್ಛವಾಗಿರುತ್ತದೆ ಎನ್ನುತ್ತಾರೆ ತಜ್ಞರು. ದೇಹದ ನಿರ್ವಿಶೀಕರಣಕ್ಕೆ ಕೈಗೊಳ್ಳಬೇಕಾದ ಕಾರ್ಯಗಳೇನು ಎಂಬುದನ್ನು ತಿಳಿಯೋಣ.

ಆಯಿಲ್ ಪುಲ್ಲಿಂಗ್:ಪುರಾತನ ಆಯುರ್ವೇದ ಪ್ರಕ್ರಿಯೆಯಾದ ಆಯಿಲ್ ಪುಲ್ಲಿಂಗ್ ದೇಹವನ್ನು ವಿಶೇಷವಾಗಿ ಬಾಯಿಯಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸಲು ತುಂಬಾ ಉಪಯುಕ್ತವಾಗಿದೆ. ಈ ವಿಷಯವನ್ನು ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಹೆಲ್ತ್ ಸೈನ್ಸಸ್‌ (International Journal of Health Sciences)ನಲ್ಲಿ ಪ್ರಕಟಿಸಲಾಗಿದೆ. ಪ್ರತಿದಿನ ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿಕೊಂಡು 10-15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಹೊರಹೋಗುತ್ತವೆ ಎಂದು ವಿವರಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಈ ಕಾರ್ಯ ಮಾಡುವುದರಿಂದ ರಾತ್ರಿಯಿಂದ ಬಾಯಿಯಲ್ಲಿ ಸಂಗ್ರಹವಾದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಪರಿಣಾಮವಾಗಿ ತಾಜಾ ಉಸಿರಾಟದ ಜೊತೆಗೆ ಹಲ್ಲುಗಳು ಕೂಡ ಶುದ್ಧವಾಗುತ್ತವೆ.

ಬಿಸಿ ನೀರಿನಿಂದ ಸ್ನಾನ ಮಾಡಿ:ಬೆಳಗ್ಗೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾದ ಕಲ್ಮಶಗಳು ಮತ್ತು ತ್ಯಾಜ್ಯಗಳು ಹೊರಬಂದು ನಿರಾಳವಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸುಧಾರಿತವಾಗಿ ಒತ್ತಡ, ಆತಂಕ ಕಡಿಮೆಯಾಗುತ್ತದೆ. ನೀಲಗಿರಿ ಮತ್ತು ಲ್ಯಾವೆಂಡರ್‌ನಂತಹ ಕೆಲವು ಹನಿ ಎಣ್ಣೆಯನ್ನು ಸೇರಿಸುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಶುಂಠಿ, ನಿಂಬೆ ರಸ ಕುಡಿಯಿರಿ:ಪ್ರತಿದಿನ ಬೆಳಗ್ಗೆ ಶುಂಠಿ ಮತ್ತು ನಿಂಬೆ ರಸದೊಂದಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು. ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ದೇಹದಲ್ಲಿ ಪಿಹೆಚ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವ ನೈಸರ್ಗಿಕ ಡಿಟಾಕ್ಸಿಫೈಯರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಶುಂಠಿಯ ಉರಿಯೂತದ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಆ್ಯಸಿಡಿಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಯೋಗ:ಪ್ರತಿದಿನ ಬೆಳಿಗ್ಗೆ ಪ್ರಾಣಾಯನದಂತಹ ಆಳವಾದ ಯೋಗ ಹಾಗೂ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಇದು ಶ್ವಾಸಕೋಶದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಆಮ್ಲಜನಕದ ಮಟ್ಟ ಹೆಚ್ಚಿಸುತ್ತದೆ. ನಾಲ್ಕು ಸೆಕೆಂಡುಗಳ ಕಾಲ ಆಳವಾಗಿ ಉಸಿರಾಡಿ, 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದುಕೊಳ್ಳಿ ಮತ್ತು ನಂತರ 8 ಸೆಕೆಂಡುಗಳ ಕಾಲ ಬಿಡಿ. ಈ ರೀತಿ ಮಾಡುವುದರಿಂದ ದೇಹವು ಶುದ್ಧವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ವಾಕಿಂಗ್:ವಾಕಿಂಗ್​ ಮಾಡುವಾಗ ತಾಜಾ ಗಾಳಿಯನ್ನು ಉಸಿರಾಡುವುದರಿಂದ ದೇಹದಲ್ಲಿರುವ ಕಲ್ಮಶಗಳು ಹಾಗೂ ತ್ಯಾಜ್ಯಗಳು ಸಹಜವಾಗಿಯೇ ಹೊರಹೋಗುತ್ತವೆ. ಇದು ರಕ್ತ ಪೂರೈಕೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮುಂಜಾನೆ ಬಿಸಿಲಿನಲ್ಲಿ ನಡೆದಾಡುವ ಮೂಲಕವೂ ವಿಟಮಿನ್ ಡಿ ಪಡೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:https://pmc.ncbi.nlm.nih.gov/articles/PMC5654187/#sec1-7

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನೂ ಓದಿ:

ABOUT THE AUTHOR

...view details