ಕರ್ನಾಟಕ

karnataka

ETV Bharat / health

ಸಿಕ್ಕಾಪಟ್ಟೆ ಸೊಳ್ಳೆ ಕಾಟಾನಾ?; ಇವೆಲ್ಲಕ್ಕೂ ಇದೆ ನೈಸರ್ಗಿಕ ಪರಿಹಾರ: ನಾವು ಹೇಳುವ ಈ ಕೆಲಸ ಮಾಡಿ ನೋಡಿ! - Tips To Get Rid Of Mosquitoes - TIPS TO GET RID OF MOSQUITOES

ಬಿರು ಬೇಸಿಗೆ ಮುಗಿದು ಇನ್ನೇನು ಮಳೆಗಾಲ ಆರಂಭವಾಗಿದೆ. ಮುಂಗಾರು ರಾಜ್ಯದಲ್ಲಿ ಅಬ್ಬರಿಸಿ - ಬೊಬ್ಬಿರಿಯುತ್ತಿದೆ. ಇನ್ನು ಸೊಳ್ಳೆ ಸಮಸ್ಯೆಯೂ ಉಲ್ಬಣಗೊಂಡಿದೆ. ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಬ್ಯಾಟ್‌ಗಳಿಂದ ಹಿಡಿದು ಸುರುಳಿಗಳವರೆಗೆ ಅನೇಕ ಸೊಳ್ಳೆ ನಿವಾರಕಗಳನ್ನು ಬಳಸಿ ಮಾಸ್ಕಿಟೋಗಳನ್ನು ಓಡಿಸಲು ನಾವು - ನೀವೆಲ್ಲ ಪ್ರಯತ್ನ ಮಾಡಿಯೇ ಮಾಡಿರುತ್ತೇವೆ. ಆದರೆ ಈ ಸೊಳ್ಳೆ ಬತ್ತಿಗಳು ಮತ್ತು ನಿವಾರಕಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇವುಗಳಿಗೆ ಬೈ ಬೈ ಹೇಳಿ ನೈಸರ್ಗಿಕವಾಗಿಯೇ ಸೊಳ್ಳೆಗಳ ಕಾಟ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ಅದನ್ನು ಹೇಗೆ ಅನ್ನೋದನ್ನು ಈಗ ನೋಡೋಣ.

Best Tips To Get Rid Of Mosquitoes
Etv Bharatಹೀಗೆ ಮಾಡಿದರೆ ಸೊಳ್ಳೆ ಬತ್ತಿ, ನಿವಾರಕಗಳ ಅವಶ್ಯಕತೆಯೇ ಇಲ್ಲ: ಇದಕ್ಕಿವೆ ಭಾರಿ ಶಕ್ತಿಶಾಲಿ ನೈಸರ್ಗಿಕ ಆಯುಧಗಳು; ಏನಪ್ಪ ಆ ಗುರಾಣಿ? (ETV Bharat)

By ETV Bharat Karnataka Team

Published : Jun 6, 2024, 7:16 AM IST

Updated : Jun 6, 2024, 10:11 AM IST

ಸೊಳ್ಳೆಗಳನ್ನು ತೊಡೆದುಹಾಕಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು ಸಹಜ. ಆದರೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸಿದರೂ ಇವುಗಳಲ್ಲಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತವೆ ಎನ್ನುತ್ತಾರೆ ತಜ್ಞರು. ಅಷ್ಟೇ ಏಕೆ.. ಸೊಳ್ಳೆಗಳ ಕಾಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ ತಜ್ಞರು.

ಬೇವಿನ ಎಣ್ಣೆ ಮತ್ತು ಕರ್ಪೂರ :ಸ್ವಲ್ಪ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರ ಸೇರಿಸಿ ಕರಗಿಸಿ. ನಂತರ ಎಣ್ಣೆಯನ್ನು ಬಾಣಲೆಗೆ ಸುರಿದು ಬತ್ತಿಯನ್ನು ಬೆಳಗಿಸಬೇಕು. ಹಾಗೆ ದೀಪಾಲಂಕಾರ ಮಾಡುವುದರಿಂದ ಸೊಳ್ಳೆಗಳು ಬತ್ತಿಯಿಂದ ಬರುವ ಹೊಗೆಯನ್ನು ಸಹಿಸಲಾರದೇ ಅಲ್ಲಿಂದ ಓಡಿ ಹೋಗುತ್ತವೆ ಎಂಬುದು ಕೆಲ ಆರೋಗ್ಯ ತಜ್ಞರ ಸಲಹೆ ಆಗಿದೆ.

ಬೇವಿನ ಎಣ್ಣೆ, ಕರ್ಪೂರ, ಬಿರಿಯಾನಿ ಎಲೆಗಳು: ಒಂದು ಚಿಕ್ಕ ಬಟ್ಟಲಿನಲ್ಲಿ ಒಂದು ಚಮಚದಷ್ಟು ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ 5 ರಿಂದ 6 ಕರ್ಪೂರದ ಬಿಲ್ಲೆಗಳನ್ನು ಸೇರಿಸಿ ಮತ್ತು ಕರಗಿಸಿ. ನಂತರ ಈ ಮಿಶ್ರಣವನ್ನು ಬಿರಿಯಾನಿ ಎಲೆಗಳಿಗೆ ಹಚ್ಚಿ ಎಲೆ ಸುಡುವುದರಿಂದ ಬರುವ ಹೊಗೆಯಿಂದ ಸೊಳ್ಳೆಗಳು ಓಡಿಹೋಗುತ್ತವೆಯಂತೆ.

ಕರ್ಪೂರ ಮತ್ತು ಬೇವಿನ ಸೊಪ್ಪಿನ ಹೊಗೆ : ಸೊಳ್ಳೆ ಕಾಯಿಲ್‌ಗಳನ್ನು ಸದಾ ಹೊತ್ತಿಸುವ ಬದಲು.. ಕಿಟಕಿ ಬಾಗಿಲು ಮುಚ್ಚಿ ಹದಿನೈದು ನಿಮಿಷಗಳ ಕಾಲ ಕರ್ಪೂರ ಮತ್ತು ಬೇವಿನ ಸೊಪ್ಪನ್ನು ತುಸು ಕೆಂಡದಲ್ಲಿ ಹಾಕಿದರೆ ಸೊಳ್ಳೆಗಳು ಅಲ್ಲಿಂದ ಓಡಿ ಹೋಗುತ್ತವೆ. ಬೇವಿನ ಸೊಪ್ಪು ಸಿಗದಿದ್ದರೆ ಕರ್ಪೂರ ಹಚ್ಚಿದರೆ ಸಾಕು ಸೊಳ್ಳೆಗಳು ಅಲ್ಲಿಂದ ಕಾಲ್ಕಿಳುತ್ತವೆ.

2019 ರಲ್ಲಿ 'ಜರ್ನಲ್ ಆಫ್ ಆರ್ತ್ರೋಪಾಡ್ ಬಾರ್ನಾಲಜಿ' ನಲ್ಲಿ ಪ್ರಕಟವಾದ ವರದಿ ಪ್ರಕಾರ, ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಕರ್ಪೂರವು ಪರಿಣಾಮಕಾರಿ ಆಯುಧ ಎಂಬುದು ಸಾಬೀತಾಗಿದೆ. ಈ ಸಂಶೋಧನೆಯಲ್ಲಿ ಪುಣೆಯ ಪ್ರಮುಖ ಆಯುರ್ವೇದ ತಜ್ಞ ಡಾ.ಸುರೇಶ್ ಬಾಬು ಭಾಗವಹಿಸಿದ್ದರು. ಧೂಮಪಾನ ಮಾಡುವಾಗ ಕರ್ಪೂರದ ವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬಹಳ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ.

ತೆಂಗಿನೆಣ್ಣೆ ಮತ್ತು ಬೆಳ್ಳುಳ್ಳಿ:ಸೊಳ್ಳೆಗಳನ್ನು ತಡೆಯುವಲ್ಲಿ ಇದು ತುಂಬಾ ಸಹಕಾರಿ. ಇದಕ್ಕಾಗಿ ಮೊದಲು ನಾಲ್ಕೈದು ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ. ನಂತರ ಎರಡು ಚಮಚ ತೆಂಗಿನ ಎಣ್ಣೆ ಕಾಯಿಸಿ, ಅದು ಬಿಸಿಯಾದ ನಂತರ ಬೆಳ್ಳುಳ್ಳಿ ತುಂಡುಗಳನ್ನು ಸೇರಿಸಿ ಮತ್ತು ಎಣ್ಣೆಯನ್ನು ಕಪ್ಪಾಗುವವರೆಗೆ ಬಿಸಿ ಮಾಡಿ. ನಂತರ ಮಿಶ್ರಣವನ್ನು ತಣ್ಣಗಾಗಿಸಿ ಬಾಟಲಿಯಲ್ಲಿ ಸಂಗ್ರಹಿಸಿ. ರಾತ್ರಿ ಮಲಗುವ ಮುನ್ನ ದೇಹಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳ ಕಾಟದಿಂದ ರಕ್ಷಣೆ ಪಡೆಯಬಹುದು.

ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಅರೆದು ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಚ್ಚಬೇಕು. ಬಳಿಕ ಅದಕ್ಕೆ ಸ್ವಲ್ಪ ಕರ್ಪೂರವನ್ನು ಸೇರಿಸಿ ದೇಹಕ್ಕೆ ಹಚ್ಚಿದರೆ ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಈ ಸಲಹೆಯು ಲಿಕ್ವಿಡ್ ರೀಫಿಲ್‌ಗಳು ಮತ್ತು ಸೊಳ್ಳೆ ಮ್ಯಾಟ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ನಿಂಬೆ ಮತ್ತು ಲವಂಗ: ನಿಂಬೆ, ಲವಂಗವನ್ನು ಬಳಸುವುದರಿಂದ ಸೊಳ್ಳೆಗಳಿಂದ ಉತ್ತಮ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ತಜ್ಞರು. ಇದಕ್ಕಾಗಿ.. ನಿಂಬೆಹಣ್ಣನ್ನು ಅಡ್ಡಲಾಗಿ ಎರಡು ತುಂಡುಗಳಾಗಿ ಕತ್ತರಿಸಿ. ನಿಂಬೆ ಹೋಳುಗಳ ಮೇಲೆ ಲವಂಗವನ್ನು ಹಾಕಿ, ಹಾಸಿಗೆ ಅಥವಾ ಮಲಗುವ ಸ್ಥಳದ ಬಳಿ ಇಡುವುದರಿಂದ ಸೊಳ್ಳೆಗಳು ಬರುವುದನ್ನು ತಡೆಯುತ್ತದೆ ಎನ್ನುತ್ತಾರೆ ತಜ್ಞರು.

ನಿಮ್ಮ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ಕೆಲವು ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಸಂಬಂಧ ಪಟ್ಟ ಪರಿಣತರ ಸಲಹೆ ಪಡೆಯುವುದು ಉತ್ತಮ

ಇದನ್ನು ಓದಿ:ಗುರುವಾರದ ಪಂಚಾಂಗ, ದಿನ ಭವಿಷ್ಯ: ಈ ರಾಶಿಯವರಿಗಿಂದು ಅಮಿತೋತ್ಸಾಹದ ದಿನ! - Daily Horoscope

ಪ್ರಜ್ವಲ್ ರೇವಣ್ಣನಿಗೆ ಪುರುಷತ್ವ ಪರೀಕ್ಷೆ: ಇನ್ನೊಂದು ವಾರದಲ್ಲಿ ಎಸ್​​​ಐಟಿ ಕೈ ಸೇರಲಿದೆ ವರದಿ - Prajwal Revanna medical test

Last Updated : Jun 6, 2024, 10:11 AM IST

ABOUT THE AUTHOR

...view details