ಹೈದರಾಬಾದ್: ಬೆಂಗಳೂರಿನ ಸ್ಟಾರ್ಟಪ್ ಆಗಿರುವ ಕ್ರಿಸ್ಪ್ರಬಿಟ್ಸ್ನ ಜೀನ್ ಎಡಿಟಿಂಗ್ ಫ್ಲಾಟ್‌ಫಾರ್ಮ್ ಓಮಿಕ್ರಿಸ್ಪ್ ಎಂಬುದು ಒಳಚರಂಡಿ ನೀರಿನಲ್ಲಿ ವೇಗವಾಗಿ ಹರಡಬಲ್ಲ ಕೋವಿಡ್ ಉಪತಳಿ ಜೆಎನ್.1 ರೂಪಾಂತರ ಪತ್ತೆ ಹಚ್ಚುವ ಕೆಲಸ ಕೈಗೊಂಡಿದೆ.
ಓಮಿಕ್ರಿಸ್ಪ್ ಸಂಸ್ಥೆಯು ಕ್ರಿಸ್ಪರ್ (CRISPR) ಆಧಾರದಲ್ಲಿ ಪರೀಕ್ಷೆ ನಡೆಸುವ ಫ್ಲಾಟ್ಫಾರಂ ಆಗಿದೆ. ಸಾರ್ಸ್ ಕೋವ್ 1 ಇರುವಿಕೆ ಮತ್ತು ವೇಗದ ಪತ್ತೆಗೆ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಇದು ಬಳಸುತ್ತಿದೆ. ಇದಕ್ಕಾಗಿ ಬೆಂಗಳೂರಿನ 14 ವಿವಿಧ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಒಳಚರಂಡಿ ನೀರಿನಲ್ಲಿ ಜೆಎನ್.1 ತಳಿಯ ಮೇಲ್ವಿಚಾರಣೆ ನಡೆಸಲಿದೆ.
CRISPR ಆಧಾರದಲ್ಲಿ ನಡೆಯುವ ಈ ಪರೀಕ್ಷೆಯು ವೈರಸನ್ನಷ್ಟೇ ಪತ್ತೆ ಮಾಡುವುದಿಲ್ಲ. ಇದು ಓಮ್ರಿಕಾನ್ ವಂಶವಾಹಿನಿಯ ಹಿಂದಿರುವ ರೂಪಾಂತರ ತಳಿಗಳನ್ನೂ ಪ್ರತ್ಯೇಕಿಸುತ್ತದೆ. ಈ ತಂತ್ರಜ್ಞಾನವು ಅನುಕ್ರಮ ಬದಲಾವಣೆಗಳಿಂದಾಗಿ ಸಿಗ್ನಲ್‌ನ ಅನುಪಸ್ಥಿತಿಯನ್ನು ಅವಲಂಬಿಸಿರುವ ಬದಲು ವೈರಸ್ ರೂಪಾಂತರಗೊಳ್ಳುವ ನಿಜವಾದ ಮೂಲ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಪ್ರತ್ಯೇಕಿಸುತ್ತದೆ.
ಈ ಕುರಿತು ಜರ್ನಲ್ ಆಫ್ ಬಯೋಟೆಕ್ನಾಲಜಿ ಆ್ಯಂಡ್ ಬಯೋಮೆಡಿಸಿನ್ನಲ್ಲಿ ತಿಳಿಸಲಾಗಿದೆ. ಓಮಿಕ್ರಿಸ್ಪ್ 80 ಕ್ಲಿನಿಕಲ್ ಮಾದರಿ ಮತ್ತು 160 ತ್ಯಾಜ್ಯ ನೀರಿನ ಫಲಿತಾಂಶವನ್ನು ಅನುಮೋದಿತ qRTPCR ಪರೀಕ್ಷೆಯ ಮೂಲಕ ಹೋಲಿಸಿ ಮೌಲ್ಯೀಕರಿಸಿದೆ.