Oiling Hair At Night: ಇತ್ತೀಚಿನ ದಿನಗಳಲ್ಲಿ ತ್ವಚೆಯ ಆರೈಕೆ ಜತೆಗೆ ಕೂದಲು ರಕ್ಷಣೆಯತ್ತಲೂ ಜನರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಹೊಳೆಯಲಿ ಎಂದು ದಿನವೂ ತಲೆಗೆ ಎಣ್ಣೆ ಹಾಕಿಕೊಳ್ಳುತ್ತಾರೆ. ಆದರೆ, ಬಹುತೇಕ ಜನರಿಗೆ ಯಾವ ಸಮಯಕ್ಕೆ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ತಿಳಿದಿಲ್ಲ. ಬಹುತೇಕ ಜನರು ಬೆಳಗಿನ ಜಾವವೇ ಎಣ್ಣೆ ಹಚ್ಚಿಕೊಳ್ಳಲು ಬಯಸುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಎಣ್ಣೆ ಹಚ್ಚಿ ಮಲಗುವುದರಿಂದ ಏನಾಗುತ್ತದೆ, ಯಾವೆಲ್ಲ ಪ್ರಯೋಜನಗಳಿವೆ ಮತ್ತು ಸಂಶೋಧನೆ ಏನು ಹೇಳುತ್ತದೆ ಎಂದು ನೀವು ತಿಳಿದರೇ, ಇಂದಿನಿಂದಲೇ ರಾತ್ರಿ ಸಮಯ ಎಣ್ಣೆ ಹಚ್ಚಲು ಪ್ರಾರಂಭಿಸುವುದು ಪಕ್ಕಾ.
ವಾಸ್ತವವಾಗಿ, ಎಣ್ಣೆಯು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದೇ ರೀತಿ ರಾತ್ರಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೈಕೆಗೂ ಸಹಕಾರಿಯಾಗುತ್ತದೆ ಜತೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಕೆಲ ಪ್ರಮುಖ ಪ್ರಯೋಜನಗಳು ಹೀಗಿವೆ.
ಕೂದಲು ಶುಷ್ಕತೆ (ಒಣಗುವಿಕೆ)ಯನ್ನು ಕಡಿಮೆ ಮಾಡುತ್ತದೆ:ಸರಿಯಾದ ಪೋಷಣೆ ಮಾಡದೇ ಇದ್ದಾಗ ಕೂದಲು ಚರ್ಮದಂತೆಯೇ ಒಣಗಲಾರಂಭಿಸುತ್ತದೆ. ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ. ಇದಕ್ಕೆ ಪರಿಹಾರ ಎಂದರೆ ರಾತ್ರಿ ಕೂದಲಿಗೆ ಎಣ್ಣೆ ಹಚ್ಚುವುದು. ಹೀಗೆ ಮಾಡುವುದರಿಂದ ಕೂದಲು ಒಣಗುವಿಕೆ ತಡೆಯಬಹುದು. ಏಕೆಂದರೆ ರಾತ್ರಿ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ ಜತೆಗೆ ಹೈಡ್ರೇಟ್ ಆಗಿರುವುದು ಮಾತ್ರವಲ್ಲದೇ ಆರೋಗ್ಯಕರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
2016 ರಲ್ಲಿ "ಇಂಟರ್ನ್ಯಾಷನಲ್ ಜರ್ನಲ್ ಆಫ್ ಡರ್ಮಟಾಲಜಿ" ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ರಾತ್ರಿ ಸಮಯ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಶುಷ್ಕತೆ ಮತ್ತು ಕೂದಲು ಸೀಳುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ವಿಶ್ವವಿದ್ಯಾಲಯದ ಖ್ಯಾತ ಚರ್ಮರೋಗ ತಜ್ಞ ಡಾ.ಇಸ್ಮತುಲ್ಲಾ ಖಾನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಕೊಬ್ಬರಿ ಎಣ್ಣೆಯನ್ನು ರಾತ್ರಿ ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿ ಮತ್ತು ತೇವಾಂಶದಿಂದ ಕೂಡಿರುತ್ತದೆ ಎಂದೂ ತಿಳಿಸಿದ್ದಾರೆ.