Benefits of Fennel seeds:ಊಟ ಮಾಡಿದ ಬಳಿಕ ಬಾಯಿಯಲ್ಲಿ ಒಂದು ಟೀಸ್ಪೂನ್ನಷ್ಟು ಸೋಂಪು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಮತ್ತು ಬಾಯಿ ದುರ್ವಾಸನೆಯನ್ನು ಹೋಗಲಾಡಿಲು ಸಾಧ್ಯವಾಗಿಸುತ್ತದೆ. ಫಾಸ್ಟ್ ಫುಡ್, ಕರಿದ ಆಹಾರ ಹಾಗೂ ಇತರ ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಬಹುತೇಕರು ಹಲವು ರೀತಿಯ ಜೀರ್ಣಕ್ರಿಯೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹವರು ಬಡೆಸೋಂಪು ಸೇವಿಸುವುದರಿಂದ ಪರಿಹಾರ ಲಭಿಸುತ್ತದೆ. ತಜ್ಞರು ತಿಳಿಸುವ ಪ್ರಕಾರ, ಬಡೆಸೋಂಪಿನಲ್ಲಿ ಜೀರ್ಣಕ್ರಿಯೆಗೆ ಪೂರಕವಾಗಿರುವ ಅಂಶಗಳು ಅಡಕವಾಗಿವೆ.
2017ರಲ್ಲಿ 'ಎವಿಡೆನ್ಸ್- ಬೇಸ್ಡ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್' ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಊಟ ಮಾಡಿದ ನಂತರ ಬಡೆಸೋಂಪು ಬೀಜಗಳನ್ನು ಸೇವಿಸಿದ ಜನರಲ್ಲಿ ಕಾಡುವಂತಹ ಹೊಟ್ಟೆ ನೋವು ಮತ್ತು ಅಜೀರ್ಣದ ಲಕ್ಷಣಗಲು ಕಡಿಮೆಯಾಗುತ್ತವೆ ಎಂಬ ಮಾಹಿತಿ ಬಹಿರಂಗವಾಗಿದೆ.
ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಎಸ್.ಕೆ. ಸಿಂಗ್ ಅವರು, ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಬಡೆಸೋಂಪುನಲ್ಲಿರುವ ಜೀರ್ಣಕಾರಿ ರಸಗಳು, ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಅವರು ವಿವರಿಸುತ್ತಾರೆ.
ವೆಬ್ಎಂಡಿಯಲ್ಲಿ ಪ್ರಕಟವಾಗಿರುವ ಸಂಶೋಧನೆಯ ಪ್ರಕಾರ, ಬಡೆಸೋಂಪು ತಿನ್ನುವುದರಿಂದ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳು ದೊರೆಯುತ್ತವೆ.
ಬಡೆಸೋಂಪು ನೀರು : ಬಡೆಸೋಂಪು ಅಗಿಯಲು ಇಷ್ಟಪಡದೇ ಇರುವವರು, ಬಡೆಸೋಂಪು ನೀರು ಸೇವನೆ ಮಾಡುವುದು ಉತ್ತಮ. ಒಂದು ಗ್ಲಾಸ್ ನೀರಿಗೆ 1 ಟೀಸ್ಪೂನ್ ಬಡೆಸೋಂಪು ಬೆರೆಸಿ 10 ರಿಂದ 15 ನಿಮಿಷಗಳ ಬಳಿಕ ಕುಡಿಯಬೇಕಾಗುತ್ತದೆ. ಅಜೀರ್ಣ ಹಾಗೂ ಆಮ್ಲದ ಹಿಮ್ಮುಖವಾಗಿ ಬರುವುದನ್ನು ತಡೆಯುತ್ತದೆ. ಊಟಕ್ಕಿಂತ ಅರ್ಧ ಗಂಟೆ ಮುನ್ನ ಇಲ್ಲವೇ ಊಟದ ಬಳಿಕ ಈ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಒಳ್ಳೆಯದಾಗುತ್ತದೆ. ಇದರಿಂದ ಹೊಟ್ಟೆಯ ಸೆಳೆತ ಕಡಿಮೆ ಆಗುತ್ತದೆ. ಜೊತೆಗೆ ನೈಸರ್ಗಿಕ ನಿರ್ವಿಶೀಕರಣಕಾರಕವಾಗಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ.