ಕರ್ನಾಟಕ

karnataka

ETV Bharat / health

ಮನಿ ಪ್ಲಾಂಟ್ ಮನೆಯಲ್ಲಿದ್ದರೂ ಸಂಪತ್ತಿನ ಕೊರತೆಯೇ? ನಿಮಗೆ ಗೊತ್ತಿಲ್ಲದ 2 ಸಂಗತಿಗಳಿವೆ! - Money Plant - MONEY PLANT

ವಾಸ್ತುಪ್ರಕಾರವೇ ಮನೆಯಲ್ಲಿ ಮನಿ ಪ್ಲಾಂಟ್​ ಇಟ್ಟರೂ ಆರ್ಥಿಕ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುವವರಿಗೆ 2 ಸಲಹೆಗಳಿವೆ. ಇದನ್ನೊಮ್ಮೆ ಪ್ರಯೋಗ ಮಾಡಿ ನೋಡಬಹುದು.

Money Plant
ಮನಿ ಪ್ಲಾಂಟ್ (ETV Bharat)

By ETV Bharat Karnataka Team

Published : Jul 4, 2024, 7:51 PM IST

ಜಗತ್ತು ಆಧುನಿಕತೆಯತ್ತ ವೇಗವಾಗಿ ಸಾಗುತ್ತಿದ್ದರೂ ಜನ ತಾವು ಬಲವಾಗಿ ನಂಬುವ ಕೆಲವು ವಿಚಾರಗಳನ್ನೂ ಜೊತೆಜೊತೆಯಲ್ಲೇ ಕೊಂಡೊಯ್ಯುತ್ತಾರೆ. ಇದಕ್ಕೆ ಉದಾಹರಣೆ ಮನಿ ಪ್ಲಾಂಟ್. ಹೌದು, ಕೆಲವರಿಗೆ ಇದರಲ್ಲಿ ನಂಬಿಕೆ ಇಲ್ಲದೇ ಇರಬಹುದು. ಆದರೆ ಈ ಗಿಡವನ್ನು ದೇವರಂತೆ ಪೂಜಿಸುವ ಅನೇಕರಿದ್ದಾರೆ. ಪಾಸಿಟಿವ್​ ವೈಬ್​ ಜೊತೆಗೆ ಆರ್ಥಿಕ ಆದಾಯವನ್ನೂ ಇದು ವೃದ್ಧಿಸುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.

ಆದರೆ ನಿಮಗೆ ಗೊತ್ತೇ? ಕೇವಲ ಮನಿ ಪ್ಲಾಂಟ್ ಅ​ನ್ನು ಮನೆಗೆ ತಂದಿಟ್ಟರೆ ನಿಮ್ಮ ಬದುಕಿನಲ್ಲಿ ಏನೂ ಬದಲಾವಣೆ ಆಗದೇ ಇರಬಹುದು. ಗಿಡದ ಮೇಲಿನ ನಂಬಿಕೆಯೂ ಹುಸಿಯಾಗಬಹುದು. ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.

ಮನಿ ಪ್ಲಾಂಟ್‌ ಗಿಡಕ್ಕೆ ಹಾಲು (ETV Bharat)

ಮನಿ ಪ್ಲಾಂಟ್‌ಗೆ ಹಾಲಿನ ಹನಿ: ವಾಸ್ತು ಪ್ರಕಾರ, ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅದಕ್ಕೆ ಪ್ರತಿದಿನ ಕೆಲವು ಹನಿ ಹಾಲು ಹಾಕಿ. ಈ ರೀತಿ ಮಾಡುವುದು ಮಂಗಳಕರ ಎಂದು ನಂಬಲಾಗಿದೆ. ಇದರಿಂದ ಲಕ್ಷ್ಮಿ ಅಂದರೆ ಧನಸಂಪತ್ತು ತ್ವರಿತವಾಗಿ ವೃದ್ಧಿಯಾಗುವುದಂತೆ.

ಸಕ್ಕರೆ: ಮನಿ ಪ್ಲಾಂಟ್‌ಗೆ ಸಕ್ಕರೆ ಹಾಕುವುದು ಕೂಡಾ ಶುಭಕರ ಎಂದು ಪರಿಗಣಿಸಲಾಗಿದೆ. ಇದು ಲಕ್ಷ್ಮಿಯನ್ನು ತೃಪ್ತಿಗೊಳಿಸುತ್ತದೆ. ಮನೆಯಲ್ಲಿ ಸಂಪತ್ತು, ಸಮೃದ್ಧಿ ಇರುತ್ತದೆ ಎಂದು ನಂಬುತ್ತಾರೆ.

ಮನಿ ಪ್ಲಾಂಟ್​ಗೆ ಸಕ್ಕರೆ ಹಾಕುವುದರಿಂದ ಸಂಪತ್ತು ವೃದ್ಧಿ (ETV Bharat)

ಇದನ್ನೂ ಓದಿ:ಬಾಲಕಿಯರಲ್ಲಿ ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗುವ ಜೀನ್​ ಪತ್ತೆ ಮಾಡಿದ ಸಂಶೋಧಕರು: ಯಾವುದಾ ಜೀನ್​? - genes that push weight gain

ಮನೆಯಲ್ಲಿ ನೊಣಗಳ ಕಾಟ ಹೆಚ್ಚಾಗಿದೆಯೇ?: ಹೀಗೆ ಮಾಡಿದ್ರೆ ಖಂಡಿತಾ NOಣ! - Tips To Get Rid Of Houseflies

ABOUT THE AUTHOR

...view details