ಕರ್ನಾಟಕ

karnataka

ಅಪರೂಪದ ಶಸ್ತ್ರಚಿಕಿತ್ಸೆ: ವ್ಯಕ್ತಿಯ ಬೆನ್ನಿನಲ್ಲಿ ಜೋತು ಬಿದ್ದಿದ್ದ 16.7 ಕೆಜಿ ತೂಕದ ಟ್ಯೂಮರ್ ತೆಗೆದು ಹಾಕಿದ ವೈದ್ಯರು ​ - 10 hour lasting complex surgery

By ETV Bharat Karnataka Team

Published : May 3, 2024, 1:02 PM IST

ಆನುವಂಶಿಕ ಅಸ್ವಸ್ಥತೆ ಈ ರೀತಿಯ ಟ್ಯೂಮರ್​ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ರೋಗಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯೊಬ್ಬರ ಬೆನ್ನಿನ ಮೇಲೆ ಬೆಳೆದಿದ್ದ ಗೆಡ್ಡೆಯನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿದ್ದಾರೆ.

A massive tumour weighing 16 7 kg successfully been removed
10 ಗಂಟೆಗಳ ಸತತ ಶಸ್ತ್ರಚಿಕಿತ್ಸೆ ಯಶಸ್ವಿ (IANS)

ಗುರುಗ್ರಾಮ, ಹರಿಯಾಣ: ವ್ಯಕ್ತಿಯ ಬೆನ್ನಿನಲ್ಲಿ ಗೋಣಿ ಚೀಲದಂತೆ ಜೋತು ಬಿದ್ದಿದ್ದ 16.7 ಕೆಜಿ ತೂಕದ ಭಾರಿ ಗಾತ್ರದ ಟ್ಯೂಮರ್​​ ಅನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಿದ್ದಾರೆ. ಇದಕ್ಕಾಗಿ ಬರೋಬ್ಬರಿ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ರೋಗಿ ಆರೋಗ್ಯವಾಗಿದ್ದಾರೆ.

ಫೆಸಿಫಿಕ್​ ದ್ವೀಪ ಮೂಲದ 27 ವರ್ಷದ ವ್ಯಕ್ತಿ ಈ ರೀತಿ ಕ್ಯಾನ್ಸರೇತರ ಟ್ಯೂಮರ್​ ಹೊಂದಿದ್ದರು. 2008 ರಿಂದ ಇವರ ಬೆನ್ನಿನಲ್ಲಿ ಈ ಟ್ಯೂಮರ್​ ಬೆಳೆಯುತ್ತಿದ್ದು, ಇದು ಅಂತಿಮವಾಗಿ 58*50 ಸೇಮಿ. ಗಾತ್ರಕ್ಕೆ ಬೆಳೆದು ನಿಂತಿತ್ತು. ಗುರುಗ್ರಾಮದ ಫೋರ್ಟಿಸ್​​ ಮೆಮೋರಿಯಲ್​ ರಿಸರ್ಚ್​​ ಇನ್ಸುಟಿಟ್ಯೂಟ್​ (ಎಫ್​ಎಂಆರ್​​ಐ) ವೈದ್ಯರು ಈ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

ದೈತ್ಯ ನ್ಯೂರೋಫೈಬ್ರೊಮಾ ಎಂಬ ಈ ಗಡ್ಡೆ ನರದ ಟ್ಯೂಮರ್​ ಆಗಿದೆ. ಇದು ಚರ್ಮದ ಅಡಿ ಹಲವು ವರ್ಷಗಳ ಕಾಲ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ ಎಂದು ಎಫ್​​ಎಂಆರ್​ಐನ ಸರ್ಜಿಕಲ್​ ಆನ್​ಕಾಲೊಜಿ ಹಿರಿಯ ನಿರ್ದೇಶಕರಾದ ನಿರಂಜನ್​ ನಾಯ್ಕ್​ ತಿಳಿಸಿದ್ದಾರೆ. ಅನುವಂಶಿಕ ಅಸ್ವಸ್ಥತೆ ಈ ರೀತಿಯ ಟ್ಯೂಮರ್​ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ರೋಗಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಚಲನೆ ನಿರ್ಬಂಧಿಸುತ್ತದೆ. ಈ ಟ್ಯೂಮರ್​​ನಿಂದ ಕೆಲವು ವೇಳೆ ಕಿರಿಕಿರಿ ಅಥವಾ ನೋವು, ಮತ್ತೆ ಕೆಲವು ಸಲ ರಕ್ತಸ್ರಾವ ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಟ್ಯೂಮರ್​ ಗಾತ್ರ ಮತ್ತು ಸಂಕೀರ್ಣತೆ ಆಧಾರಿಸಿ ಕೆಲವು ಹೆಚ್ಚಿನ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಯುವ ರೋಗಿಗೆ ವಿವಿಧ ದೇಶದ ಅನೇಕ ಅಸ್ಪತ್ರೆಗಳಲ್ಲಿ ಸರ್ಜರಿಗೆ ನಿರಾಕರಿಸಲಾಗಿತ್ತು. ಈ ಗೆಡ್ಡೆಗಳು ನಾಳೀಯ ಸ್ವಭಾವವನ್ನು ಹೊಂದಿವೆ, ಹೆಚ್ಚಿನ ಪ್ರದೇಶಗಳಲ್ಲಿ ರಕ್ತದ ದೊಡ್ಡ ಜಾಲಗಳನ್ನು ಹೊಂದಿರುತ್ತವೆ. ಇದರಿಂದಾಗಿ ಅನಿಯಂತ್ರಿತ ರಕ್ತಸ್ರಾವದ ಹೆಚ್ಚಿನ ಅಪಾಯ ಕೂಡ ಶಸ್ತ್ರಚಿಕಿತ್ಸೆ ವೇಳೆ ಎದುರಾಗುತ್ತದೆ. ಈ ಅಪಾಯವನ್ನು ನಿರ್ವಹಣೆ ಮಾಡುವ ಮೂಲಕ ಆರಂಭದಲ್ಲಿ ಎರಡು ವಿಧದ ಚಿಕಿತ್ಸೆ ನೀಡಿ 11 ಪ್ರಮುಖ ರಕ್ತನಾಳಗಳನ್ನು ತಡೆ ಹಿಡಿಯಲಾಗಿತ್ತು.

ಈ ಟ್ಯೂಮರ್​ ರೋಗಿ ಬೆನ್ನನ್ನು ಸಂಪೂರ್ಣ ಆವರಿಸಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ವ್ಯಕ್ತಿ ಬೆನ್ನನನ್ನು ವ್ಯಕ್ತಿಯ ತೊಡೆಯ ಚರ್ಮದ ಬದಲಾಗಿ ಟ್ಯೂಮರ್​ನಿಂದ ಪಡೆಯಲಾಗಿದ್ದ ಚರ್ಮದಿಂದಲೇ ಮುಚ್ಚಲಾಗಿದೆ. ಈ ಚರ್ಮ ಕ್ಯಾನರ್​ ​ರಹಿತವಾಗಿದೆ. 10 ಗಂಟೆಗಳ ಯಶಸ್ವಿ ಶಸ್ತ್ರ ಚಿಕಿತ್ಸೆಯಲ್ಲಿ ವ್ಯಕ್ತಿ ಸಂಪೂರ್ಣ ಬೆನ್ನನ್ನು ನಾವೀನ್ಯ ಪ್ರಕ್ರಿಯೆ ಮೂಲಕ ಸಹಜವಾಗಿ ಮುಚ್ಚಲಾಗಿದೆ.

ವ್ಯಕ್ತಿ ನಾಲ್ಕು ದಿನದ ಹಿಂದೆ ಡಿಸ್ಚಾರ್ಜ್​ ಆಗಿದ್ದು, ಆತನ ಪರಿಸ್ಥಿತಿ ದೃಢವಾಗಿದೆ. ರೋಗಿ ಸಂಪೂರ್ಣ ಮುಕ್ತವಾಗಿದ್ದು, ಉಳಿದ ಜೀವನವನ್ನು ಉತ್ತಮ ಗುಣಮಟ್ಟದೊಂದಿಗೆ ಕಳೆಯಬಹುದಾಗಿದೆ ಎಂದು ವೈದ್ಯರು ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ:ಮಧುಮೇಹಿಗಳು ಮದ್ಯ ಸೇವನೆ ಮಾಡಬಹುದೇ; ವೈದ್ಯರು ಹೇಳುವುದೇನು ಗೊತ್ತಾ?

ABOUT THE AUTHOR

...view details