'ಯುವ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಅವರೀಗ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ 'ಎಕ್ಕ'. ಆಯುಧ ಪೂಜೆಯ ಹಬ್ಬದಂದು ಎಕ್ಕ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿತ್ತು. ಇದೇನಿದು ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಹೀಗಿದೆ ಅಂತಾ ಗಾಂಧಿ ನಗರದಿಂದ ಸೌತ್ ಸಿನಿಮಾ ಇಂಡಸ್ಟ್ರಿವರೆಗೂ ಸಖತ್ ಟಾಕ್ ಆಗಿತ್ತು. ಆ ಮಟ್ಟಿಗೆ ಹವಾ ಸೃಷ್ಟಿಸೋಕ್ಕೆ ಕಾರಣ ಕನ್ನಡದ ಮೂರು ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಈ ಒಂದು ಪ್ರಾಜೆಕ್ಟ್ಗೆ ಕೈ ಜೋಡಿಸಿವೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಮಾಲೀಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಫಿಲ್ಮ್ಸ್ ಸಂಸ್ಥೆಯವರಾದ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಸೇರಿ ಎಕ್ಕ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುವ ಹೊಣೆ ಹೊತ್ತಿದೆ. ಹೀಗಾಗಿ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ.
ಅದ್ದೂರಿ ಸೆಟ್ಗಳನ್ನು ಹಾಕಿ ಚಿತ್ರೀಕರಣ:ಸಹಜವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ಗಾಗಿ ಸ್ಟುಡಿಯೋ ಅಥವಾ ಅದ್ದೂರಿ ಸೆಟ್ಗಳನ್ನು ಹಾಕಿ ಚಿತ್ರೀಕರಿಸಲಾಗುತ್ತದೆ. ಆದ್ರೆ ಎಕ್ಕ ಚಿತ್ರತಂಡ ರಿಯಲಿಸ್ಟಿಕ್ ಜಾಗದಲ್ಲಿ ತಮ್ಮ ಚಿತ್ರದ ಫಸ್ಟ್ ಲುಕ್ನ ಶೂಟಿಂಗ್ ಮಾಡಿರೋದು ವಿಶೇಷ. ಹೌದು, ಎಕ್ಕ ಚಿತ್ರತಂಡ ಫಸ್ಟ್ ಲುಕ್ ಶೂಟ್ನ ಒಂದು ಮೇಕಿಂಗ್ ವಿಡಿಯೋ ರಿವೀಲ್ ಮಾಡಿದೆ. ಈ ವಿಡಿಯೋದಲ್ಲಿ ಸಾಲಾಗಿ ನೇತು ಹಾಕಿರುವ ಮಟನ್, ಮಾಟನ್ ಕಟ್ ಮಾಡುವ ದೃಶ್ಯ ಕಂಡು ಬರುತ್ತದೆ. ಸಿನಿಮಾದ ಕಥೆ ಡಿಮ್ಯಾಂಡ್ ಮಾಡಿದ ಹಿನ್ನೆಲೆ, ಚಿತ್ರತಂಡ ಈ ಫೋಟೋ ಶೂಟ್ ಮಾಡಿದೆ.
ಈಗಾಗಲೇ, ದಯವಿಟ್ಟು ಗಮನಿಸಿ, ರತ್ನನ್ ಪ್ರಪಂಚ ಚಿತ್ರಗಳನ್ನು ಮಾಡಿರೋ ರೋಹಿತ್ ಪದಕಿ ಎಕ್ಕ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಕ್ಕ ಚಿತ್ರತಂಡದ ಸದಸ್ಯರೊಬ್ಬರು ಹೇಳುವ ಹಾಗೇ, ಈ ಚಿತ್ರದ ಕಥೆ ಡಿಮ್ಯಾಂಡ್ ಮಾಡಿದ ಕಾರಣ ಶಿವಾಜಿನಗರದ ರೆಸಲ್ ಮಾರ್ಕೆಟ್ನಲ್ಲಿ ಎಕ್ಕ ಚಿತ್ರದ ಕಲರ್ಫುಲ್ ಫೋಟೋಶೂಟ್ ಮಾಡಲಾಗಿದೆ. ಯುವ ರಾಜ್‌ಕುಮಾರ್ ಔಟ್ ಅಂಡ್ ಔಟ್ ಮಾಸ್ ಲುಕ್ಲ್ಲಿ ಕಾಣಿಸಿಕೊಂಡಿದ್ದು ರತ್ನ ಎಂಬ ಹೆಸರು ಈ ಎಕ್ಕ ಕಥೆಗೆ ಲಿಂಕ್ ಆಗುತ್ತೆ ಅಂತಾರೆ.