ಕರ್ನಾಟಕ

karnataka

ETV Bharat / entertainment

ತಾಪ್ಸಿ - ಮಥಿಯಾಸ್ ಬೋ ಮದುವೆಯ ಸಂಗೀತ ಸಮಾರಂಭದ ವಿಡಿಯೋ ಹಂಚಿಕೊಂಡ; ವೆಡ್ಡಿಂಗ್​ ಪ್ಲಾನರ್​ - wedding planners for Taapsee Pannu

ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂಗೀತ ಸಂಜೆಯ ಅಲಂಕಾರದಲ್ಲಿ ಹೊಳೆಯುವ ಬೆಳಕು ಮತ್ತು ಆಕರ್ಷಕ ಸಾಮಗ್ರಿಗಳು ಎಲ್ಲರನ್ನು ಸೆಳೆದಿದೆ.

wedding planners for Taapsee Pannu and Mathias Boe published a video on Instagram
wedding planners for Taapsee Pannu and Mathias Boe published a video on Instagram

By ETV Bharat Karnataka Team

Published : May 2, 2024, 11:20 AM IST

ಹೈದರಾಬಾದ್​: ತಮ್ಮ ಬಹುಕಾಲದ ಗೆಳೆಯನನ್ನು ವರಿಸಿದ್ದ ಬಾಲಿವುಡ್​ ನಟಿ ತಾಪ್ಸಿ ಪನ್ನು ಮದುವೆ ಕುರಿತು ಯಾವುದೇ ಫೋಟೋವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದರೆ, ಕುಟುಂಬದ ಸಮ್ಮುಖದಲ್ಲಿ ನಡೆದ ಆತ್ಮೀಯ ಕಾರ್ಯಕ್ರಮದ ಡ್ಯಾನ್ಸ್​​ ಪ್ರದರ್ಶನ ಸೇರಿದಂತೆ ಕೆಲವು ಫೋಟೋ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅಭಿಮಾನಿಗಳಿಗೆ ರಸದೌತಣ ನೀಡಿದ್ದವು. ಇದೀಗ ಬಾಲಿವುಡ್​ ನಟಿಯ ಮದುವೆ ಆಯೋಜಿಸಿದ್ದ ಈವೆಂಟ್​ ಪ್ಲಾನರ್ಸ್​ ದಂಪತಿಯ ಸಂಗೀತ ಸಮಾರಂಭದಲ್ಲಿ ಯಾವ ರೀತಿ ಮಂಟಪವನ್ನು ಅಲಂಕಾರ ಮಾಡಲಾಗಿತ್ತು ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂಗೀತ ಸಂಜೆಯ ಅಲಂಕಾರದಲ್ಲಿ ಹೊಳೆಯುವ ಬೆಳಕು ಮತ್ತು ಆಕರ್ಷಕ ಸಾಮಗ್ರಿಗಳು ಎಲ್ಲರನ್ನೂ ಸೆಳೆದಿದೆ. ತಾಪ್ಸಿ ಪನ್ನು ಮತ್ತು ಮಥಾಯಿಸ್​​ ಬೋ ಅವರ ಸಂಗೀತ ಸಮಾರಂಭದ ಝಲಕ್​ ಇದಾಗಿದೆ ಎಂಬ ಅಡಿಬರಹದೊಂದಿಗೆ ಫೋಟೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಶಾಂತ ಸಾಗದಲ್ಲಿ ಅದ್ಬುತ ಚಿತ್ರಗಳು ಸೆರೆಯಾಗಿದೆ.

ಉದಯಪುರದಲ್ಲಿ ನಡೆದ ಮದುವೆ ಸಮಾರಂಭದ ಸಂಗೀತ ಕಾರ್ಯಕ್ರಮವನ್ನು ನೀಲಿ ಕಪ್ಪು ಬೆಳಕಿನಿಂದ ವ್ಯವಸ್ಥೆ ಮಾಡಲಾಗಿದೆ. ಉದ್ದನೆ ಗೊಂಚಲಿನ ಅಲಂಕಾರಿಕ ಲೈಟ್​​ಗಳು ಕಾರ್ಯಕ್ರಮದ ವೇದಿಕೆ ಅಂದ ಹೆಚ್ಚಿಸಿದೆ. ಜೊತೆಗೆ ಆರ್ಟ್​ವರ್ಕ್​ ಇದರ ಮೆರಗು ಹೆಚ್ಚಿಸಿದೆ. ತಾಪ್ಸಿ ಮತ್ತು ಮಥಾಯಿಸ್​​ ಅವರ ಸಂಗೀತ ರಾತ್ರಿಯ ಎಕ್ಸ್​​​​ಕ್ಲೂಸಿವ್​ ನಡಿಗೆಯ ಹಾದಿ ಇದು. ಪ್ರವೇಶದ ಸ್ಥಳ ಮ್ಯಾಜಿಕ್​, ಬೆಳಕಿನ ರಾಶಿ ಮತ್ತು ಪ್ರೀತಿಯ ಹೊನಲಿನಿಂದ ಕೂಡಿದೆ ಎಂದು ಅಡಿ ಬರಹದಲ್ಲಿ ತಿಳಿಸಲಾಗಿದೆ.

ಮಾರ್ಚ್​ 22ರಂದು ನಟಿ ತಾಪ್ಸಿ ಮಥಾಯಿಸ್​ ಬೋ ಅವರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆದಿತ್ತು. ಕೇವಲ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿರತು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಉದಯಪುರದ ಐಟಿಸಿ ಹೋಟೆಲ್​ನಲ್ಲಿ ಈ ಕನಸಿನ ಮದುವೆ ಜರುಗಿತ್ತು.

ಇನ್ನು ವೃತ್ತಿ ಜೀವನದೆಡೆಗೆ ಗಮನಿಸುವುದಾದರೆ, ನಟಿ ತಾಪ್ಸಿ ಸದ್ಯ ತಮ್ಮ ಬಹು ನಿರೀಕ್ಷಿತ 'ಹಸೀನ್​ ದಿಲ್ರುಬಾ' ಸೀಕ್ವೆನ್ಸ್​ನಲ್ಲಿ ಬ್ಯಿಸಿಯಾಗಿದ್ದಾರೆ. ಜೊತೆಗೆ 'ವೊ ಲಡ್ಕಿ ಹೈ ಕಹಾ' ಮತ್ತು 'ಖೇಲ್​ ಖೇಲ್​ ಮೇ' ಅಲ್ಲಿ ಕೂಡ ಕಾಣಿಸಲಿದ್ದಾರೆ.

ಮಥಿಯಾಸ್ ಬೋ ಡೆನ್ಮಾರ್ಕ್ ಮೂಲದವರು. ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುದಾರ. ಇವರಿಬ್ಬರು ಬಹು ಸಮಯಗಳಿಂದ ಡೇಟಿಂಗ್​ನಲ್ಲಿದ್ದರು. ತಮ್ಮ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದು, ಈ ವಿಚಾರದ ಬಗ್ಗೆ ಮಾತನಾಡುವಂತೆ ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಮೂಲಕ ಒತ್ತಾಯಿಸುತ್ತಿದ್ದಾರೆ. ಆದರೆ, ನಟಿ ಮಾತ್ರ ಇದು ತಮ್ಮ ವೈಯಕ್ತಿಕ ಸಮಾರಂಭವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:'ನೀ ನನ್ನ ಜಗದ ಬೆಳಕು': ಮುದ್ದಿನ ಮಡದಿ ಅನುಷ್ಕಾ ಬರ್ತ್​ಡೇಗೆ ವಿರಾಟ್​​ ಸ್ಪೆಷಲ್​ ವಿಶ್​​

ABOUT THE AUTHOR

...view details