ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಜನಪ್ರಿಯ ಸೆಲೆಬ್ರಿಟಿ ಕಪಲ್ ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ಕಾಣಿಸಿಕೊಂಡರು. ವಿಘ್ನೇಶ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ನೀಡಿದ ಸುಳಿವಿನ ಪ್ರಕಾರ, ದಂಪತಿ ಬಹುಶಃ ಬರ್ತ್ಡೇ ವೆಕೇಷನ್ಗಾಗಿ ನಗರದಿಂದ ಹೊರಗೆ ಹೋದಂತಿದೆ.
ನಯನತಾರಾ ವೈಟ್ ಕುರ್ತಾ ಮತ್ತು ಪೈಜಾಮ, ಡಾರ್ಕ್ ಶಾಲ್ ಧರಿಸಿ ಸರಳ ಸುಂದರಿಯಾಗಿ ಕಾಣಿಸಿಕೊಂಡರು. ಮತ್ತೊಂದೆಡೆ ವಿಘ್ನೇಶ್ ಶಿವನ್, ವೈಟ್ ಟಿ-ಶರ್ಟ್ ಮತ್ತು ಟ್ಯಾನ್ ಶಾರ್ಟ್ಸ್ನಲ್ಲಿ ಕಾಣಿಸಿಕೊಂಡಿದ್ದು, ಮಗನನ್ನು ಹಿಡಿದಿದ್ದರು. ಅವಳಿ ಮಕ್ಕಳು ಮ್ಯಾಚಿಂಗ್ ಡ್ರೆಸ್ ಧರಿಸಿದ್ದರು. ಜನಪ್ರಿಯ ದಂಪತಿ ಪಾಪರಾಜಿಗಳನ್ನು ಕಂಡು ಮುಗುಳ್ನಕ್ಕರು.
ನಯನತಾರಾ ನವೆಂಬರ್ 18 ರಂದು 40ನೇ ಜನ್ಮದಿನ ಆಚರಿಸಿಕೊಂಡರು. ಪುಷ್ಪಾಲಂಕಾರದ ಕೋಣೆ, ಬರ್ತ್ಡೇ ಡೆಕೊರೇಶನ್ಗಳನ್ನೊಳಗೊಂಡ ಗ್ಲಿಂಪ್ಸ್ ಅನ್ನು ವಿಘ್ನೇಶ್ ಹಂಚಿಕೊಂಡಿದ್ದಾರೆ. ಈ ಸೆಲೆಬ್ರೇಶನ್ ಮತ್ತು ಇತ್ತೀಚಿನ ನಟ ಧನುಷ್ ಜೊತೆಗಿನ ವಿವಾದಗಳ ಹೊರತಾಗಿಯೂ, ದಂಪತಿ ಕುಟುಂಬದ ಉತ್ತಮ ಕ್ಷಣವನ್ನು ಮಿಸ್ ಮಾಡಿಕೊಂಡಿಲ್ಲ. ಫ್ಯಾಮಿಲಿ ಟೈಮ್ಗೆ ತಮ್ಮ ಮೊದಲ ಆದ್ಯತೆ ನೀಡಿದ್ದಾರೆ.
ಇತ್ತೀಚೆಗಷ್ಟೇ ನಟಿ ನಯನತಾರಾ ಅವರು ಸೂಪರ್ ಸ್ಟಾರ್ ಧನುಷ್ ಅವರೊಂದಿಗಿನ ಕಾನೂನು ವಿವಾದವನ್ನು ಬಹಿರಂಗ ಪತ್ರದ ಮೂಲಕ ತಿಳಿಸಿದ್ದರು. ಧನುಷ್ ವಿರುದ್ಧ ಆಕ್ರೋಶ ಹೊರಹಾಕಿದ ನಂತರ, ನಯನತಾರಾ ಮತ್ತು ವಿಘ್ನೇಶ್ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.