'ಒಂದು ಸರಳ ಪ್ರೇಮಕಥೆ' ಚಿತ್ರದ ಬಳಿಕ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ 'ಪೆಪೆ'. ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಪೆಪೆ ವಿತರಣೆ ಹಕ್ಕು ಕೆಆರ್‌ಜಿ ತೆಕ್ಕೆಗೆ:ಕ್ಲಾಸ್ ಹೀರೋ ಆಗಿ ಸೈ ಎನಿಸಿಕೊಂಡಿರುವ ವಿನಯ್ ಅವರೀಗ 'ಪೆಪೆ' ಚಿತ್ರಕ್ಕಾಗಿ ಮಾಸ್ ಅವತಾರ ಎತ್ತಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಕ್ಲಾಸ್ ಹೀರೋನನ್ನು ಮಾಸ್ ಲುಕ್ನಲ್ಲಿ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. 'ಪೆಪೆ ಪ್ರಿಸೆಟ್' ಟೈಟಲ್ ಅಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್‌ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
'ಪೆಪೆ' ತಂಡಕ್ಕೆ ಕೆಆರ್‌ಜಿ ಸಾಥ್:ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಈ ಸಂಸ್ಥೆಯೀಗ 'ಪೆಪೆ' ಚಿತ್ರ ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ 'ಪೆಪೆ' ಸಿನಿಮಾ ವಿತರಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಕ್ಲಾಸ್ ಹೀರೋನಿಂದ ಮಾಸ್ ಲುಕ್ಗೆ ಎಂಟ್ರಿ: ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಆದ್ರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಚಿತ್ರದಲ್ಲಿ ವಿನಯ್ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ನಟನಾಗಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.