ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ನಟನೆಯ 'ವೆಟ್ಟಿಯನ್' ಚಿತ್ರವೂ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದ್ದು, ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ಆರಂಭದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ, ಚಿತ್ರ ಬಿಡುಗಡೆಯಾಗಿ ವಾರ ಕಳೆಯುತ್ತಿದ್ದಂತೆ ಸಿನಿಮಾ ನಿರೀಕ್ಷಿತ ಮಟ್ಟದ ಗಳಿಗೆ ನಡೆಸುವಲ್ಲಿ ವಿಫಲವಾಗಿದೆ. ಅಕ್ಟೋಬರ್ 10ರಂದು ಬಿಡುಗಡೆಯಾದ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ದಿನಗಳ ಕಳೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಇದ ಅಬ್ಬರ ಕೊಂಚ ಮಸುಕಾದಂತೆ ಕಂಡು ಬಂದಿದೆ.
ಅದ್ದೂರಿ ಆರಂಭ: ಚಿತ್ರದ ಕುರಿತ ಮಿಶ್ರಾ ಪ್ರತಿಕ್ರಿಯೆ ಹೊರತಾಗಿ ಚಿತ್ರವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಚಿತ್ರ ಆರಂಭವಾದಗಿನಿಂದ ಇಲ್ಲಿಯವರೆಗೆ ಒಟ್ಟು 124 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಆರಂಭದಲ್ಲಿ ಉತ್ತಮ ಪ್ರದರ್ಶನ ಕಂಡು ಬಂದಿದೆ. ಆದರೆ, ವಾರ ಕಳೆಯುತ್ತಿದ್ದಂತೆ ಸಿನಿಮಾದ ಲಾಭ ಗಳಿಕೆಯ ಮೇಲೆ ಮಸುಕು ವಾತಾವರಣ ಕವಿದಿದೆ. ಚಿತ್ರದ ಟಿಕೆಟ್ ಮಾರಾಟದಲ್ಲೂ ಅಂದುಕೊಂಡ ನಿರೀಕ್ಷೆ ತುಲುಪಿಲ್ಲ. ಮೊದಲ ದಿನಕ್ಕೆ ಹೋಲಿಸಿದರೆ, 9ನೇ ದಿನ ಟಿಕೆಟ್ ಮಾರಾಟದಲ್ಲಿ ಶೇ 74.89ರಷ್ಟು ಕುಸಿತ ಕಂಡಿದೆ.
9ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಸ್ಯಾಕ್ನಿಲ್ಕ್ ಪ್ರಕಾರ, ಸಿನಿಮಾ ಬಿಡುಗಡೆಯಾಗಿ ಒಂಬತ್ತನೇ ದಿನಕ್ಕೆ 124.80 ಲೋಟಿ ಸಂಗ್ರಹಿಸಿದೆ. ಒಂದೇ ವಾರದಲ್ಲಿ ಚಿತ್ರ 122.15ಕೋಟಿ ಸಂಗ್ರಹಿಸಿತ್ತು. ಅಕ್ಟೋಬರ್ 18 ರಂದು ಸಿನಿಮಾದ ಪ್ರೇಕ್ಷಕರು, ಪ್ರಸಾರದಲ್ಲೂ ಬದಲಾವಣೆ ಕಂಡು ಬಂದಿದ್ದು, ಕೇವಲ ಶೇ 17.15ರಷ್ಟು ವೀಕ್ಷಣೆ ಕಂಡಿದೆ.
ಹೀಗಿದೆ ಗಳಿಕೆಯ ಲೆಕ್ಕಾಚಾರ:ಮೊದಲದಿನದ ಕಲೆಕ್ಷನ್: ಎಲ್ಲಾ ಭಾಷೆ ಸೇರಿ ಒಟ್ಟು 122.15 ಕೋಟಿ (ತಮಿಳು: 105.07 ಕೋಟಿ, ತೆಲುಗು: 13.58 ಕೋಟಿ, ಹಿಂದಿ: 3.2 Cr ಕೋಟಿ, ಕನ್ನಡ: 0.3 ಕೋಟಿ)
9 ಮೇ ದಿನ (ಎರಡನೇ ಶುಕ್ರವಾರ): 2.65 ಕೋಟಿ