ಮುಂಬೈ (ಮಹಾರಾಷ್ಟ್ರ): ರಂಗೀಲಾ, ಸತ್ಯ, ಭೂತ್ ಸೇರಿದಂತೆ ಹಲವು ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಮತ್ತು ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಎಂಟು ವರ್ಷಗಳ ವೈವಾಹಿಕ ಜೀವನ ನಡೆಸಿರುವ ಅವರು ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಿಚ್ಛೇದನದ ಹಿಂದಿನ ಕಾರಣಗಳ ಬಗೆಗಿನ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಒಂದು ಸಂಭವನೀಯ ಕಾರಣವೆಂದರೆ, ಊರ್ಮಿಳಾ ಮತ್ತು ಮೊಹ್ಸಿನ್ ನಡುವಿನ ವಯಸ್ಸಿನ ಅಂತರ ಆಗಿರಬಹುದು. ನಟಿ ತಮ್ಮ ಪತಿಗಿಂತ 10 ವರ್ಷ ದೊಡ್ಡವರು. ಅಲ್ಲದೇ ತಡವಾಗಿ ಮದುವೆಯಾಗಿರುವುದು (ತಮ್ಮ 40ರ ಆಸುಪಾಸು) ಕೂಡಾ ವೈವಾಹಿಕ ಜೀವನಕ್ಕೆ ಅಡೆತಡೆಯಾಗುವ ಒಂದು ಕಾರಣ ಇರಬಹುದು ಎನ್ನಲಾಗ್ತಿದೆ.
ಸಾಮಾನ್ಯವಾಗಿ, ಅತಿ ಹೆಚ್ಚು ವಯಸ್ಸಿನ ಅಂತರವನ್ನು ಹೊಂದಿರುವ ಮದುವೆಗಳು ತೊಡಕುಗಳನ್ನು ಎದುರಿಸೋದುಂಟು. ಊರ್ಮಿಳಾ ಅವರ ವಿಷಯದಲ್ಲಿ ಹಾಗಿಲ್ಲದಿದ್ದರೂ ಕೂಡಾ, ಅನೇಕ ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ವಯಸ್ಸು ಮೀರಿದ ನಂತರ ಮಕ್ಕಳನ್ನು ಹೊಂದುವಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ. ಮತ್ತೊಂದು ಊಹಾಪೋಹವೆಂದರೆ, ಹಣಕಾಸಿಗೆ ಸಂಬಂಧಿಸಿದಂತೆ ಜಗಳ ನಡೆದಿರಬಹುದು. ಇವು ವಿಚ್ಛೇದನಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಊಹಾಪೋಹ ಅಥವಾ ವದಂತಿಗಳೇನೇ ಇದ್ದರೂ, ನಿಖರ ಕಾರಣ ದಂಪತಿಯಿಂದಲೇ ನಿರೀಕ್ಷಿಸಬೇಕಾಗಿದೆ.
ಇದನ್ನೂ ಓದಿ:ಶಿವಣ್ಣ, ಉಪ್ಪಿ, ರಾಜ್ ಶೆಟ್ರ '45' ಸಿನಿಮಾಗೆ ಸಿಕ್ತು ಆನಂದಪೀಠಾಧೀಶ್ವರ ಆಚಾರ್ಯ ಅಭಯಹಸ್ತ - Multi Starrer 45 Movie
ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಈ ಬಗ್ಗೆ ಅಭಿಪ್ರಾಯಗಳ ವ್ಯಕ್ತವಾಗುತ್ತಿದೆ. ಗಂಡನ ಕುಟುಂಬಸ್ಥರು ತಮ್ಮ ಬ್ಯುಸಿನೆಸ್ಗಾಗಿ ನಟಿಯ ಆಸ್ತಿ ಮಾರಾಟ ಮಾಡಲು ಒತ್ತಾಯಿಸಿರಬಹುದು ಎಂದು ನೆಟ್ಟಿಗರೋರ್ವರು ಬರೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನಾಲ್ಕು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಆಗಿದೆ. ಆದ್ರೆ ಇದು ಪರಸ್ಪರ ಒಪ್ಪಿಗೆಯಿಂದ ಆಗಿರೋದಲ್ಲ ಎನ್ನಲಾಗಿದೆ. ಮೊಹ್ಸಿನ್ ಅಖ್ತರ್ ಮಿರ್ ಕಾಶ್ಮೀರ ಮೂಲದ ಉದ್ಯಮಿ ಮತ್ತು ಮಾಡೆಲ್. ಲಕ್ ಬೈ ಚಾನ್ಸ್, ಬಿಎ ಪಾಸ್ ಮತ್ತು ಮುಂಬೈ ಮಸ್ತ್ ಕಲಂದರ್ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ಸಹ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: 'ನಿಮ್ಮ ಪ್ರತಿ ಮಾತಿಗೂ ಉತ್ತರಿಸುತ್ತೇನೆ'; ಪವನ್ ಕಲ್ಯಾಣ್ -ಪ್ರಕಾಶ್ ರಾಜ್ ಜಟಾಪಟಿ - Prakash Raj on Pawan Kalyan
ಮೊಹ್ಸಿನ್ ಅಖ್ತರ್ ಮಿರ್ ಮತ್ತು ಊರ್ಮಿಳಾ ಮಾತೋಂಡ್ಕರ್ ಮೊದಲ ಬಾರಿಗೆ 2014ರಲ್ಲಿ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸೋದರಳಿಯನ ವಿವಾಹದ ಸಂದರ್ಭ ಭೇಟಿಯಾದರು. ಮೊಹ್ಸಿನ್ ಅವರಿಗಿದು ಮೊದಲ ನೋಟದಲ್ಲೇ ಪ್ರೀತಿ ಎಂದು ಹೇಳಲಾಗಿದೆ. 2016ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ವಿವಾಹ ಮಹೋತ್ಸವದಲ್ಲಿ ಹಾಜರಿದ್ದ ಕೆಲ ಗಣ್ಯರ ಪೈಕಿ ಮನೀಶ್ ಕೂಡ ಸೇರಿದ್ದರು. ಸದ್ಯ ಈ ವಿಚ್ಛೇದನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. (ಐಎಎನ್ಎಸ್ ಇನ್‌ಪುಟ್).