ದಕ್ಷಿಣ ಚಿತ್ರರಂಗದ ಬುದ್ಧಿವಂತ ನಟ - ನಿರ್ದೇಶಕ ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಸಾರಥ್ಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಯು ಐ'. ಉಪೇಂದ್ರ ಅವರ ಬಹುತೇಕ ಚಿತ್ರಗಳು ವಿಶಿಷ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಈ ಸಿನಿಮಾ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವೆ.
ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಯುಐ' ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ. ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಅಮೆರಿಕದಲ್ಲೂ ಸಹ ಯುಐ ಸಿನಿಮಾದ ಹವಾ ಜೋರಾಗಿದೆ. ಅಮೆರಿಕ ಕನ್ನಡಿಗರು ಯುಐ ಸಿನಿಮಾ ಪೋಸ್ಟರ್ಗಳನ್ನು ಹಿಡಿದು ಸಿನಿಮಾಗೆ ಶುಭ ಕೋರಿದ್ದಾರೆ. ಸಿನಿಮಾ ನೋಡುವ ತಮ್ಮ ಕಾತರತೆ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ಸಾರಥ್ಯದ 'ಯು ಐ' ಯಶಸ್ಸಿಗೆ ಹಾರೈಸಿದ ಅಭಿಮಾನಿಗಳು (ETV Bharat) ಸಿನಿಮಾ ವೀಕ್ಷಿಸಲು ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ವಿಚಾರದಲ್ಲೂ ಯು ಐ ಈಗಾಗಲೇ ದಾಖಲೆ ಬರೆದಿದೆ. ಕೇವಲ ಒಂದು ದಿನದೊಳಗೆ ಸಿನಿಮಾ 12.54K+ ಟಿಕೆಟ್‌ಗಳನ್ನು ಮಾರಾಟ ಮಾಡಿದೆ.
ಸಿನಿಮಾ ಬಿಡುಗಡೆಗೊಳಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಬಗ್ಗೆ ಪೋಸ್ಟ್ ಶೇರ್ ಮಾಡಿ, ಅಧಿಕೃತ ಮಾಹಿತಿ ಒದಗಿಸಿದೆ. ನಾಯಕ ನಟ ಉಪೇಂದ್ರ ಅವರನ್ನೊಳಗೊಂಡ ಪೋಸ್ಟರ್ ಹಂಚಿಕೊಂಡ ಕೆವಿಎನ್, ''ಆರಂಭಿಕ ಶೋಗಳು ದಾಖಲೆಗಳನ್ನು ಸ್ಮ್ಯಾಶ್ ಮಾಡುತ್ತಿವೆ! ಬುಕ್ ಮೈ ಶೋನಲ್ಲಿ ಕೇವಲ 24 ಗಂಟೆಗಳಲ್ಲಿ 12.54K+ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದೆ.
ಈವರೆಗೆ ಉಪೇಂದ್ರ ಅವರು ನಿರ್ದೇಶಿಸಿರುವ ಸಿನಿಮಾಗಳಲ್ಲೇ ಇದು ಬಿಗ್ ಬಜೆಟ್ ಚಿತ್ರ ಎನ್ನಲಾಗಿದೆ. 100 ಕೋಟಿ ರೂ. ಖರ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ, ತಾಂತ್ರಿಕವಾಗಿಯೂ ಸಿನಿಮಾ ಅಡ್ವಾನ್ಸ್ ಆಗಿರುತ್ತದೆ ಅನ್ನೋದು ಈಗಾಗಲೇ ಅನಾವರಣಗೊಂಡಿರುವ ಗ್ಲಿಂಪ್ಸ್, ಟೀಸರ್, ಸಾಂಗ್ನಲ್ಲಿ ತಿಳಿದುಬಂದಿದೆ.
ಸ್ಯಾಂಡಲ್ವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಈ ಸಿನಿಮಾಗಿದೆ. ಉಪೇಂದ್ರ ಅವರ ಜೊತೆ ರೀಷ್ಮಾ ನಾಣಯ್ಯ, ಸಾಧುಕೋಕಿಲ, ಆರ್ಮುಗ ರವಿಶಂಕರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜಂಟಿಯಾಗಿ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್ 20ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ:'ಸಾಚಾ ಆಟಗಳನ್ನು ನೋಡಿಕೊಂಡೇ ಬಂದಿರೋದು': ರಜತ್ ಹದ್ದು ಮೀರಿದ ವರ್ತನೆಗೆ ರೊಚ್ಚಿಗೆದ್ದ ಬಿಗ್ ಬಾಸ್ ಮನೆ!
ಉಪೇಂದ್ರ ಅವರ ಹಿಟ್ ಚಿತ್ರಗಳಲ್ಲೊಂದಾಗಿರುವ 'ಸೂಪರ್' ಚಿತ್ರದಲ್ಲಿ2030ರ ಭಾರತದ ಕಥೆ ಹೇಳಲಾಗಿತ್ತು. ಇದೀಗ ತಮ್ಮ ಮುಂಬರುವ ಬಹುನಿರೀಕ್ಷಿತ 'ಯು ಐ' ಚಿತ್ರದಲ್ಲಿ 2040ರ ವರ್ಷದಲ್ಲಿ ಭಾರತ ಹೇಗಿರಲಿದೆ ಎಂದು ಕಲ್ಪಿಸಿಕೊಳ್ಳಲಾಗಿದೆ. ನಾವು ನೀವೆಲ್ಲರೂ ಅನಗತ್ಯ ವಿಷಯಗಳ ಹಿಂದೆ ಬಿದ್ದಿದ್ದೇವೆ. ಇದರಿಂದ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವ ಸಂದೇಶವನ್ನು ಈ ಸಿನಿಮಾ ಸಾರಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಪ್ರಪಂಚ ವಿನಾಶದತ್ತ ಸಾಗುವ ಸಾಧ್ಯತೆಗಳಿವೆ, ಇನ್ನೂ ಜಾತಿ, ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೇವೆ ಎಂಬ ಹೊಸ ಆಲೋಚನೆಯೊಂದಿಗೆ ಈ ಕಥೆ ರೆಡಿ ಮಾಡಲಾಗಿದೆ.
ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ TO ರೆಹಮಾನ್, ಧನುಷ್: 2024ರಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸೆಲೆಬ್ರಿಟಿಗಳ ಡಿವೋರ್ಸ್ ಲಿಸ್ಟ್
ಇತ್ತಿಚೆಗೆ ಅನಾವರಣಗೊಂಡಿರುವ ಗ್ಲಿಂಪ್ಟ್ನಲ್ಲಿ "ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ" ಎನ್ನುವ ಒಂದೇ ಒಂದು ಡೈಲಾಗ್ ಇದೆ. ಇಡೀ ವಿಡಿಯೋದಲ್ಲಿರುವ ಈ ಒಂದು ಪವರ್ಫುಲ್ ಗ್ಲಿಂಪ್ಸ್ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚಿದ್ದು, ಸಿನೆಮಾ ಹಾಲ್ಗಳಲ್ಲಿ ಅದ್ಭುತ ಸಿನಿ ಅನುಭವ ಒದಗಿಸುವ ಭರವಸೆ ಇದೆ.