ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದೆ. ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ಗಳನ್ನು ಆಡಿಸಲಾಗಿದೆ. ಫಿನಾಲೆಗೆ ಎಂಟ್ರಿ ಕೊಡೋದ್ಯಾರು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿರುವ ಪ್ರೇಕ್ಷಕರಿಗೆ ಆಶ್ಚರ್ಯ ಎಂಬಂತೆ ಒಂದು ಸುದ್ದಿ ಸಿಕ್ಕಿದೆ. ಮೊದಲ ವಾರಗಳಲ್ಲಿ ಅದ್ಭುತವಾಗಿ ಆಡಿ ಗಮನ ಸೆಳೆದಿದ್ದ ಉಗ್ರಂ ಮಂಜು ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.
ಆಟಗಳಲ್ಲಿ ಉತ್ತಮ ಪರ್ಫಾಮೆನ್ಸ್ ಇದ್ದರೂ ಈ ವಾರದ ಕಳಪೆ ಉಗ್ರಂ ಮಂಜು ಅವರಿಗೆ ಸಿಕ್ಕಿದೆ. ಮನೆಯ ಎಲ್ಲ ಸ್ಪರ್ಧಿಗಳು ಮಂಜು ಅವರ ಹೆಸರನ್ನೇ ತೆಗೆದುಕೊಂಡಿರೋದು ನೋಡುಗರ ಹುಬ್ಬೇರಿಸಿದೆ. 'ಮನೆಯವರೆಲ್ಲರ ಬಾಯಲ್ಲಿ ಬಂದಿದ್ದು ಒಂದೇ ಹೆಸರು!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸೋ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
ಪ್ರೋಮೋದಲ್ಲಿ, ಧನರಾಜ್, ಮೋಕ್ಷಿತಾ, ಹನುಮಂತು, ಚೈತ್ರಾ ಕುಂದಾಪುರ, ಗೌತಮಿ ಜಾಧವ್ ಅವರುಗಳು ಧನರಾಜ್ ಹೆಸರನ್ನು ತೆಗೆದುಕೊಂಡಿದ್ದಾರೆ. ನಂತರ, ಎಲ್ಲೋ ಮಂಜಪ್ಪ ಕಾಕಾ ಕಳೆದು ಹೋಗ್ತಿದ್ದಾರೆ ಎಂದು ಹನುಮಂತು ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಮೋಕ್ಷಿತಾ ಮಾತನಾಡಿ, ಆಟನಾ ಆಟದ ತರ ನೋಡ್ಲಿಲ್ಲ. ತುಂಬಾನೇ ವೈಯಕ್ತಿಕವಾಗಿ ತಗೊಂಡ್ ಆಡಿದ್ರಿ ಅಂತಾ ನನಗೆ ಅನಿಸ್ತು. ಅದರ ಗಿಫ್ಟ್ ಇದು ನನಗೆ ಎಂದು ತಮ್ಮ ಕೈಯಲ್ಲಾದ ಗಾಯವನ್ನು ತೋರಿಸಿದರು. ಮತ್ತೊಂದೆಡೆ ಆಪ್ತ ಸ್ನೇಹಿತೆ ಗೌತಮಿ ಜಾಧವ್ ಮಾತನಾಡಿ, ಈ ಮನೆಯಲ್ಲಿರೋ ಲಾಸ್ಟ್ ಸೆಕೆಂಡ್ವರೆಗೂ ನಮಗೆ ನಾವು ನಿಂತ್ಕೊಳ್ಳೇಬೇಕಾಗುತ್ತೆ. ಅದನ್ನು ನೀವು ಮಾಡ್ತಾ ಇಲ್ಲ. ಇನ್ನು ರಜತ್ ಮಾತನಾಡಿ, ಟಾಸ್ಕ್ ಅಂತಾ ಬಂದಾಗ ನನಗೆ ಒಂದೊಂದ್ ಸರಿ ಭಯವಾಗ್ತಿತ್ತು. ಹಿಂಸೆ ಆಗಿ ತಲೆ ಕೆಟ್ಟೋಗಿರೋದೂ ಇದೆ, ನಿಮ್ಮ ಲಾಕ್ಗಳಲ್ಲಿ ಎಂದು ತಿಳಿಸಿದ್ದಾರೆ. ನಂತರ ಕಳಪೆ ಔಟ್ಫಿಟ್ ಧರಿಸಿ ಜೈಲಿನೊಳಗೆ ಹೋಗಿದ್ದಾರೆ. ಕಳಪೆ ಕೊಟ್ಟಮೇಲೆ ಹೋಗಿ ಮಾತಾಡೋದಕ್ಕೆ ತುಂಬಾನೇ ಹಿಂಸೆ ಆಗುತ್ತೆ ಎಂದು ಭವ್ಯಾ ಅವರು ಚೈತ್ರಾರ ಬಳಿ ಹೇಳಿಕೊಂಡಿದ್ದಾರೆ. ಮಂಜು ಜೈಲಿನೊಳಗಿದ್ದರೆ, ಹೊರಗೆ ಗೆಳತಿ ಗೌತಮಿ ಕುಳಿತು ಸಾಥ್ ನೀಡಿದ್ದಾರೆ.