ಕರ್ನಾಟಕ

karnataka

ETV Bharat / entertainment

ಗೆಳೆಯನೊಂದಿಗೆ ಪ್ರೀ ಬರ್ತ್​​ಡೇ ಸೆಲೆಬ್ರೇಟ್​​ ಮಾಡಿಕೊಂಡ ಹೀನಾ ಖಾನ್ - Hina Khan with Boyfriend Rocky - HINA KHAN WITH BOYFRIEND ROCKY

ಟಿವಿ ತಾರೆ ಹೀನಾ ಖಾನ್ ಅವರು ಅಕ್ಟೋಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅದಕ್ಕೂ ಮೊದಲು ಗೋವಾದಲ್ಲಿ ಗೆಳೆಯ ರಾಕಿ ಜೈಸ್ವಾಲ್ ಅವರೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ. ಇನ್​​​ಸ್ಟಾಗ್ರಾಮ್​ನಲ್ಲಿಂದು ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Hina Khan with boyfriend Rocky Jaiswal
ಗೆಳೆಯ ರಾಕಿ ಜೈಸ್ವಾಲ್ ಜೊತೆ ಹೀನಾ ಖಾನ್ (Photo: IANS)

By ETV Bharat Entertainment Team

Published : Sep 25, 2024, 2:40 PM IST

ಹೈದರಾಬಾದ್: ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ'' ಧಾರಾವಾಹಿ ಮೂಲಕ ವ್ಯಾಪಕವಾಗಿ ಹೆಸರುವಾಸಿಯಾಗಿರುವ ಕಿರುತೆರೆ ತಾರೆ ಹೀನಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರೊಂದಿಗೆ ಗೋವಾದಲ್ಲಿ ಉತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. ನಟಿ ಈಗಾಗಲೇ ತಮ್ಮ ಪ್ರೀ ಬರ್ತ್​​ಡೇ ಸೆಲೆಬ್ರೇಶನ್​ ಶುರು ಮಾಡಿದ್ದಾರೆ.

ಅಕ್ಟೋಬರ್ 2 ರಂದು ಹೀನಾ ಖಾನ್​​ ಜನ್ಮದಿನ ಆಚರಿಸಿಕೊಳ್ಳಲಿದ್ದು, ಅದಕ್ಕೂ ಮೊದಲು ನಟಿ ಇಂದು ತಮ್ಮ ಸ್ಪೆಷಲ್​​​ ಫೋಟೋ ಶೇರ್ ಮಾಡಿದ್ದಾರೆ. ಬುಧವಾರ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಸ್ಟೋರಿ ಸೆಕ್ಷನ್​​​ನಲ್ಲಿ ರಿಲ್ಯಾಕ್ಸಿಂಗ್​ ಫೋಟೋ ಹಂಚಿಕೊಂಡಿದ್ದಾರೆ.

ಹೀನಾ ಖಾನ್ ಇನ್​ಸ್ಟಾಗ್ರಾಮ್​ ಸ್ಟೋರಿ (Hina Khan's Instagram Story)

ಹೀನಾ ಅವರು ತಮ್ಮ ಗೋವಾ ಪ್ರವಾಸದ ಹಲವು ಫೋಟೋಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರ ಹೋಟೆಲ್, ಕ್ಯಾಂಡಲ್​​ ಲೈಟ್​​ ಡಿನ್ನರ್ ಕ್ಷಣಗಳನ್ನು ಈ ಫೋಟೋಗಳಲ್ಲಿ ಕಾಣಬಹುದು. ಗ್ರೀನ್​ ಫುಲ್​ ಸ್ಲೀವ್ಸ್ ಡ್ರೆಸ್ ತೊಟ್ಟು ಕ್ಲಿಕ್ಕಿಸಿಕೊಂಡಿರುವ ಸ್ಪೆಲ್ಫಿ ಬಹಳ ಸುಂದರವಾಗಿದೆ. ಒಂದು ಚಿತ್ರದಲ್ಲಿ, ನಟಿ ಗೆಳೆಯ ರಾಕಿ ಜೊತೆ ಎಂಜಾಯ್​​ ಮಾಡುತ್ತಿರೋದನ್ನು ಕಾಣಬಹುದು. ಪ್ರತೀಕ್ ಕುಹಾದ್ ಅವರ ಕದಮ್ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದು, ನಟಿಯ ಧೈರ್ಯ ಮತ್ತು ಕಾಯಿಲೆ ವಿರುದ್ಧ ಹೋರಾಡುವ ಮನಸ್ಥಿತಿಯ ಸಾರವನ್ನು ಸೆರೆಹಿಡಿದಿದೆ.

ನಟಿ ಯಾವಾಗಲೂ ತಮ್ಮ ಆನ್-ಸ್ಕ್ರೀನ್ ಪ್ರತಿಭೆ ಮತ್ತು ಸ್ಥಿತಿಸ್ಥಾಪಕತ್ವ ಗುಣದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮೆಚ್ಚಿಸುತ್ತಿದ್ದರೂ ಕೂಡಾ ಅವರ ಆಫ್-ಸ್ಕ್ರೀನ್ ಪ್ರಯಾಣ ಬಹಳ ಸವಾಲುಗಳಿಂದ ಕೂಡಿದೆ. ಕೆಲ ದಿನಗಳ ಹಿಂದೆ, ಹೀನಾ ಖಾನ್​​ ಮೂರನೇ ಹಂತದ ಸ್ತನ ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಈ ಸುದ್ದಿ ಅವರ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿತ್ತು. ಆದ್ರೆ ಬಹಳ ಧೈರ್ಯದಿಂದ ನಟಿ ಕಾಯಿಲೆ ವಿರುದ್ಧ ಹೋರಾಡುತ್ತಿದ್ದು, ಬಹಿರಂಗವಾಗಿ ತಮ್ಮ ಕಥೆಯನ್ನು ಹಂಚಿಕೊಳ್ಳುತ್ತಿದ್ದಾರೆ. ತಾರೆಯ ಸಕಾರಾತ್ಮಕ ದೃಷ್ಟಿಕೋನ ಅನೇಕರನ್ನು ಪ್ರೇರೇಪಿಸಿದೆ.

ಇದನ್ನೂ ಓದಿ:ಬಿಗ್ ಬಾಸ್ ಹೊಸ ಅಧ್ಯಾಯ: ಸುದೀಪ್​ ಸೂತ್ರಧಾರಿ, ವೀಕ್ಷಣೆಗೆ ನೀವ್​ ರೆಡಿನಾ? - Bigg Boss Kannada

ಚಿಕಿತ್ಸೆಗೆ ಒಳಗಾಗಿದ್ದರೂ, ಹೀನಾ ಜೀವನವನ್ನು ಬಹಳ ಪಾಸಿಟಿವ್​ ಆಗಿ ಮುಂದುವರಿಸಿದ್ದಾರೆ. ಆಗಾಗ್ಗೆ ತಮ್ಮ ಪ್ರಯಾಣದ ಬಗ್ಗೆ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ನಟಿಯ ಈ ಗುಣ ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಸಂಪಾದಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಪ್ರೀತಿ ಮತ್ತು ಬೆಂಬಲ ಸ್ವೀಕರಿಸುತ್ತಾರೆ. ಜೊತೆಗೆ ಫ್ಯಾನ್ಸ್​ಗೆ ಧನ್ಯವಾದ ಅರ್ಪಿಸುತ್ತಾರೆ.

ಇದನ್ನೂ ಓದಿ:8 ವರ್ಷದ ದಾಂಪತ್ಯಕ್ಕೆ ಬ್ರೇಕ್​: ವಿಚ್ಛೇದನಕ್ಕೆ ಮುಂದಾದ ರಂಗೀಲಾ ನಟಿ ಊರ್ಮಿಳಾ ಮಾತೋಂಡ್ಕರ್ - Urmila Matondkar Mohsin Divorce

ನಟಿಯ ಹುಟ್ಟುಹಬ್ಬ ಸಮೀಪಿಸುತ್ತಿದೆ. ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದರಲ್ಲೂ ಪ್ರೀ ಬರ್ತ್​ಡೇ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ, ಈ ಬಾರಿಯ ಜನ್ಮದಿನಾಚರಣೆ ಹೇಗಿರಬಹುದೆಂದು ಅಭಿಮಾನಿಗಳು ಉತ್ಸಾಹ ತೋರುತ್ತಿದ್ದಾರೆ. ನಟಿಯಾಗಿ ಮತ್ತು ಗಂಭೀರ ಆರೋಗ್ಯ ಸಮಸ್ಯೆ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ಅವರ ಧೈರ್ಯವು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದೆ.

ABOUT THE AUTHOR

...view details