ಕರ್ನಾಟಕ

karnataka

ETV Bharat / entertainment

'ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಸೀಸನ್‌ 2 ಟೀಸರ್‌ ರಿಲೀಸ್ - Prime Video Series - PRIME VIDEO SERIES

''ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌''ನ ಹೊಸ ಸೀಸನ್​​​ನ ಟೀಸರ್ ಬಿಡುಗಡೆ ಆಗಿದೆ.

'The Lord of The Rings: The Rings of Power '
'ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' (ETV Bharat)

By ETV Bharat Karnataka Team

Published : May 15, 2024, 4:02 PM IST

ಅತ್ಯಂತ ಜನಪ್ರಿಯ ಸೀರಿಸ್‌ ''ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌''ನ ಎರಡನೇ ಸೀಸನ್​​​ನ ಟೀಸರ್ ಇಂದು ಅನಾವರಣಗೊಂಡಿದೆ. ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ. ಅಲ್ಲದೇ, ಪ್ರೈಮ್ ವಿಡಿಯೋದ ಅತ್ಯುನ್ನತ ಒರಿಜಿನಲ್ ಸೀರಿಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕೂ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಈ ಸೀರಿಸ್​​ ಕಂಡಿದೆ.

2024ರ ಆಗಸ್ಟ್‌ 29ರಂದು ಎರಡನೇ ಸೀಸನ್‌ ಜಾಗತಿಕವಾಗಿ ಪ್ರಸಾರ ಪ್ರಾರಂಭಿಸಲಿದೆ ಎಂದು ಪ್ರೈಮ್ ವಿಡಿಯೋ ಘೋಷಿಸಿದೆ. ಇದು ವಿಶ್ವದ ಹೆಚ್ಚು ಪ್ರದೇಶಗಳಲ್ಲಿ, ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹೊಸ ಸೀಸನ್‌ನ ಟೀಸರ್ ಅನಾವರಣಗೊಂಡಿದ್ದು, ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್‌ ಪಾತ್ರದಲ್ಲಿ ಚಾರ್ಲಿ ವಿಕರ್ಸ್‌ ವಾಪಸ್ ಬರುವುದನ್ನು ಇದು ಚಿತ್ರಿಸಿದೆ.

ಅವರು ಈ ಸೀರಿಸ್​​ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೀಸರ್ ಪ್ರೇಕ್ಷಕರನ್ನು ಹೊಸ ಪಯಣವೊಂದಕ್ಕೆ ಕರೆದೊಯ್ಯಲಿದೆ. ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿಯನ್ನು ಇಲ್ಲಿ ಕಾಣಬಹುದು. ದೃಶ್ಯ ವೈಭವಕ್ಕೆ ಹೆಸರಾಗಿರುವ ಈ ಸೀರಿಸ್​ನಲ್ಲಿ ಅತ್ಯಂತ ಜನಪ್ರಿಯ ಪಾತ್ರಗಳಿವೆ. ಗ್ಯಾಲಾಡ್ರಿಯೆಲ್‌, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್‌ ಅವರನ್ನು ಇದು ಒಳಗೊಂಡಿದ್ದು, ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ

'ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' (ETV Bharat)

’ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್‌ ಆಫ್ ಪವರ್‘ ಎರಡನೇ ಸೀಸನ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ . ದಿ ಲಾರ್ಡ್‌ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಎರಡನೇ ಸೀಸನ್‌ನ ಟೀಸರ್, ಟ್ರೇಲರ್ ನೋಡಲು ಮತ್ತು ಡೌನ್‌ಲೋಡ್ ಮಾಡಲು ಹಾಗೂ ಹೆಚ್ಚುವರಿ ಸೀರಿಸ್​ ಮಾಹಿತಿಗಾಗಿ, ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಪ್ರೆಸ್ ಸೈಟ್‌ಗೆ ಭೇಟಿ ಕೊಡಬಹದು.

ಇದನ್ನೂ ಓದಿ:ಚಂದು ಚಾಂಪಿಯನ್‌ ಪೋಸ್ಟರ್​: ದೈಹಿಕ ರೂಪಾಂತರಕ್ಕೆ ಒಳಗಾದ ಕಾರ್ತಿಕ್ ಆರ್ಯನ್ - Chandu Champion Poster

ಸದ್ಯ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮನೆಯಲ್ಲೇ ಕುಳಿತು ಸಿನಿಮಾ, ಸೀರಿಸ್​​ ನೋಡಲು ಇಚ್ಛಿಸುತ್ತಾರೆ. ಕೆಲ ಸೀರಿಸ್​​​ಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶ ಕಾಣುತ್ತವೆ. ಅದರಂತೆ, ''ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌'' ಸಾಕಷ್ಟು ಜನಪ್ರಿಯವಾಗಿದ್ದು, ಹೊಸ ಸೀಸನ್​ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ರಾಮ್ ಪೋತಿನೇನಿ ಭರ್ಜರಿ ಆ್ಯಕ್ಷನ್: ಕ್ರೇಜಿಯಾಗಿದೆ ಡಬಲ್ ಇಸ್ಮಾರ್ಟ್ ಟೀಸರ್ - Double iSmart

ABOUT THE AUTHOR

...view details