ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ 'ವಿಡಾಮುಯರ್ಚಿ' ಫೆಬ್ರವರಿ 6ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಸಿನಿಮಾ ಬಿಡುಗಡೆಯಾದ 14 ದಿನಗಳಲ್ಲಿ 79.35 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ 1997ರ ಅಮೆರಿಕನ್ ಥ್ರಿಲ್ಲರ್ 'ಬ್ರೇಕ್‌ಡೌನ್'ನಿಂದ ಪ್ರೇರಿತವಾಗಿದ್ದು, ತನ್ನ ಹೈ-ಆ್ಯಕ್ಟೇನ್ ಆ್ಯಕ್ಷನ್ ಮತ್ತು ಕಥಾಹಂದರದಿಂದ ಮೆಚ್ಚುಗೆ ಪಡೆದುಕೊಂಡಿದೆ.
ನಟನ ಅಪಾರ ಸಂಖ್ಯೆಯ ಅಭಿಮಾನಿಗಳಿಗಾಗಿ, ಚಿತ್ರದ ಒಟಿಟಿ ಬಿಡುಗಡೆಯ ಕುರಿತು ಒಂದು ಕುತೂಹಲಕಾರಿ ಅಪ್ಡೇಟ್ ಇಲ್ಲಿದೆ. ಮಾಗಿಜ್ ತಿರುಮೇನಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವೀಗ ಹೆಚ್ಚಿನ ಪ್ರೇಕ್ಷಕರನ್ನು ತಲುಪೋ ಸಲುವಾಗಿ ಒಟಿಟಿ ಬಿಡುಗಡೆಯತ್ತ ಗಮನ ಹರಿಸಿದೆ. ಹೌದು, 'ವಿಡಾಮುಯರ್ಚಿ' ಮಾರ್ಚ್ 28ರಂದು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ.
ನಿಖರ ವಿವರಗಳನ್ನು ಚಿತ್ರ ತಯಾರಕರಿನ್ನೂ ದೃಢೀಕರಿಸದಿದ್ದರೂ, ನೆಟ್‌ಫ್ಲಿಕ್ಸ್ ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿರೋದು ಖಚಿತ. ಚಿತ್ರಮಂದಿರಗಳಲ್ಲಿನ್ನೂ ಸಿನಿಮಾ ನೋಡದ ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ಥ್ರಿಲ್ಲಿಂಗ್, ಆ್ಯಕ್ಷನ್, ಸಸ್ಪೆನ್ಸ್ ಸಿನಿಮಾ ನೋಡಬಹುದಾಗಿದೆ.