ಕರ್ನಾಟಕ

karnataka

ETV Bharat / entertainment

'ಚಿತ್ರರಂಗ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಬೇಕು': ಮಲಯಾಳಂ ಚಿತ್ರರಂಗದ ಕರಾಳತೆ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಪ್ರತಿಕ್ರಿಯೆ - Prithviraj Sukumaran - PRITHVIRAJ SUKUMARAN

ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಗಂಭೀರ ಸಮಸ್ಯೆಗಳನ್ನು ಬಹಿರಂಗಪಡಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಗ್ಗೆ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ಪ್ರತಿಕ್ರಿಯಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘವು ಬಂದ ಆರೋಪ, ದೂರುಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

Prithviraj Sukumaran
ಪೃಥ್ವಿರಾಜ್ ಸುಕುಮಾರನ್ (ETV Bharat)

By ETV Bharat Karnataka Team

Published : Aug 27, 2024, 1:44 PM IST

ಹೈದರಾಬಾದ್: ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಯಲಿಗೆ ಎಳೆದಿದೆ. ಕೇರಳ ಚಿತ್ರರಂಗದ ಪರಿಸ್ಥಿತಿ, ಲೈಂಗಿಕ ಕಿರುಕುಳ ಆರೋಪಗಳು ಸೇರಿದಂತೆ ಗಂಭೀರ ಅಂಶಗಳನ್ನೊಳಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಉದ್ದೇಶಿಸಿ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಮಾತನಾಡಿದ್ದಾರೆ.

ಕೊಚ್ಚಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್​​, ಘಟನೆಗೆ ಸಂಬಂಧಿಸಿದಂತೆ ಕಠಿಣ ತನಿಖೆ ನಡೆಸಬೇಕು ಮತ್ತು ದುಷ್ಕೃತ್ಯದ ಆರೋಪ ಹೊತ್ತಿರುವವರು ನಿರಪರಾಧಿಗಳು ಎಂದು ಸಾಬೀತಾಗುವವರೆಗೆ ಅವರು ಅಂತರ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಬಗ್ಗೆ ನಿರಾಸೆ ವ್ಯಕ್ತಪಡಿಸಿದರು. ಘಟನೆಗಳ ಕುರಿತು ಸಂಘದ ಅಸಮರ್ಪಕ ಪ್ರತಿಕ್ರಿಯೆ ಬಗ್ಗೆ ಟೀಕಿಸಿದರು. ನಿರ್ದೇಶಕ ತುಳಸಿದಾಸ್ ವಿರುದ್ಧದ ಅವರ ಸಹನಟಿ ಶ್ರೀದೇವಿಕಾ ಅವರ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸಂಘ ವಿಫಲವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.

ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆಯ ಅಗತ್ಯತೆ ಒತ್ತಿ ಹೇಳಿದ ಪೃಥ್ವಿರಾಜ್, ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಸೂಚಿಸಿದರು. ಜೊತೆಗೆ ಆರೋಪಿಸುವವರ (ವಿಶೇಷವಾಗಿ ನಟಿಯರು) ಹೆಸರನ್ನು ಬಹಿರಂಗಪಡಿಸಬಾರದು ಎಂಬುದನ್ನೂ ತಿಳಿಸಿದ್ದಾರೆ. ವೈಯಕ್ತಿಕವಾಗಿ ಉದ್ಯಮದೊಳಗೆ ಪ್ರಭಾವಶಾಲಿ ಗುಂಪು ಎದುರು ಹಾಕಿಕೊಳ್ಳದಿದ್ದರೂ, ಯಾವುದೇ ಶಕ್ತಿ ರೂಲ್​​ ಮಾಡುವಂತಿರಬಾರದು ಎಂಬುದಾಗಿ ತಿಳಿಸಿದ್ದಾರೆ. ಮಲಯಾಳಂ ಚಿತ್ರರಂಗವನ್ನು ಆ ಪವರ್​ಫುಲ್​​ ಗುಂಪಿನಿಂದ ಮುಕ್ತಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕಿದೆ ಎಂಬುದನ್ನು ತಿಳಿಸಿದ್ದಾರೆ.

ಚಿತ್ರರಂಗ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಬೇಕು. ಇದನ್ನು ಖಚಿತಪಡಿಸಿಕೊಳ್ಳುವಲ್ಲಿ ಉದ್ಯಮದ ವೃತ್ತಿಪರರು ಮತ್ತು ಮಾಧ್ಯಮಗಳ ಪಾತ್ರವಿದೆ ಎಂದು ನಟ ಒತ್ತಿ ಹೇಳಿದರು. ಲೈಂಗಿಕ ಕಿರುಕುಳದ ಆರೋಪದ ನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ತಮ್ಮ ಸ್ಥಾನಕ್ಕೆ ಸಿದ್ದಿಕ್ ರಾಜೀನಾಮೆ ನೀಡಿರುವುದನ್ನು ಪೃಥ್ವಿರಾಜ್ ಸೂಕ್ತ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಹುದ್ದೆಯಲ್ಲಿರುವವರು ಆರೋಪ ಎದುರಾದಾಗ ತಮ್ಮ ಸ್ಥಾನದಿಂದ ಕೆಳಗಿಳಿದು ತನಿಖೆ ಎದುರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತಪ್ಪಿತಸ್ಥರೆಂದು ಕಂಡು ಬಂದಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಸಹ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಅಂಥವರಿಗೂ ಶಿಕ್ಷೆಯಾಗಲಿ ಎಂದು ಪೃಥ್ವಿರಾಜ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ದೀರ್ಘಕಾಲದಿಂದ ಅನಾರೋಗ್ಯಕ್ಕೊಳಗಾಗಿದ್ದ ತಮಿಳು ನಟ ಬಿಜಿಲಿ ರಮೇಶ್ ನಿಧನ - Bijili Ramesh Passes Away

ಇನ್ನು ನಿರ್ದೇಶಕ ರಂಜಿತ್ ವಿರುದ್ಧ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 2009ರಲ್ಲಿ ಸಿನಿಮಾವೊಂದರ ಪಾತ್ರದ ಕುರಿತು ಚರ್ಚಿಸಲು ತೆರಳಿದ್ದ ಸಂದರ್ಭ ನಿರ್ದೇಶಕರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರೆಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:'ನಟಿಯರಿಗೆ ಶಿಕ್ಷೆ': ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಯಲಿಗೆಳೆದ ಹೇಮಾ ಸಮಿತಿ ವರದಿ - Hema Committee Report

ABOUT THE AUTHOR

...view details