ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್​: ಮಾಜಿ ಸ್ಪರ್ಧಿಗಳ ವರ್ತನೆಗೆ ಸುದೀಪ್​ ಗರಂ - ವಿಡಿಯೋ ನೋಡಿ - sudeep

''ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?'' ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ರಿವೀಲ್​ ಆಗಿದೆ.

sudeep
ಸುದೀಪ್​

By ETV Bharat Karnataka Team

Published : Jan 20, 2024, 5:26 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 10' ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಈ ಶೋ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದು, ಫಿನಾಲೆ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಾರಾಂತ್ಯ ಪ್ರಸಾರವಾಗುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಸಪರೇಟ್​ ಫ್ಯಾನ್​ ಬೇಸ್​ ಇದ್ದು, ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲಭರಿತರಾಗಿದ್ದಾರೆ.

ಬಿಗ್​ ಬಾಸ್​ ಪ್ರೋಮೋ: ''ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?'' ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್​​ ಗರಂ ಆಗಿರೋದನ್ನು ಕಾಣಬಹುದು. ಮುಂದೇನಾಗಬಹುದು? ಎಂಬ ಕುತೂಹಲ ಪ್ರೋಮೋ ವೀಕ್ಷಿಸಿದ ನೆಟ್ಟಿಗರದ್ದು.

ಮಂಗಳವಾರ ಬಿಗ್​ ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳು ಎಂಟ್ರಿ ಕೊಟ್ಟು ಹೋಗಿದ್ದರು. ಅಂತಿಮ ಘಟ್ಟ ತಲುಪಿದ ಹಿನ್ನೆಲೆ, ಕೆಲ ದಿನಗಳಿಂದ 'ಬಿಗ್​ ಬಾಸ್' ಮನೆ ಮಂದಿಗೆ ಸರ್​​ಪ್ರೈಸ್​​ ಕೊಡುತ್ತಲೇ ಇದ್ದಾರೆ.​ ಸ್ಪರ್ಧಿಗಳ ಕುಟುಂಬಸ್ಥರು, ಜನಪ್ರಿಯ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅದರಂತೆ ಈ ಸೀಸನ್​ನಲ್ಲಿ ಭಾಗವಹಿಸಿ ಎಲಿಮಿನೇಟ್​​ ಆದವ್ರೂ ಕೂಡ ಮಂಗಳವಾರ ಆಗಮಿಸಿದ್ದರು. ಮನೆಯಲ್ಲಿ ಉಳಿದುಕೊಂಡಿರೋ ಸ್ಪರ್ಧಿಗಳ ಆತ್ಮವಿಶ್ವಾಸ ತುಂಬೋ ನಿಟ್ಟಿನಲ್ಲಿ ಎಲಿಮಿನೇಟೆಡ್​ ಕಂಟಸ್ಟೆಂಟ್​ಗಳನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಆದ್ರೆ ಆಗಿದ್ದೇ ಬೇರೆ.

ತನಿಶಾ, ರಕ್ಷಕ್​, ಪ್ರತಾಪ್​​ ವರ್ತನೆ ಮನೆಯಲ್ಲಿ ಉಳಿದುಕೊಂಡಿರೋ ಕೆಲ ಸ್ಪರ್ಧಿಗಳಿಗೆ ಘಾಸಿ ಮಾಡಿದೆ ಎಂಬ ಆರೋಪವಿದೆ. ತನಿಶಾ ಅವರಂತೂ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲ, ಬಿಗ್​ ಬಾಸ್​ ತಂಡಕ್ಕೂ, ನಿರೂಪಕ ಸುದೀಪ್​ ಅವರಿಗೂ ಅಸಮಾಧಾನ ಆದಂತೆ ತೋರುತ್ತಿದೆ. ಅದರ ಸುಳಿವು ಇಂದು ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಂಡುಬಂದಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು

ಕಿಚ್ಚ ಸುದೀಪ್​​ ಗರಂ ಆಗಿರೋದನ್ನು ಪ್ರೋಮೋದಲ್ಲಿ ಕಾಣಬಹುದು. 'ಕಾಗೆ ಕ... ಮಾಡ್ಕೊಂಡು, ಸಿಂಪಥಿಯಿಂದ ಗೆದ್ದುಕೊಂಡು ಬಂದಿದೆ' ಎಂದು ಇಶಾನಿ ಹೇಳಿದ್ದ ಡೈಲಾಗ್​ ಹೇಳಿದ ಕಿಚ್ಚ, ವಾವ್ ಇಶಾನಿ ಎಂದು ಕೈ ತೋರಿಸಿದ್ದಾರೆ. 'ಯಾವ ಆ್ಯಂಗಲ್​ನಲ್ಲಿ ನೀವು ಸೋತು ಹೊರಹೋಗಿ, ಕಲ್ತು ಒಳಗೆ ಬಂದಿದ್ದೀರಿ ಅನಿಸುತ್ತೆ ಎಂದು ಹೇಳಿ' ಅಂತಾ ಸುದೀಪ್​ ಪ್ರಶ್ನಿಸಿದ್ದಾರೆ. 'ಸ್ನೇಹಿತ್​ ಏನಂದ್ರು' ಅಂತಾ ನಮ್ರತಾರಲ್ಲಿ ಸುದೀಪ್​ ಪ್ರಶ್ನಿಸಿದ್ದಾರೆ. 'ಹೊರಗೆ ನಿಮಗಾಗಿ ಹೋರಾಡುತ್ತಿರುವೆ' ಎಂದು ಸ್ನೇಹಿತ್​ ತಿಳಿಸಿದ್ರು ಅಂತಾ ನಮ್ರತಾ ಉತ್ತರಿಸಿದ್ದಾರೆ. 'ಏನ್​​ ನಡೆದಿದೆ ಹೊರಗಡೆ?' ಎಂದು ಸುದೀಪ್​ ಮತ್ತೆ ಕೈ ತೋರಿಸಿದ್ದಾರೆ. ಇನ್ನೊಬ್ರು ಬರ್ತಾರೆ, ರಕ್ಷಕ್​ ಅಲ್ವಾ ಆ ಸ್ಪರ್ಧಿ ಹೆಸ್ರು? ಅಂತಾ ತಮ್ಮದೇ ಸ್ಟೈಲ್​ನಲ್ಲಿ ಕಿಚ್ಚ ಟಾಂಟ್​ ಇಟ್ಟಿದ್ದಾರೆ. ಚೆನ್ನಾಗಿ ಇಟ್ಟಿರ್ಲಿ ಆ ದೇವ್ರು ನಿಮ್ಮನ್ನ ಎಂದು ಹೇಳಿರೋದನ್ನು ಪ್ರೋಮೋದಲ್ಲಿ ಕಾಣಬಹುದು.

ಇದನ್ನೂ ಓದಿ:ಶ್ರೀ ಅಭಿನಯದ 'ಜಸ್ಟ್ ಪಾಸ್' ಸಿನಿಮಾಗೆ ಶಾಸಕ ಪ್ರದೀಪ್ ಈಶ್ವರ್ ಸಾಥ್

ABOUT THE AUTHOR

...view details